Home Entertainment Old Pension : ಈ ತಿಂಗಳಿನಿಂದಲೇ ಹಳೆ ಪಿಂಚಣಿ ಜಾರಿ!!!

Old Pension : ಈ ತಿಂಗಳಿನಿಂದಲೇ ಹಳೆ ಪಿಂಚಣಿ ಜಾರಿ!!!

Hindu neighbor gifts plot of land

Hindu neighbour gifts land to Muslim journalist

ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಪಿಂಚಣಿದಾರರಿಗೆ ಮಹತ್ವದ ಮಾಹಿತಿಯೊಂದನ್ನು ಹೊರ ಬಿದ್ದಿದ್ದು, ನಿವೃತ್ತಿ ಪಿಂಚಣಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಪಾಡು ಆದೇಶ ಹೊರಡಿಸಿದೆ.

ದೇಶದೆಲ್ಲೆಡೆ ಹಳೆ ಪಿಂಚಣಿ ಯೋಜನೆ ಜಾರಿಗೆ ಬೇಡಿಕೆ ಹೆಚ್ಚಿದ್ದು, ಇದರ ಕುರಿತಂತೆ ಚರ್ಚೆಗಳು ಕೂಡ ಬಿರುಸಾಗಿ ನಡೆಯುತ್ತಿವೆ.ದೇಶದ ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿದೆ. ಈ ನಡುವೆ ಹಳೆಯ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದ ಮಹತ್ವದ ಸುದ್ದಿಯೊಂದು ಹೊರಬೀಳುತ್ತಿದೆ.

2022 ರ ಬಜೆಟ್‌ ವೇಳೆ , ರಾಜಸ್ಥಾನ ಸರ್ಕಾರವು ಮುಂದಿನ ಹಣಕಾಸು ವರ್ಷದಲ್ಲಿ ಹಳೆಯ ಪಿಂಚಣಿಯನ್ನು ಮರುಪ್ರಾರಂಭಿಸುವುದಾಗಿ ಘೋಷಣೆ ಮಾಡಿತ್ತು. ಇದರ ಜೊತೆಗೆ ರಾಜ್ಯ ಸರ್ಕಾರ ಛತ್ತೀಸ್‌ಗಢದಲ್ಲೂ ಇದೇ ಕ್ರಮ ಜಾರಿಗೆ ತರಲು ಮುಂದಾಗಿದೆ. 2004 ರಲ್ಲಿ, ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಅದರ ಬದಲಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಆರಂಭಿಸಿದೆ.

ಅನೇಕ ರಾಜ್ಯಗಳಲ್ಲಿ ಇಂದಿಗೂ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರು ಪ್ರಾರಂಭಿಸಲು ಬೇಡಿಕೆಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರು ಈ ತಿಂಗಳ ಸಚಿವ ಸಂಪುಟ ರಚನೆಯಾಗಲಿದ್ದು ಆ ಬಳಿಕ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಲಕ್ಷಗಟ್ಟಲೆ ಉದ್ಯೋಗಿಗಳಿಗೆ ಭರ್ಜರಿ ಲಾಭ ಲಭ್ಯವಾಗಲಿದೆ.

ಹಳೆಯ ಪಿಂಚಣಿ ಯೋಜನೆಯ ಪ್ರಯೋಜನಗಳ ಬಗ್ಗೆ ಗಮನಿಸಿದರೆ, ಕೊನೆಯದಾಗಿ ಪಡೆದ ಸಂಬಳದ ಆಧಾರದ ಮೇಲೆ ಮಾಡಲಾಗಿದ್ದು, ಇದರ ಜೊತೆಗೆ ಹಣದುಬ್ಬರ ದರ ಹೆಚ್ಚಾದಂತೆ ಡಿಎ ಕೂಡ ಹೆಚ್ಚಾಗುತ್ತದೆ. ಸರ್ಕಾರ ಹೊಸ ವೇತನ ಆಯೋಗವನ್ನು ಜಾರಿಗೆ ತಂದರೂ ಕೂಡ ಪಿಂಚಣಿಯನ್ನು ಏರಿಕೆ ಮಾಡುತ್ತದೆ.

ಸಚಿವ ಸಂಪುಟವನ್ನು ಪರಿಗಣಿಸಿ ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರು ತಮ್ಮ ನಿರ್ಧಾರವನ್ನು ಎಲ್ಲರಿಗೂ ಮಂಡಿಸಲಿದ್ದು, ಶೀಘ್ರದಲ್ಲೇ ಅದನ್ನು ವಿಸ್ತರಿಸಲಾಗುತ್ತದೆ ಎನ್ನಲಾಗಿದ್ದು, ಇದಕ್ಕೆ ಸಂಬಂಧ ಪಟ್ಟ ಪಟ್ಟಿ ಬಂದ ಕೂಡಲೇ ಕಾರ್ಯರೂಪಕ್ಕೆ ಬರಲಿದೆ ಎನ್ನಲಾಗುತ್ತಿದೆ.