Home Entertainment BiggBoss Kannada : ಬಿಗ್‌ಬಾಸ್‌ನಲ್ಲಿ ಜೋಡಿಗಳಾಗಿ ಹೆಸರು ಮಾಡಿದವರು ಇವರೇ ನೋಡಿ

BiggBoss Kannada : ಬಿಗ್‌ಬಾಸ್‌ನಲ್ಲಿ ಜೋಡಿಗಳಾಗಿ ಹೆಸರು ಮಾಡಿದವರು ಇವರೇ ನೋಡಿ

Hindu neighbor gifts plot of land

Hindu neighbour gifts land to Muslim journalist

ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟ ಎಲ್ಲರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬಿಗ್ ಬಾಸ್ ಮನೆಯಲ್ಲಿ ಆಟಗಳು ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದ್ದು, ತಮಾಷೆ, ಜಗಳ , ಲವ್ ಕಹಾನಿ ಗಳು ಕೂಡ ನಡೆದು, ಕನ್ನಡದಲ್ಲಿ ಬಿಗ್ ಬಾಸ್ (Bigg Boss) ಸೀಸನ್ ಶುರುವಾದಾಗಿನಿಂದ ಕಿಚ್ಚ ಸುದೀಪ್ ಅವರೇ ಸಾರಥ್ಯ ವಹಿಸಿಕೊಂಡು ಬಂದಿದ್ದಾರೆ.

ಬಿಗ್ ಬಾಸ್ ಗೆ ಹೋದ ಮೇಲೆ ಕೆಲವರು ಲವ್ ಬರ್ಡ್ಸ್ ನಂತೆ ಇದ್ದು, ಅದರಲ್ಲಿ ಕೆಲವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ, ಮತ್ತೆ ಕೆಲವು ಲವ್ ಸ್ಟೋರಿ ಬ್ರೇಕ್ ಅಪ್ ಆಗಿದ್ದು ಇದೆ. ಈ ಬಿಗ್ ಬಾಸ್ ಜರ್ನಿಯ ಲವ್ ಬರ್ಡ್ಸ್ ಗಳು ಎಂದು ಗುರುತಿಸಿಕೊಂಡ ಜೋಡಿಗಳ ಲಿಸ್ಟ್ ಮಾಡುತ್ತಾ ಹೋದರೆ ಹೀಗೆ ಇರಬಹುದೇನೋ! ಇವರೆಲ್ಲ ಬಿಗ್ ಬಾಸ್ ಮನೆಯ ಜನಪ್ರಿಯ ಜೋಡಿಗಳು ಎಂದು ಫೇಮಸ್ ಆದವರು.

ಅದರಲ್ಲಿ ಕೂಡ ಶ್ವೇತಾ ಮತ್ತು ತಿಲಕ್ ಬಿಗ್ ಬಾಸ್ 1ರ ಸ್ಪರ್ಧಿಗಳಾಗಿದ್ದು, ಈ ಜೋಡಿ ಕೂಡ ಜನರ ದಿಲ್ ಕದ್ದು ಕೆಲವರ ಪಾಲಿನ ಫೇವರೇಟ್ ಕಪಲ್ ಕೂಡ ಆಗಿದ್ದರು. ಇಬ್ಬರು ತುಂಬಾ ಕ್ಲೋಸ್ ಆಗಿದ್ದು ನೋಡಿ ಕೆಲವರು ಇದೆಲ್ಲ ಕೆಲ ದಿನಗಳ ಆಟ ಎನ್ನುವ ವಿಚಾರ ಹಬ್ಬಿತ್ತು.

ಆ ಬಳಿಕದ ಸೀಸನ್, ಬಿಗ್ ಬಾಸ್ ಸೀಸನ್ 3ರಲ್ಲಿ ಕ್ರಿಕೆಟಿಗ ಅಯ್ಯಪ್ಪ ಮತ್ತು ನಟಿ ಪೂಜಾ ಗಾಂಧಿ ತುಂಬಾ ಕ್ಲೋಸ್ ಇದ್ದು ಬಿಗ್ ಬಾಸ್ ಮನೆಯಿಂದ ಕಾಲಿಟ್ಟ ಕೂಡಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕೂಡ ಜೋರಾಗಿ ಸದ್ದು ಮಾಡಿತ್ತು.

ಬಿಗ್ ಬಾಸ್ ಸೀಸನ್ 4 ರಲ್ಲಿ ಸಂಜನಾ ಮತ್ತು ಭುವನ್ ಮಧ್ಯೆ ಪ್ಯಾರ್ ಗೆ ಆಗ್ಬಿಟ್ಟಿದೆ ಎನ್ನುವ ಸಂಗತಿ ಬಹಿರಂಗವಾಗಿತ್ತು. ಇಬ್ಬರು ಆತ್ಮೀಯವಾಗಿದ್ದ ಸಂದರ್ಭ ಪ್ರಥಮ್ ಕೂಡ ಸಂಜನಾ ಅವರ ಮೇಲೆ ಲವ್ ಆಗಿ ಟ್ರೈಯಂಗಲ್ ಲವ್ ಕಹಾನಿ ಆಗಿತ್ತು. ಇದರ ನಂತರದ ಸೀಸನ್ , ಬಿಗ್ ಬಾಸ್ ಸೀಸನ್ 5ರಲ್ಲಿ ಶೃತಿ ಮತ್ತು ಜೆಕೆ ಜೋಡಿ ಎಲ್ಲರ ಮನ ಸೆಳೆದಿತ್ತು. ಹೆಚ್ಚಿನ ಸಂದರ್ಭದಲ್ಲಿ ಜೊತೆಯಾಗಿಇರುತ್ತಿದ್ದರು. ಆದ್ರೆ, ಇಲ್ಲಿ ಲವ್ ಬದಲು ಫ್ರೆಂಡ್ ಅನ್ನೋ ಫೀಲ್ ಜಾಸ್ತಿ ಇತ್ತು.

ಬಿಗ್ ಬಾಸ್ ಸೀಸನ್ 6ರಲ್ಲಿ ಕವಿತಾ ಗೌಡ ಮತ್ತು ಶಶಿಕುಮಾರ್ ಜೋಡಿ ನೋಡುಗರಿಗೆ ಮೋಡಿ ಮಾಡಿದ್ದರು. ಟಾಪ್ 3 ಯಲ್ಲಿ ಇದ್ದು, ಆ ಸೀಸನ್ ಶಶಿ ಅವರು ಕಪ್ ಏರಿಸಿ ಕೊಂಡಿದ್ದರು.ಈ ನಡುವೆ ರಾಕೇಶ್ ಮತ್ತು ಅಕ್ಷತಾ ಜೋಡಿ. ಇಬ್ಬರೂ ತುಂಬಾ ಆತ್ಮೀಯರಾಗಿ ಕಿರಿಕ್ ಮೂಲಕ ಫೇಮಸ್ ಆಗಿರೋದು ಗೊತ್ತಿರೋದೆ.

ಬಿಗ್ ಬಾಸ್ ಸೀಸನ್ 7 ರಲ್ಲಿ ಎಲ್ಲರ ಕಣ್ಮನ ಸೆಳೆದ ಜೋಡಿ ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ. ಈಗಲು ಈ ಜೋಡಿ ಮದುವೆ ಆಗ್ತಾರೆ ಅನ್ನೋ ಗಾಸಿಪ್ ಹರಿದಾಡುತ್ತಿವೆ. ಆ ಸೀಸನ್ ಶೈನ್ ಶೆಟ್ಟಿ ವಿನ್ ಎಲ್ಲೆಡೆ ಶೈನ್ ಆಗಿ ಮಿಂಚಿದ್ದರು.

ಈ ಬಳಿಕದ ಬಿಗ್ ಬಾಸ್ ಸೀಸನ್ 08 ಜನಪ್ರಿಯ ಜೋಡಿ ಎಷ್ಟೋ ಮಂದಿಯ ಫೇವರೇಟ್ ಆಂಡ್ ಕ್ಯೂಟ್ ಲವ್ ಕಪಲ್ ಅಂದ್ರೆ ಅರವಿಂದ ಕೆಪಿ ಮತ್ತು ದಿವ್ಯಾ ಉರುಡುಗ. ಈ ಜೋಡಿ ಕೆಲವೇ ದಿನಗಳಲ್ಲಿ ನವ ಜೀವನಕ್ಕೆ ಮುನ್ನುಡಿ ಬರೆಯಲು ಮುಂದಾಗಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿವೆ.

ಇನ್ನು ಇತ್ತೀಚೆಗಷ್ಟೇ ಮುಗಿದ ಬಿಗ್ ಬಾಸ್ ಸೀಸನ್ 09 ರ ಜನಪ್ರಿಯ ಜೋಡಿ ಎಲ್ಲರ ಹಾಟ್ ಫೇವರೇಟ್ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಆದ್ರೆ ಇವರ ಮದುವೆ ಬಗ್ಗೆ ಏನು ಸುದ್ದಿಯಿಲ್ಲದಿದ್ದರು ಕೂಡ ಸಾನ್ಯ ಅವರಂತು ರೂಪಿ ಅವರ ಗುಣಗಾನ ಮಾಡಲು ಅವಕಾಶ ಸಿಕ್ಕಾಗ ಮಿಸ್ ಮಾಡ್ಕೊಳೋದಿಲ್ಲ.