Home Entertainment ಇದ್ದಕ್ಕಿದ್ದಂತೆ ವ್ಯಕ್ತಿಯ ತಲೆ ಕಚ್ಚಿದ ದೈತ್ಯ ಹೆಬ್ಬಾವು!! ಮುಂದೇನಾಯ್ತು??

ಇದ್ದಕ್ಕಿದ್ದಂತೆ ವ್ಯಕ್ತಿಯ ತಲೆ ಕಚ್ಚಿದ ದೈತ್ಯ ಹೆಬ್ಬಾವು!! ಮುಂದೇನಾಯ್ತು??

Hindu neighbor gifts plot of land

Hindu neighbour gifts land to Muslim journalist

ಏನೋ ಮಾಡಲು ಹೋಗಿ ಮತ್ತೇನೋ ಅವಾಂತರ ಸೃಷ್ಟಿಮಾಡಿಕೊಳ್ಳುವ ಪ್ರಸಂಗಗಳು ಹೆಚ್ಚಾಗಿ ಕಂಡುಬರುತ್ತವೆ. ಕೆಲವೊಮ್ಮೆ ಹುಚ್ಚಾಟ ಮಾಡಲು ಹೋಗಿ ಅನಾಹುತಕ್ಕೆ ಎಡೆ ಮಾಡಿಕೊಡುವ ಪ್ರಮೇಯಗಳು ಕೂಡ ಇವೆ . ಕೆಲವೊಮ್ಮೆ ತಿಳಿಯದೆ ಸಾಹಸ ಮಾಡುವವರು ಇದ್ದರೆ ಮತ್ತೆ ಕೆಲವು ಸಂದರ್ಭದಲ್ಲಿ ಅನಾಹುತ ಸಂಭವಿಸುವ ಅರಿವಿದ್ದರೂ ಕೂಡ ನಿರ್ಲಕ್ಷ್ಯ ತೋರಿ ಅಪಾಯಕ್ಕೆ ಆಹ್ವಾನ ತಂದುಕೊಡುವ ಪ್ರಮೇಯಗಳು ಕೂಡಾ ಇವೆ.

ಹಾವುಗಳು ವಿಷಕಾರಿ ಹಾಗೂ ಹೆಚ್ಚು ಅಪಾಯಕಾರಿ ಎಂಬ ವಿಚಾರ ಎಲ್ಲರಿಗೂ ತಿಳಿದಿರುವಂತದ್ದೇ!!!. ಹಾಗಾಗಿ, ಹೆಚ್ಚಿನವರು ಅದರ ತಂಟೆಗೆ ಹೋಗದೆ ತಮ್ಮ ಪಾಡಿಗೆ ಇರುತ್ತಾರೆ. ಆದ್ರೆ, ಕೆಲವು ಜನರು, ತಮಾಷೆಯಿಂದ, ಕೆಲವೊಮ್ಮೆ ಮುಂದಾಗುವ ಅಪಾಯದ ಬಗ್ಗೆ ಕ್ಯಾರೇ ಎನ್ನದೆ ಚೆಲ್ಲಾಟವಾಡುತ್ತಾರೆ. ಯಾವುದೇ ಜೀವಿಯಾದರೂ ಕೂಡ ಮತ್ತೊಬ್ಬರಿಂದ ತೊಂದರೆಯಾದರೆ ಜೀವ ರಕ್ಷಣೆಗೆ ಮುಂದೆ ಇರುವವರ ಮೇಲೆ ದಾಳಿ ನಡೆಸುವುದು ಸಹಜ ಉಪದ್ರವ ಮಾಡಿದ ತಕ್ಷಣವೇ ಪ್ರತೀಕಾರ ತೀರಿಸಿಕೊಳ್ಳುತ್ತವೆ. ಇದೇ ರೀತಿಯ ವೀಡಿಯೋ ವೈರಲ್ ಆಗುತ್ತಿದ್ದು ಎಲ್ಲೆಡೆ ಸಂಚಲನ ಮೂಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಹೆಬ್ಬಾವಿನೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದಾಗಿದೆ. ಆ ವ್ಯಕ್ತಿ ಹೆಬ್ಬಾವಿನೊಂದಿಗೆ ಆಟವಾಡುತ್ತಿದ್ದುದ್ದು ಮಾತ್ರವಲ್ಲದೇ ಕೀಟಲೆ ಕೂಡ ಮಾಡುತ್ತಿದ್ದ. ತನಗೆ ತೊಂದರೆ ಉಂಟಾದಾಗ ಅವನು ನೋಡುತ್ತಿದ್ದಂತೆ, ಹಾವು ಕೋಪದಿಂದ ಹೊರಬಂದು ಮೇಲಕ್ಕೆ ಜಿಗಿದು ಆ ವ್ಯಕ್ತಿಯ ತಲೆಯನ್ನು ಹಿಡಿದುಕೊಂಡಿದೆ. ಆ ವ್ಯಕ್ತಿ ನೋವನ್ನು ಸಹಿಸಲಾಗದೆ, ಜೋರಾಗಿ ಕೂಗಲು ಪ್ರಾರಂಭಿಸಿದ್ದಾನೆ. ತಕ್ಷಣವೆ ಅನೇಕ ಮಂದಿ ಆತನ ಜೀವ ರಕ್ಷಣೆಗೆ ಬಂದಿದ್ದಾರೆ. ಅದೃಷ್ಟವಶಾತ್ ಆ ವ್ಯಕ್ತಿಯ ನಸೀಬು ಚೆನ್ನಾಗಿ ಇದ್ದುದ್ದರಿಂದ ಹಾವು ವ್ಯಕ್ತಿಯ ತಲೆಯನ್ನು ಹಿಡಿದಿದ್ದು,ಜೀವಕ್ಕೆ ಕಂಟಕ ಎದುರಾದರು ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ.

ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅನೇಕ ಮಂದಿ ಈ ವೀಡಿಯೊ ನೋಡಿದ್ದಾರೆ. ನೆಟ್ಟಿಗರು ಇದರ ಬಗ್ಗೆ ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ. ಏನೇ ಆಗಲಿ.. ಹುಚ್ಚಾಟ ಮಾಡುವ ಮುನ್ನ ಮುಂದೆ ಎದುರಾಗುವ ಅಪಾಯಗಳ ಬಗ್ಗೆ ಕೊಂಚ ಮಟ್ಟಿಗಾದರು ಗಮನ ಹರಿಸಿದರೆ ಅಪಾಯಕ್ಕೆ ಆಹ್ವಾನ ತಂದುಕೊಡುವ ಪ್ರಮೇಯ ಎದುರಾಗದು.

https://www.instagram.com/reel/CmHsfLPOuNn/?igshid=YmMyMTA2M2Y=