Home Entertainment BBK 9 : ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಔಟ್ | ಪುಟ್ಟಗೌರಿಯ ಆಟಕ್ಕೆ...

BBK 9 : ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಔಟ್ | ಪುಟ್ಟಗೌರಿಯ ಆಟಕ್ಕೆ ಬ್ರೇಕ್

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಮನೆಯ ಈ ಬಾರಿಯ ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್ ಪ್ರೋಗ್ರಾಮ್ ನಲ್ಲಿ ಸಾನಿಯಾ ಅಯ್ಯರ್ ಈ ಬಾರಿಯ ವಾರದ ಎಲಿಮಿನೇಷನ್ ರೌಂಡ್ ನಲ್ಲಿ ಮನೆಯಿಂದ ಹೊರಬಂದಿದ್ದಾರೆ.

ಈ ವಾರ ಪುಟ್ಟಗೌರಿ ಖ್ಯಾತಿಯ ಸಾನಿಯಾ ಅಯ್ಯರ್ ಬಿಗ್ ಬಾಸ್ ಶೋನಿಂದ ಔಟ್ ಆಗಿದ್ದಾರೆ. ಈ ಬಾರಿ ದೊಡ್ಮನೆಯ ಆರನೇ ಸ್ಪರ್ಧಿಯಾಗಿ ಸಾನಿಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.

ಕಿರುತೆರೆಯ ಪುಟ್ಟಗೌರಿಯಾಗಿ(PuttaGowri) ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಸಾನ್ಯ ಅಯ್ಯರ್, ಓಟಿಟಿ ಸೀಸನ್(Bigg Boss Ott) ಮತ್ತು ಟಿವಿ ಬಿಗ್ ಬಾಸ್‌ನಲ್ಲಿ(Bigg Boss) ಸಖತ್ ಹೈಲೈಟ್ ಆಗಿದ್ದರು. ಟಾಸ್ಕ್ ಮನರಂಜನೆ, ಹೀಗೆ ಎಲ್ಲಾ ವಿಚಾರದಲ್ಲೂ ಸ್ಪರ್ಧಿಯಾಗಿ ಸಾನ್ಯ ಸೈ ಎನಿಸಿಕೊಂಡಿದ್ದರು. ಸಾನ್ಯ ಮಾತನಾಡುವ ಸ್ಪಷ್ಟ ಕನ್ನಡ ವೀಕ್ಷಕರಿಗೆ ಮೆಚ್ಚುಗೆ ಆಗಿತ್ತು. ಇದೀಗ ಸಾನ್ಯ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ 6ನೇ ವಾರಕ್ಕೆ ಸಾನ್ಯ ಔಟ್ ಆಗಿದ್ದಾರೆ.

ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಅವರ ಗೆಳೆತನ ಬಿಗ್ ಬಾಸ್ ನಲ್ಲಿ ಭಾರೀ ಹೈಲೆಟ್ ಆಗಿತ್ತು. ಒಟಿಟಿಯಿಂದ ಪ್ರಾರಂಭವಾದ ಇವರ ಗೆಳೆತನ ಟಿವಿ ಬಿಗ್ ಬಾಸ್‌ವರೆಗೂ ಮುಂದುವರಿದಿತ್ತು. ಇದೀಗ ಸಾನ್ಯ ಎಲಿಮಿನೇಟ್ ಆಗಿರೋದು ರೂಪೇಶ್ ಸೇರಿದಂತೆ ಮನೆ ಮಂದಿಗೆ ಶಾಕ್ ಕೊಟ್ಟಿದೆ.

ದೊಡ್ಮನೆಯಿಂದ ಮೊದಲಿಗೆ ಐಶ್ವರ್ಯ, ನವಾಜ್, ದರ್ಶ್, ಮಯೂರಿ ನಂತರ ನೇಹಾ ಗೌಡ ಇದೀಗ ಸಾನಿಯಾ ಹೊರ ಬಂದಿದ್ದಾರೆ. ಮುಂದಿನ ವಾರ ಇನ್ಯಾವ ಸ್ಪರ್ಧಿ ಹೊರಬರಬಹುದು ಎಂಬ ಕುತೂಹಲ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಇರಬಹುದು.