Home Breaking Entertainment News Kannada ಅವತಾರ್‌ ವೇಷದಲ್ಲಿ ಜನರ ಮನಗೆದ್ದ ನಿವೇದಿತಾ ಗೌಡ ! ನೀಲಿ ಬಣ್ಣದಲ್ಲಿ ನಿವಿ!!!

ಅವತಾರ್‌ ವೇಷದಲ್ಲಿ ಜನರ ಮನಗೆದ್ದ ನಿವೇದಿತಾ ಗೌಡ ! ನೀಲಿ ಬಣ್ಣದಲ್ಲಿ ನಿವಿ!!!

Hindu neighbor gifts plot of land

Hindu neighbour gifts land to Muslim journalist

ನಿವೇದಿತಾ ಗೌಡ (niveditha gowda) ಕರ್ನಾಟಕದಲ್ಲಿ ವರ್ಲ್ಡ್ ಫೇಮಸ್ ಆಗಿ ಬಿಟ್ಟಿದ್ದು, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಅವರ ಹವಾ ಮತ್ತೆ ಹೆಚ್ಚಿ ಫೇಮಸ್ ಕೂಡ ಆಗಿದ್ದರು. ಈ ಬಳಿಕ ಚಂದನ್ ಶೆಟ್ಟಿ ಅವರ ಜೊತೆಗೆ ಹಸೆಮಣೆ ಏರಿ ಸುಖಿ ಜೀವನ ನಡೆಸುತ್ತಿರುವ ಈ ಜೋಡಿ, ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದು, ಅಭಿಮಾನಿಗಳನ್ನು ಸದಾ ರಂಜಿಸುತ್ತಿರುತ್ತಾರೆ. ನಿವೇದಿತಾ ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಗ್ಲಾಮರಸ್ ಉಡುಪುಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಬಾರ್ಬಿ ಡಾಲ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ ಎಂದರೆ ತಪ್ಪಾಗದು!!!.. ಇತ್ತೀಚೆಗೆ ಸೋಲೋ ಟ್ರಿಪ್ ಹೆಸರಲ್ಲಿ ನೆಟ್ಟಿಗರ ಟ್ರೊಲ್ ಗೆ ಒಳಗಾಗಿದ್ದ ನಿವೇದಿತಾ ಮುಟ್ಟಿ ನೋಡಿಕೊಳ್ಳುವ ರೀತಿ ನೆಗೆಟಿವ್ ಕಾಮೆಂಟ್ ಮಾಡುವವರ ಬಾಯಿ ಮುಚ್ಚಿಸಿದ್ದರು. ಇದರ ಬಳಿಕ ತಾನು ಪ್ರೆಗ್ನೆಂಟ್ ಎಂದು ಹೇಳಿ ಎಲ್ಲರಿಗೂ ಕಾಗೆ ಹಾರಿಸಿದ್ದು ಗೊತ್ತೇ ಇದೆ. ಇದೆಲ್ಲದರ ನಡುವೆ ಕಪ್ಪು ಬಣ್ಣದ ಡ್ರೆಸ್ ಮೇಲೆ ಪೇಪರ್ ಡ್ರೆಸ್ ಅಲ್ಲಿ ಮಿಂಚಿದ್ದ ಬಾರ್ಬಿ ಡಾಲ್ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಸ್ಪರ್ಧಿಸುತ್ತಿದ್ದು ಇದೀಗ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಹೆಚ್ಚು ಸದ್ದು ಮಾಡುತ್ತಿರುವ ಬಾರ್ಬಿ ಡಾಲ್ ನ ಹೊಸ ವರಸೆ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಗಿಚ್ಚಿ ಗಿಲಿಗಿಲಿ’ ಮೊದಲ ಸೀಸನ್ ಯಶ ಕಂಡ ಬಳಿಕ ‘ಗಿಚ್ಚಿ ಗಿಲಿಗಿಲಿ ಸೀಸನ್ 2’ ತೆರೆ ಮೇಲೆ ಬರುತ್ತಿದೆ. ನಿರಂಜನ್​ ದೇಶಪಾಂಡೆ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು, ಸೃಜನ್ ಲೋಕೇಶ್, ಶ್ರುತಿ ಯವರು ಈ ಕಾರ್ಯಕ್ರಮದ ತೀರ್ಪುಗಾರರಾಗಿ ಗುರುತಿಸಿಕೊಂಡಿದ್ದಾರೆ. ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಕಾರ್ಯಕ್ರಮ ಪ್ರಸಾರವಾಗುವ ಈ ಕಾರ್ಯಕ್ರಮ ಜನರಿಗೆ ಮನರಂಜನೆಯ ರಸದೌತಣ ನೀಡುತ್ತಿರೋದಂತು ಸುಳ್ಳಲ್ಲ.

ಕನ್ನಡದ ಮನರಂಜನಾ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನು ಉಣಿಸುತ್ತಾರೆ. ಇತ್ತೀಚೆಗೆ ರಿಲೀಸ್ ಆದ ‘ಅವತಾರ್​’ ಸರಣಿಯ ಬಗ್ಗೆ ಹೆಚ್ಚೇನು ವಿವರಣೆ ಕೊಡುವ ಅವಶ್ಯಕತೆ ಇಲ್ಲ. ಇತ್ತೀಚೆಗೆ ರಿಲೀಸ್ ಆದ ‘ಅವತಾರ್​ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು ಗೊತ್ತಿರುವ ವಿಚಾರವೇ. ಈ ಸಿನಿಮಾದ ಪಾತ್ರಗಳು ಜನಮಾನಸದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿದೆ. ಅಲ್ಲ, ನಿವೇದಿತಾ ಗೌಡ ಅವರಿಗೂ ಈ ಸಿನಿಮಾಗೂ ಎಲ್ಲಿಂದೆಲ್ಲಿಯಾ ಸಂಬಂಧ ಅಂತೀರಾ??? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಕಹಾನಿ!!!

ನಿವೇದಿತಾ ಗೌಡ ಹಾಗೂ ವಿನೋದ್ ಗೊಬ್ಬರಗಾಲ ‘ಗಿಚ್ಚಿ ಗಿಲಿಗಿಲಿ 2’ ವೇದಿಕೆ ಮೇಲೆ ಸಣ್ಣ ಸ್ಕಿಟ್ ಮಾಡಿದ್ದು, ಇಲ್ಲಿ ನಿವೇದಿತಾ ಗೌಡ ಹಾಗೂ ವಿನೋದ್ ಗೊಬ್ಬರಗಾಲ ಜೋಡಿಯ ಮೋಡಿಗೆ ಜನರು ಹೊಟ್ಟೆ ಹುಣ್ಣಾಗುವಂತೆ ನಗೆ ಗಡಲಲ್ಲಿ ತೇಲುವಂತೆ ಮಾಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ ಸ್ಪರ್ಧಿಯಾಗಿ ಆಗಮಿಸಿದ ವಿನೋದ್ ಗೊಬ್ಬರಗಾಲ ‘ಮಜ ಭಾರತ’ ಮೂಲಕ ದೊಡ್ದ ಮಟ್ಟದ ನೇಮ್ ಫೇಮ್ ಗಳಿಸಿದ್ದಾರೆ. ಇನ್ನು ನಿವೇದಿತಾ ಅವರ ಬಗ್ಗೆ ಹೇಳೋ ಅವಶ್ಯಕತೆಯೇ ಇಲ್ಲ!! ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಮಾತ್ರವಲ್ಲ ಸೋಶಿಯಲ್ ಮೀಡಿಯಾ ದಲ್ಲಿ ಅಭಿಮಾನಿಗಳನ್ನು ರಂಜಿಸಲು ಹೆಚ್ಚು ರೀಲ್ಸ್ ಮಾಡಿ ಖುಷಿ ಪಡಿಸೋದು ಗೊತ್ತಿರುವ ವಿಚಾರವೇ!!

‘ಅವತಾರ್​ 2’ ಸಿನಿಮಾ (Avatar 2) ಬಿಡುಗಡೆ ಆಗಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿದ್ದು, ಈ ಸಿನಿಮಾದ ಪಾತ್ರಗಳನ್ನು ಬೇಸ್ ಆಗಿ ಇಟ್ಟುಕೊಂಡು ‘ಗಿಚ್ಚಿ ಗಿಲಿಗಿಲಿ 2’ನಲ್ಲಿ (Gichchi Giligili) ನಿವೇದಿತಾ ಗೌಡ ಹಾಗೂ ವಿನೋದ್ ಗೊಬ್ಬರಗಾಲ ಅವರು ಸ್ಕಿಟ್ ಮಾಡಿದ್ದಾರೆ. (ಫೆಬ್ರವರಿ 5) ಈ ಎಪಿಸೋಡ್ ಪ್ರಸಾರ ಆಗಿದ್ದು, ಇವರ ನಟನೆಯ ಖದರ್ ಕಂಡು ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ‘ನಾನು ಅವತಾರ್ ಜಗತ್ತಿನ ಕ್ವೀನ್’ ಎಂದು ವೇದಿಕೆ ಮೇಲೆ ತನ್ನ ಆಕ್ಟಿಂಗ್ ಮೂಲಕ ಗಮನ ಸೆಳೆದ ನಿವೇದಿತಾ ಗೌಡ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದರು. ಮಾವಿನ್​​ಮುತ್ತು ಕದಿಯೋದು ವಿನೋದ್ ಸ್ಕಿಟ್ ನ ಯೋಜನೆಯಾಗಿತ್ತು. ಈ ಮಾವಿನ​ಮುತ್ತು ತಿಂದರೆ ತೆಳ್ಳಗೆ ಆಗುತ್ತಾರೆ ಎಂದುಕೊಂಡು ವಿನೋದ್ ತಾನು ಪ್ರೀತಿಸುತ್ತಿರುವ ಹುಡುಗಿ ತೆಳ್ಳಗೆ ಆಗಬೇಕೆಂದು ಬಯಸಿ ಈ ಮಾವಿನಮುತ್ತ ತರಲು ಅವತಾರ ಲೋಕಕ್ಕೆ ತೆರಳುತ್ತಾರೆ.

ಈ ಟೈಮ್ ಅಲ್ಲಿ ವಿನೋದ್​ಗೆ ನಿವೇದಿತಾ ಮೇಲೆ ಲವ್ ಆಗಿ ಅವರಿಬ್ಬರೂ ಮದುವೆ ಕೂಡ ಆಗುವ ಸೀನ್ ಬರುತ್ತದೆ. ಈ ನಡುವೆ ಪ್ರೀತಿಸಿದ ಹುಡುಗಿ ಈತನಿಗಾಗಿ ಎದುರು ನೋಡುತ್ತಾ ಹಣ್ಣು ಮುದುಕಿ ಆಗಿಬಿಡುತ್ತಾಳೆ. ಹೀಗೆ ನೋಡುಗರ ಕಣ್ಣಿಗೆ ಹಬ್ಬ ಉಂಟು ಮಾಡುವಂತೆ ನಿವೇದಿತಾ ಗೌಡ ಅವರು ಅವತಾರ್ ಲುಕ್ ನಲ್ಲಿ ಅವತಾರ್ ಲೋಕದ ಕ್ವೀನ್ ಮಿಂಚಿದ್ದು, ಇವರಿಗೆ ವಿನೋದ್ ಗೊಬ್ಬರಗಾಲ ಸಾಥ್ ನೀಡಿದ್ದರು.

ಈ ಅವತಾರ ಲುಕ್ ಪಡೆಯಲು ಸುಮಾರು ಟೈಮ್ ತಗೊಂಡಿದ್ದಾರೆ. ನಿವಿ ಈ ಲುಕ್ ಪಡೆದಿದ್ದರ ಕುರಿತ ಇಂಟರೆಸ್ಟಿಂಗ್ ವಿಡಿಯೋ ವನ್ನೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಗೆಟಪ್ ಗಾಗಿ ಹೆಚ್ಚು ಸಮಯ ವ್ಯಯಿಸಿದ್ದಾರೆ ಬಾರ್ಬಿ ಡಾಲ್. ‘ನಾನು ಶೂಟ್​ಗೆ ರೆಡಿ ಆಗಿದ್ದು ಹೀಗೆ , ಅದು ಅಷ್ಟು ಸುಲಭ ಆಗಿರಲಿಲ್ಲ’ ಎಂದು ನಿವೇದಿತಾ ಬರೆದುಕೊಂಡಿದ್ದಾರೆ. ಸದ್ಯ, ಬಾರ್ಬಿ ಡಾಲ್ ಗೆಟಪ್ ಕಂಡು ಫುಲ್ ಖುಷ್ ಆದ ಅಭಿಮಾನಿಗಳು ಕಾಮೆಂಟ್ ಮೂಲಕ ಸಂತೋಷ ವ್ಯಕ್ತ ಪಡಿಸಿದ್ದಾರೆ.ಈ ರೀತಿ ರೆಡಿ ಆಗೋದು ಈಜಿ ಅಲ್ಲವೇ ಅಲ್ಲ, ಹೀಗಾಗಿ, ನಿಮಗೆ ಹ್ಯಾಟ್ಸ್ ಆಫ್​’ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.