Home Entertainment ಇದೊಂದು ಒಣಗಿದ ಕೋಲು ಕಂಡಾಗೆ ಕಾಣುತ್ತೆ…ಗಮನವಿಟ್ಟು ನೋಡಿ…ಇದೊಂದು ಕೋಲು ಮಾತ್ರ ಅಲ್ಲ….

ಇದೊಂದು ಒಣಗಿದ ಕೋಲು ಕಂಡಾಗೆ ಕಾಣುತ್ತೆ…ಗಮನವಿಟ್ಟು ನೋಡಿ…ಇದೊಂದು ಕೋಲು ಮಾತ್ರ ಅಲ್ಲ….

Hindu neighbor gifts plot of land

Hindu neighbour gifts land to Muslim journalist

ದಿನಂಪ್ರತಿ ಒಂದಲ್ಲ ಒಂದು ವಿಡಿಯೋ ನೆಟ್ಟಿಗರ ಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಕೆಲ ವಿಡಿಯೋಗಳು ಜನರಲ್ಲಿ ಕುತೂಹಲ ಕೆರಳಿಸಿದರೆ ಮತ್ತೆ ಕೆಲವು ವಿಡಿಯೋ ತುಣುಕುಗಳು ಜನರಲ್ಲಿ ನಡುಕ ಹುಟ್ಟಿಸುತ್ತವೆ. ಇದೀಗ, ಐಎಫ್‌ಎಸ್ ಅಧಿಕಾರಿಯೊಬ್ಬರು ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿರುವ ವಿಡಿಯೋ ಎಲ್ಲರ ಮನ ಸೆಳೆದಿದೆ.

ಈ ಜಗವೇ ಒಂದು ವಿಸ್ಮಯ ನಗರಿ. ಕೆಲವೊಮ್ಮೆ ಈ ಪ್ರಕೃತಿಯಲ್ಲಿ ನಡೆಯುವ ಅದ್ಭುತಗಳು ನಮ್ಮನ್ನು ಅಚ್ಚರಿಗೊಳಿಸಿ ಬೆರಗುಗೊಳಿಸುತ್ತದೆ. ಅಷ್ಟೆ ಅಲ್ಲದೆ, ವಿಜ್ಞಾನ ಕ್ಕೂ ಸವಾಲು ಎಸೆದು ಜನರ ಮನದಲ್ಲಿ ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುವಂತಹ ಅನೇಕ ಪ್ರಸಂಗಗಳನ್ನು ನಾವು ನೋಡುತ್ತಿರುತ್ತೇವೆ.

ಹೀಗೂ ಉಂಟೇ?? ಈ ಜಗತ್ತಿನ ವಿಸ್ಮಯದ ರಹಸ್ಯ ಬಲ್ಲವರಾರು?? ಎಂಬ ಪ್ರಶ್ನೆ ಕೂಡ ನಮ್ಮಲ್ಲಿ ಮೂಡುತ್ತದೆ. ಇದೇ ರೀತಿ ಕೌತುಕ ಸೃಷ್ಟಿಸುವ ವೀಡಿಯೋ ವೈರಲ್ ಆಗಿದ್ದು, ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿ ಕೊಂಡಾಗ ನೀವು ಕೂಡ ಬೆರಗಾಗುವುದರಲ್ಲಿ ಸಂಶಯವಿಲ್ಲ.

ಈ ಪ್ರಾಕೃತಿಕ ಸೊಬಗಿನ ನಡುವೆ ಹವಾಮಾನದ ಅನುಗುಣವಾಗಿ ಪ್ರತಿ ಜೀವರಾಶಿ ಕೂಡ ತನ್ನದೇ ಆದ ವಿಶಿಷ್ಟತೆಯನ್ನು ಒಳಗೊಂಡಿರುತ್ತದೆ. ಅದರಲ್ಲೂ ಕೂಡ ತಮ್ಮ ಜೀವಕ್ಕೆ ಕಂಟಕ ಎದುರಾದಾಗ ರಕ್ಷಣಾ ವಿಷಯದಲ್ಲಿ ತಮ್ಮನ್ನು ತಾವು ಮರೆ ಮಾಚುವ ಸಲುವಾಗಿ ಎಲೆಗಳ ಬಣ್ಣಕ್ಕೆ ತಮ್ಮ ಬಣ್ಣವನ್ನು ಬದಲಿಸಿಕೊಳ್ಳುವ ವಿಶೇಷ ಸಾಮರ್ಥ್ಯ ಹೊಂದಿರುತ್ತದೆ. ಕೆಲವೊಮ್ಮೆ ಅಲ್ಲೊಂದು ಜೀವಿ ಇದೆ ಎಂಬುದೇ ಅರಿವಿಗೆ ಬಾರದಂತೆ ತಮ್ಮನ್ನು ತಾವು ಮರೆ ಮಾಚಿಕೊಳ್ಳುತ್ತ ರಕ್ಷಣೆ ಮಾಡಿಕೊಳ್ಳುತ್ತವೆ.

ಇದು ಅವುಗಳಿಗೆ ಪ್ರಕೃತಿದತ್ತ ವರ ಎಂದರೆ ತಪ್ಪಾಗದು. ಇದೆ ರೀತಿಯ ಅನೇಕ ದೃಶ್ಯಗಳನ್ನು ನೀವು ಕೂಡ ನೋಡಿರಬಹುದು. ಗಿಡದಂತಹ ಕೀಟ, ಒಣ ಎಲೆಯಂತಹ ಚಿಟ್ಟೆ, ಮರದ ತುಂಡಿನಂತಹ ಜೀವಿ… ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದೀಗ ವೈರಲ್ ಆಗಿರುವ ವೀಡಿಯೋ ಕೂಡಾ ಇಂತಹ ವಿಶೇಷತೆಯನ್ನು ಒಳಗೊಂಡಿದೆ.

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಒಣಗಿದ ಕೋಲಿನಂತೆ ಕಾಣುವ ವಸ್ತುವಿನ ದೃಶ್ಯದ ಮೂಲಕ ಈ ಕ್ಲಿಪ್ ಆರಂಭವಾಗುತ್ತದೆ. ಆಗ ಅಲ್ಲಿ ಒಬ್ಬರು ವ್ಯಕ್ತಿ ನಿಧಾನಕ್ಕೆ ಕೈ ಮುಂದಕ್ಕೆ ಚಾಚಿದರು ಕೂಡ ಆ `ಕೋಲಿ’ನಲ್ಲಿ ವ್ಯತ್ಯಾಸ ನಿಮಗೆ ಗೋಚರಿಸದು. ಆದರೆ, ಸ್ವಲ್ಪ ಸಮಯದ ಬಳಿಕ ಆ ಕೋಲಿನದ್ದೇ ಬಣ್ಣದ ಜೀವಿಯೊಂದು ನಿಧಾನಕ್ಕೆ ಚಲಿಸುವುದು ಕಂಡು ಬರುತ್ತದೆ. ಈ ದೃಶ್ಯ ಎಲ್ಲರನ್ನೂ ಮೂಕ ವಿಸ್ಮಯಗೊಳಿಸುತ್ತದೆ.

ಒಣಗಿದ ಕೋಲಿನಂತೆ ಕಾಣುವ ವಸ್ತುವಿನ ದೃಶ್ಯದ ಮೂಲಕ ಈ ಕ್ಲಿಪ್ ಆರಂಭವಾಗುತ್ತದೆ. ಆಗ ಅಲ್ಲಿ ಒಬ್ಬರು ವ್ಯಕ್ತಿ ನಿಧಾನಕ್ಕೆ ಕೈ ಮುಂದಕ್ಕೆ ಚಾಚಿದರು ಕೂಡ ಕೂಡ ಆ ಕೋಲು ವಿನಲ್ಲಿ ಯಾವುದೇ ವ್ಯತ್ಯಾಸ ನಿಮಗೆ ಗೋಚರಿಸದು. ಆದರೆ, ಸ್ವಲ್ಪ ಸಮಯದ ಬಳಿಕ ಆ ಕೋಲಿನದ್ದೇ ಬಣ್ಣದ ಜೀವಿಯೊಂದು ನಿಧಾನಕ್ಕೆ ಸಂಚಾರ ನಡೆಸುವುದು ಗೋಚರಿಸುತ್ತದೆ. ಈ ದೃಶ್ಯ ಎಲ್ಲರನ್ನೂ ಮೂಕ ವಿಸ್ಮಯಗೊಳಿಸುತ್ತದೆ .

ನಂಬಲಾಗದ ಮರೆಮಾಚುವಿಕೆ. ಇದು ಅವರದೇ ಆದ ರಕ್ಷಣಾ ಕಾರ್ಯವಿಧಾನ’ ಎಂಬ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೋವನ್ನು ಕಸ್ವಾನ್ ಅವರು ಹಂಚಿಕೊಂಡಿದ್ದಾರೆ.

ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದ್ದು, ಎಲ್ಲರೂ ಈ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಪ್ರಕೃತಿಯಲ್ಲಿ ಅಡಗಿರುವ ರಹಸ್ಯ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಸದ್ಯ ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನು ಪಡೆದಿದೆ.