Home Breaking Entertainment News Kannada Kili Paul : ಕಾಂತಾರ ಸಿನಿಮಾದ ಮೈರೋಮಾಂಚನಗೊಳಿಸೋ ಸೀನ್ ನಲ್ಲಿ ನಟಿಸಿದ ಕಿಲಿಪೌಲ್!!!!

Kili Paul : ಕಾಂತಾರ ಸಿನಿಮಾದ ಮೈರೋಮಾಂಚನಗೊಳಿಸೋ ಸೀನ್ ನಲ್ಲಿ ನಟಿಸಿದ ಕಿಲಿಪೌಲ್!!!!

Hindu neighbor gifts plot of land

Hindu neighbour gifts land to Muslim journalist

ಮಾನ್ಯ ಪ್ರಧಾನಿ ಮೋದಿಯೇ ಕಿಲಿ ಪೌಲ್ ಹೆಸರನ್ನು ಬಳಸಿದ್ದಾರೆ ಎಂದರೆ ಈ ವ್ಯಕ್ತಿ ಎಷ್ಟರಮಟ್ಟಿಗೆ ಪ್ರಖ್ಯಾತಿ ಪಡೆದಿದ್ದಾರೆ ಎಂದು ನೀವೇ ಊಹಿಸಿಕೊಳ್ಳಿ!!! ಇವರು ಕೆಜಿಎಫ್ 2 ಡೈಲಾಗ್ ಹೇಳಿ ಅರೆ ವ್ಹಾವ್ ಎಂದು ಮೆಚ್ಚುಗೆಗೆ ಪಾತ್ರವಾದ ನಟ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು!!. ಕಾಂತಾರ ಸಿನಿಮಾದ ಸೀನ್ ಕೂಡಾ ವಿಡಿಯೋ ಮಾಡಿದ್ದಾರೆ.ಕಿಲಿ ಪೌಲ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು, ಯಾವುದೇ ಸಿನಿಮಾ, ವಿಡಿಯೋ ವೈರಲ್ ಆದಾಗ ನಟ ಅದರ ಆಡಿಯೋಗೆ ಲಿಪ್ ಸಿಂಕ್ ಮಾಡಿ ವಿಡಿಯೋಗಳನ್ನು ಮಾಡುವುದು ಸಾಮಾನ್ಯ!!. ಇದೀಗ, ಎಲ್ಲೆಡೆ ಸಂಚಲನ ಮೂಡಿಸಿದ ಕಾಂತಾರ ಸಿನಿಮಾದ ವಿಡಿಯೋವನ್ನು ರೀ ಕ್ರಿಯೇಟ್ ಮಾಡಿದ್ದಾರೆ.

ತಾಂಜೇನಿಯಾ ಮೂಲಕ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಮತ್ತು ಸಹೋದರಿ ನೀಮಾ ಪೌಲ್ ಇಬ್ಬರು ವಿಶ್ವದ ಪ್ರಸಿದ್ಧ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ, ಡ್ಯಾನ್ಸ್ ಮಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಅದರಲ್ಲೂ ಕೂಡ ಭಾರತದ ಹಾಡುಗಳಿಗೆ ಲಿಪ್ ಸಿಂಗ್ ಮಾಡುವ ಮೂಲಕ ಫೇಮಸ್ ಆಗಿದ್ದಾರೆ.

ಕಾಂತಾರ (Kantara) ಸಿನಿಮಾದ (Cinema) ಬಗ್ಗೆ ಹೆಚ್ಚು ವಿವರಣೆ ನೀಡುವ ಅವಶ್ಯಕತೆಯೇ ಇಲ್ಲ!!! ಅದರ ಹವಾ ಎಷ್ಟರ ಮಟ್ಟಿಗಿದೆ ಎಂಬುದು ಗೊತ್ತಿರುವ ವಿಚಾರವೇ!! ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಜನರು ಕಾಂತಾರ ಸಿನಿಮಾದ ಮೋಡಿಗೆ ತಲೆದೂಗಿದ್ದಾರೆ. ಈಗಂತೂ ಎಲ್ಲೆ ಹೋದರೂ ಬಂದರೂ. ಕಾಂತಾರ ಸಿನಿಮಾದ ಹಾಡು, ಸೀನ್, ಡೈಲಾಗ್ (Dialogue) ಹೆಚ್ಚಿನವರ ನಾಲಿಗೆಯ ತುದಿಯಲ್ಲಿ ನಾಟ್ಯವಾಡುತ್ತಿದೆ.

ಎಲ್ಲೆಡೆ ಟ್ರೆಂಡ್ ಸೃಷ್ಟಿಸಿರುವ ಕಾಂತಾರ ಸಿನಿಮಾ ರೀಲ್ಸ್ ವಿಡಿಯೋ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಯೂಟ್ಯೂಬ್, ಇನ್​​ಸ್ಟಾಗ್ರಾಮ್ ರೀಲ್ಸ್ ಸೇರಿದಂತೆ ವಿಡಿಯೋ ಮೇಕಿಂಗ್ ಪ್ಲಾಟ್​​ಫಾರ್ಮ್​ಗಳಲ್ಲಿ ಕಾಂತಾರ ಸಿನಿಮಾದ ಆಡಿಯೋ ಕ್ಲಿಪ್​​ಗಳದ್ದೆ ಕಾರುಬಾರು!!.

ಇದೀಗ ಕಾಂತಾರದ ಕೊನೆಯ ದೃಶ್ಯ ನೋಡುಗರ ಮೈಮನ ರೋಮಾಂಚನ ಗೊಳಿಸುವ, ಪ್ರೇಕ್ಷರಿಗೆ ಗೂಸ್​ಬಂಪ್ಸ್ ಕೊಟ್ಟ ಸೀನ್ ವೈರಲ್ ಆಗಿದ್ದು, ಫೇಮಸ್ ವಿಡಿಯೋ ಮೇಕರ್ ಆಗಿರುವ ಕಿಲಿ ಪೌಲ್ (Kili Paul) ಈ ವೈರಲ್ ಕ್ಲಿಪ್​ಗೆ ಲಿಪ್ ಸಿಂಕ್ ಮಾಡಿದ್ದು, ಸದ್ಯ ಈ ವಿಡಿಯೋ ಹೆಚ್ಚಿನವರ ಮೆಚ್ಚುಗೆಗೆ ಪಾತ್ರವಾಗಿದೆ. ಕಾಂತಾರದ ಕೊನೆಯ ಭಾಗದಲ್ಲಿ ವೈರಿಗಳ ದಾಳಿಗೆ ನೆಲಕ್ಕುರುಳುವ ರಿಷಬ್ ಶೆಟ್ಟಿಯವರನ್ನು ದೈವ ಬಂದು ಎಬ್ಬಿಸುವ ಒಂದು ಸುಂದರವಾದ ದೃಶ್ಯ ನೋಡುಗರ ಮನದಲ್ಲಿ ದೈವದ ಭಕ್ತಿ ಯ ಜೊತೆಗೆ ರೋಮಾಂಚನ ಉಂಟು ಮಾಡುವ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿದೆ. ಇದೀಗ, ಕಾಂತಾರ ಸಿನಿಮಾದ ಆ ಸೀನ್ ಅನ್ನು ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ರಿಕ್ರಿಯೇಟ್ ಮಾಡಿದ್ದಾರೆ.

ರಿಷಬ್ ಅವರ ಪಾತ್ರಧಾರಿ, ಶಿವನಂತೆ ನೆಲದ ಮೇಲೆ ಬಿದ್ದು ಆಮೇಲೆ ಆವೇಶದಿಂದ ಏಳುವುದನ್ನು ವಿಡಿಯೋ ಮಾಡಲಾಗಿದ್ದು, 59 ನಿಮಿಷಗಳ ಈ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೊ ವೀಕ್ಷಿಸಿದ ಹೆಚ್ಚಿನವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 993 ಜನರು ವಿಡಿಯೋ ನೋಡಿ ರಿಯಾಕ್ಟ್ ಮಾಡಿದ್ದು 19 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ನೆಟ್ಟಿಗರು ಈ ವಿಡಿಯೋವನ್ನು ತಮ್ಮ ವಾಲ್​ನಲ್ಲಿ ಶೇರ್ ಕೂಡ ಮಾಡುತ್ತಿದ್ದಾರೆ.

ಬಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ಸೇರಿದಂತೆ ಬಹುತೇಕ ಭಾಷೆಯ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ರೀಲ್ಸ್ ಮಾಡಿ ಶೇರ್ ಮಾಡಿದ್ದು, ಕಿಲಿ ಪೌಲ್ ರೀಲ್ ಸಿಕ್ಕಾಪಟ್ಟೆ ವೈರಲ್ ಆಗಿ ಸಂಚಲನ ಮೂಡಿಸಿದೆ.

ಇನ್ಸ್ಟಾಗ್ರಾಮ್ ನಲ್ಲಿ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿರುವ ಕಿಲಿ ಪೌಲ್ ಅನ್ನು ಭಾರತೀಯರು ಕೂಡ ಅತಿಯಾಗಿ ಮೆಚ್ಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಕಿಲಿ ಪೌಲ್ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದರು. ಮೋದಿ ಅವರ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಹಾಡಿ ಕೊಂಡಾಡಿದ್ದಾರೆ. ಈ ಬಳಿಕ, ಕಿಲಿ ಪೌಲ್ ಧನ್ಯವಾದ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಬೇರೆ ಬೇರೆ ಭಾಷೆಯ ಭಾರತೀಯ ಹಾಡುಗಳಿಗೆ ವಿಡಿಯೋ ಮಾಡುವಂತೆ ಯುವಜನರಿಗೆ ಸಲಹೆ ನೀಡಿದ್ದಾಗ, ಮೋದಿ ಮಾತಿಗೆ ಕಿಲಿ ಪೌಲ್ ಖುಷಿಯಾಗಿ ಪ್ರಧಾನಿ ಮೋದಿಯನ್ನು ಹಾಡಿಹೊಗಳಿದ್ದರು.