Home Breaking Entertainment News Kannada ಫ್ಯಾನ್ಸ್‌ಗಳ ಅತಿರೇಕದ ವರ್ತನೆ | ಅಜಿತ್‌ v/s ವಿಜಯ್‌ ಅಭಿಮಾನಿಗಳಿಂದ ಪೋಸ್ಟರ್‌ ಹರಿದು...

ಫ್ಯಾನ್ಸ್‌ಗಳ ಅತಿರೇಕದ ವರ್ತನೆ | ಅಜಿತ್‌ v/s ವಿಜಯ್‌ ಅಭಿಮಾನಿಗಳಿಂದ ಪೋಸ್ಟರ್‌ ಹರಿದು ಗಲಾಟೆ | ಪೊಲೀಸರಿಂದ ಲಾಠಿ ಚಾರ್ಜ್‌

Hindu neighbor gifts plot of land

Hindu neighbour gifts land to Muslim journalist

ಕಾಲಿವುಡ್ ನಲ್ಲಿ ಅಜಿತ್ ಮತ್ತು ವಿಜಯ್ ಅಭಿಮಾನಿಗಳ ಟಾಕ್ ವಾರ್ ಜೋರಾಗಿ ನಡೆದಿದ್ದು, ಹೀಗಾಗಿ,ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕಾಲಿವುಡ್‌ನಲ್ಲಿ ಫ್ಯಾನ್ ವಾರ್ ತಾರಕಕ್ಕೇರಿದ್ದು, ತಲಾ ಅಜಿತ್ ಮತ್ತು ದಳಪತಿ ವಿಜಯ್ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದು ಕಿತ್ತಾಟ ತಾರಕಕ್ಕೇರಿದ ಘಟನೆ ನಡೆದಿದೆ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಆಗಾಗ ಕಂಡುಬರುತ್ತಿದ್ದ ಮಾತಿನ ಸಮರ ಇದೀಗ ಚಿತ್ರಮಂದಿರದ ಅಂಗಳಕ್ಕೂ ಲಗ್ಗೆ ಇಟ್ಟಿದ್ದು ವಿಜಯ್ ಹಾಗೂ ಅಜಿತ್ ಅಭಿಮಾನಿಗಳಿಬ್ಬರೂ ಚಿತ್ರದ ಪೋಸ್ಟರ್ ಹರಿದು ಕಿತ್ತಾಡಿಕೊಳ್ಳುವ ಮಟ್ಟಕ್ಕೆ ತಲುಪಿದೆ.

ವಾರಿಸು ಸಿನಿಮಾದಲ್ಲಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದು, ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶರತ್ ಕುಮಾರ್, ಶಾಮ್ ಪ್ರಭು, ಶ್ರೀಕಾಂತ್, ಪ್ರಕಾಶ್ ರಾಜ್, ಯೋಗಿ ಬಾಬು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಥಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾ ಮತ್ತು ಅಜಿತ್ ಕುಮಾರ್ ನಟನೆಯ ತುಣಿವು ಸಿನಿಮಾ ಒಂದೇ ದಿನ ತೆರೆಗೆ ಬಂದಿದ್ದು, ಸಂಕ್ರಾಂತಿ ಹಬ್ಬಕ್ಕೂ ಮೊದಲು ತೆರೆಗೆ ಬಂದ ತುಣಿವು ಮತ್ತು ವಾರಿಸು ಸಿನಿಮಾಗಳು ಅಭಿಮಾನಿಗಳಿಗೆ ಮನರಂಜನೆ ನೀಡುವ ಬದಲಿಗೆ ಜಗಳ ಕಿತ್ತಾಟವೆ ಹೆಚ್ಚಾಗಿದೆ.

ಕಾಲಿವುಡ್ ಬಾಕ್ಸ್ ಆಫೀಸ್ ವಾರ್ ಗಿಂತ ಅಭಿಮಾನಿಗಳ ವಾರ್ ಜೋರಾಗಿ ನಡೆದಿದ್ದು, ದಳಪತಿ ವಿಜಯ್ ಮತ್ತು ಅಜಿತ್ ಅಭಿಮಾನಿಗಳು ಸಿನಿಮಾ ನೋಡಲು ಚೆನ್ನೈನ ಚಿತ್ರಮಂದಿರದ ಮುಂದೆ ಹಾಜರಾಗಿದ್ದರು ಎನ್ನಲಾಗಿದೆ. ಚಿತ್ರಮಂದಿರದ ಹೊರಭಾಗದಲ್ಲಿದ್ದ ವಾರಿಸು ಪೋಸ್ಟರ್ ಅನ್ನು ಅಜಿತ್ ಅಭಿಮಾನಿಗಳು ಹರಿದು ಹಾಕಿದ್ದಾರೆ.

ಈ ಸಂದರ್ಭ ಮುಯ್ಯಿಗೆ ಮುಯ್ಯಿ ಎಂಬಂತೆ ವಿಜಯ್ ಅಭಿಮಾನಿಗಳು ಕೂಡ ತುಣಿವು ಪೋಸ್ಟರ್ ಹರಿದು ಹಾಕಿದ್ದು, ಪೋಸ್ಟರ್ ಹರಿದುಹಾಕುವ ಮೂಲಕ ಮನಸ್ತಾಪಕ್ಕೆ ಕಾರಣವಾಗಿ ಮಾತುಕತೆ ನಡೆದು ಜಗಳ ತಾರಕಕ್ಕೆ ಏರಿದೆ. ಈ ವೇಳೆ ಪೋಸ್ಟರ್ ಬೆಂಕಿ ಹಚ್ಚಲು ಮುಂದಾಗಿದ್ದು , ಪರಿಸ್ಥಿತಿ ಕೈ ಮೀರುವ ಸೂಚನೆ ದೊರೆಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅಜಿತ್ ಮತ್ತು ವಿಜಯ್ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡಿ ಅಭಿಮಾನಿಗಳನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಟ ಅಜಿತ್ ಮತ್ತು ವಿಜಯ್ ಬರೋಬ್ಬರಿ 8 ವರ್ಷಗಳ ಬಳಿಕ ಚಿತ್ರಮಂದಿರದಲ್ಲಿ ಮುಖಾಮುಖಿ ಯಾಗಿ ಎದುರಾಗುತ್ತಿದ್ದು, ಜನವರಿ 11ರಂದು ಇಬ್ಬರು ಸ್ಟಾರ್ ನಟರ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗಿದೆ. ಅಜಿತ್ ಸಿನಿಮಾ ನಿನ್ನ ರಾತ್ರಿಯೆ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದ್ದು, ವಿಜಯ್ ಸಿನಿಮಾಗಿಂತ ಮುಂಚಿತವಾಗಿಯೇ ತುಣಿವು ಸಿನಮಾ ಅಭಿಮಾನಿಗಳು ವೀಕ್ಷಿಸಿದ್ದು ಅದ್ದೂರಿಯಾಗಿ ಸಿನಿಮಾವನ್ನು ಸ್ವಾಗತ ಮಾಡಲಾಗಿದೆ.

ಹೆಚ್ ವಿನೋದ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬಂದಿದ್ದು ಬೋನಿ ಕಪೂರ್ ಬಂಡವಾಳ ಹೂಡಿದ್ದಾರೆ. ತುಣಿವು ಸಿನಿಮಾದ ಮೊದಲ ಪ್ರದರ್ಶನದ ಬಳಿಕ ವಿಜಯ್ ವಾರಿಸು ಸಿನಿಮಾ ರಿಲೀಸ್ ಆಗಿದೆ ಎನ್ನಲಾಗಿದೆ.