Home Breaking Entertainment News Kannada ಹಿಜಾಬ್‌ ಹಾಕಿದರೂ ಸಮಸ್ಯೆ , ಟೂ ಪೀಸ್‌ ಹಾಕಿದರೂ ಸಮಸ್ಯೆ – ಶಾರುಖ್‌, ದೀಪಿಕಾ ಸಿನಿಮಾಗೆ...

ಹಿಜಾಬ್‌ ಹಾಕಿದರೂ ಸಮಸ್ಯೆ , ಟೂ ಪೀಸ್‌ ಹಾಕಿದರೂ ಸಮಸ್ಯೆ – ಶಾರುಖ್‌, ದೀಪಿಕಾ ಸಿನಿಮಾಗೆ ನುಸ್ರತ್‌ ಸಪೋರ್ಟ್‌

Hindu neighbor gifts plot of land

Hindu neighbour gifts land to Muslim journalist

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಬಂಗಾಳಿ ನಟಿ ನುಸ್ರತ್ ಜಹಾನ್ ಪ್ರತಿಕ್ರಿಯೆ ನೀಡಿದ್ದಾರೆ.

ಕೇಸರಿ ಬಿಕಿನಿ ದೀಪಿಕಾ ಪಡುಕೋಣೆ ತೊಟ್ಟಿದ್ದರೆ ಹಸಿರು ಬಟ್ಟೆಯಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡು ಜತೆಗೆ ಕೇಸರಿ ಬಣ್ಣವನ್ನು “ನಾಚಿಕೆಯಿಲ್ಲದ ಬಣ್ಣ” ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಶಾರುಖ್ ಖಾನ್ ಬಗ್ಗೆ ಎಲ್ಲೆಡೆ ದೊಡ್ಡ ಮಟ್ಟದಲ್ಲೇ ಚರ್ಚೆಯಾಗುತ್ತಿತ್ತು. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ನೆಗೆಟಿವ್​ ವಿಚಾರಗಳನ್ನು ಪಸರಿಸಲಾಗುತ್ತಿದೆ ಎಂಬ ಕುರಿತು ‘ಪಠಾಣ್​’ ಚಿತ್ರದ ಹೀರೋ ಶಾರುಖ್​ ಖಾನ್ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ, ಈ ಕುರಿತು ಬಂಗಾಳಿ ನಟಿ ನುಸ್ರತ್ ಜಹಾನ್ ಕೂಡ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಖಾಸಗಿ ಟಿವಿ ಚಾನಲ್ ಒಂದರಲ್ಲಿ ನಡೆದ ಸಂದರ್ಶನದ ಸಂದರ್ಭ ಮಾತನಾಡಿದ ನಟಿ ನುಸ್ರತ್ “ಜನರಿಗೆ ಎಲ್ಲದರಲ್ಲೂ ಸಮಸ್ಯೆ ಇದೆ, ಮಹಿಳೆಯರು ಹಿಜಾಬ್ ಧರಿಸಿದರೂ ಕೂಡ ಸಮಸ್ಯೆ ಜೊತೆಗೆ, ಮಹಿಳೆಯರು ಬಿಕಿನಿ ತೊಟ್ಟರೂ ಅವರಿಗೆ ಸಮಸ್ಯೆಯಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಯಾರೊಬ್ಬರ ಸಿದ್ಧಾಂತದ ವಿಚಾರವಲ್ಲ. ಇದರ ಬದಲಿಗೆ ಇದು ಅಧಿಕಾರದಲ್ಲಿರುವ ಪಕ್ಷವೊಂದು ಜನರ ಮನಸ್ಸಿನಲ್ಲಿ ತಪ್ಪು ವಿಚಾರ ಬಿತ್ತರಿಸಲು ಹವಣಿಸುತ್ತಿದ್ದು, ಈ ರೀತಿಯ ಚಿತ್ರಣವನ್ನು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಅಷ್ಟೆ ಅಲ್ಲದೆ, ಈ ರೀತಿ ಮಾಡುತ್ತಿರುವವರು ಆಧ್ಯಾತ್ಮಿಕ, ಧಾರ್ಮಿಕ ಕಾಳಜಿಯಿಂದ ಹೀಗೆ ಭಿನ್ನಾಭಿಪ್ರಾಯ ಮಾಡುತ್ತಿಲ್ಲ ಬದಲಿಗೆ ಇದೊಂದು ಕೇವಲ ಯೋಜಿತ ಪಿತೂರಿಯಾಗಿದೆ. ಹೀಗಾಗಿಯೇ, ಅವರು ಸಂಸ್ಕೃತಿ ಹಾಗೂ ಬಿಕಿನಿ ಧರಿಸಿದ ಮಹಿಳೆಯರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇವರೆಲ್ಲರೂ ಭಾರತದ ಆಧುನಿಕ ಮಹಿಳೆಯರಿಗೆ ಏನು ಧರಿಸಬೇಕೆಂದು ಉಪದೇಶ ನೀಡುತ್ತಿದ್ದಾರೆ. ನಾವೇನು ಮಾಡಬೇಕೆಂದು ಹೇಳುವ ಮೂಲಕ ನಮ್ಮ ಜೀವನವನ್ನು ನಿಯಂತ್ರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ಮಾತನಾಡಬೇಕು, ಹೇಗೆ ನಡೆಯಬೇಕು, ಶಾಲೆಯಲ್ಲಿ ಏನನ್ನು ಕಲಿಯಬೇಕು, ಟಿವಿಯಲ್ಲಿ ಏನನ್ನು ನೋಡಬೇಕು ಎಂದು ಹೇಳಿ ಎಲ್ಲ ವಿಚಾರದಲ್ಲಿಯೂ ಕೂಡ ನಿಯಂತ್ರಣ ಹೇರಲು ಹವಣಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನವ ಭಾರತ, ಹಾಗೂ ಅಭಿವೃದ್ಧಿ ಹೊಂದಿದ ಭಾರತ ಎಂದು ಕರೆಯುತ್ತಿದ್ದಾರೋ ಅದು ಬಹಳ ಭಯಾನಕವಾಗಿದ್ದು, ಮುಂದಿನ ದಿನಗಳಲ್ಲಿ ಅದು ನಮ್ಮೆಲ್ಲರನ್ನು ಎಲ್ಲಿಗೆ ಕೊಂಡೊಯ್ಯಲಿದೆಯೋ ಎಂದು ಚಿಂತಿಸಿ ನನಗೆ ಭಯವಾಗುತ್ತಿದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.