ರಾಜಕೀಯ

ಹಳಸಲು ಅನ್ನಕ್ಕೆ ಕಾದು ಕುಳಿತ ಜೆಡಿಎಸ್

ಅನ್ನ ಹಳಸಿತ್ತು ನಾಯಿ ಹಸಿದಿತ್ತು ಅನ್ನುವುದು ಒಂದು ಹಳೆಯ ಗಾದೆ ಮಾತು. ಇದೆ ಅರ್ಥ ಬರುವ ಇನ್ನೂ ಮಾತು ಇಂಗ್ಲಿಷಿನಲ್ಲಿ ಬಳಕೆಯಲ್ಲಿದೆ. ಎಲ್ಲಿ ಹೇಲು ಇರುತ್ತದೋ, ಅಲ್ಲೊಂದು ಇಂಟರ್ನ್ಯಾಷನಲ್ ನಾಯಿ ಕಾದು ಕೂತಿರುತ್ತದೆ ಎಂದು. ಈ ಮಾತುಗಳು ಇವತ್ತು ಜೆಡಿಎಸ್ ಪಕ್ಷದ ನಡವಳಿಕೆಗಳನ್ನು ನೋಡಿದಾಗ ನೆನಪಾಗುತ್ತಿದೆ. ಇವತ್ತು ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಸೀಟು ಬಿಟ್ಟು ಕೆಳಗಿಳಿದದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ 17 ಮಂದಿ ಶಾಶಕರ ರಾಜೀನಾಮೆಯಿಂದಾಗಿ. ಸಹಜವಾಗಿ, ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ನಿರೀಕ್ಷೆಯಂತೆಯೇ ಬಿಜೆಪಿಯ …

ಹಳಸಲು ಅನ್ನಕ್ಕೆ ಕಾದು ಕುಳಿತ ಜೆಡಿಎಸ್ Read More »

ಎಂ ಟಿ ಬಿ ನಾಗರಾಜ್ ಆದಾಯ ಪ್ರತಿ ತಿಂಗಳಿಗೆ 10 ಕೋಟಿ ರೂಪಾಯಿಗಳು!

ಎಂ ಟಿ ಬಿ ನಾಗರಾಜ್ ಅವರ ಇವತ್ತಿನ ಆಸ್ತಿಯ ಮೌಲ್ಯ 1195 ಕೋಟಿ ರೂಪಾಯಿಗಳು. ಕಳೆದ ಸಲ, ಮೇ 2018 ರಲ್ಲಿನ ವಿಧಾನಸಭಾ ಚುನಾವಣಾ ಸಂಧರ್ಭ ಎಂ ಟಿ ಬಿ ಯವರು 1015 ಕೋಟಿ ರೂಪಾಯಿಗಳ ಅಸ್ತಿಯನ್ನು ತಮ್ಮ ಮತ್ತು ಪತ್ನಿಯ ಹೆಸರಿನಲ್ಲಿ ಘೋಷಿಸಿಕೊಂಡಿದ್ದರು. ಒಟ್ಟಾರೆಯಾಗಿ ಆಸ್ತಿಯಲ್ಲಿ 180 ಕೋಟಿಗಳಷ್ಟು ಏರಿಕೆಯಾಗಿದೆ. ಪ್ರತಿಶತ ದೃಷ್ಟಿಯಲ್ಲಿ 12% ! ನಾವು ನೀವೆಲ್ಲ 180 ಕೋಟಿ ಗಳಿಸಬೇಕಾದರೆ ಎಷ್ಟು ವರ್ಷ ಬೇಕಾಗಬಹುದು, ಇವತ್ತಿನಿಂದ ಶುರುಮಾಡಿದರೆ? ಆದರೆ, ಎಂ ಟಿ ಬಿ …

ಎಂ ಟಿ ಬಿ ನಾಗರಾಜ್ ಆದಾಯ ಪ್ರತಿ ತಿಂಗಳಿಗೆ 10 ಕೋಟಿ ರೂಪಾಯಿಗಳು! Read More »

ಜೆಡಿಎಸ್ ಎಂಬ ರಾಜಕೀಯ ವ್ಯಸನ

ಇವತ್ತು ಜೆಡಿಎಸ್ ಮತ್ತೆ ಬಿಜೆಪಿಯ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸುತ್ತಿದೆ, ಸರ್ಕಾರ ಬೀಳಲು ಬಿಡಲ್ಲ, ಮತ್ತೆ ಚುನಾವಣೆಯ ಭಾರ ಜನರಿಗೆ ಆಗಬಾರದು ಎಂದು ಹೇಳುತ್ತಿದೆ. ಆದರೆ ಅದರ ಹಿಂದಿರುವುದು ಪಕ್ಕ ಸ್ವಾರ್ಥ ಲೆಕ್ಕಾಚಾರ. ಅದು ಸಿಬಿಐ ದಾಳದಿಂದ ಬಚಾವಾಗುವುದಿರಬಹುದು, ಸರ್ಕಾರದಿಂದ ಕೆಲಸ ಮಾಡಿಸಿಕೊಳ್ಳದಿರಬಹುದು,ಸಿದ್ದುನ ಹಣಿಯಲಿರಬಹುದು, ಜೆಡಿಎಸ್ ನಿಂದ ಹೊರಹೋಗಲು ಒಂದು ಕಾಲು ಹೊರಗಿಟ್ಟ ಅತೃಪ್ತರನ್ನು ನಿಯಂತ್ರಿಸಲಿರಬಹುದು, ಸ್ವಾರ್ಥ ಮನಸ್ಸಿಗೆ ಸಾವಿರ ಕಾರಣಗಳು ! ಜೆಡಿಎಸ್ ಎಂಬ ಸ್ವಾರ್ಥ ಸಾಧಕನ ಬದುಕನ್ನು ಮೊದಲಿನಿಂದ ಒಂದು ಬಾರಿ ವಿಸಿಟ್ ಮಾಡಿಬರುವುದು …

ಜೆಡಿಎಸ್ ಎಂಬ ರಾಜಕೀಯ ವ್ಯಸನ Read More »

ಮಂಗಳೂರು ಮಹಾನಗರಪಾಲಿಕೆಯಲ್ಲಿ ಮುಂದುವರೆದ ಬಿಜೆಪಿಯ ದಿಗ್ವಿಜಯ

ಒಟ್ಟು ಸೀಟುಗಳು : 60 ಬಿಜೆಪಿ : 44ಕಾಂಗ್ರೆಸ್ : 14ಎಸ್ಡಿಪಿಐ : 2 ಕಳೆದ ಬಾರಿ 2013 ರಲ್ಲಿ ನಡೆದ ಮಂಗಳೂರು ಮಹಾನಗರಪಾಲಿಕೆಯಲ್ಲಿ 34 ಸೀಟು ಪಡೆದಿದ್ದ ಕಾಂಗ್ರೆಸ್ ಅನ್ನು ಅಖಾಡದಲ್ಲಿ ಅಡ್ಡಾದಿಡ್ಡಿ ಕೆಡವಿ ಹಾಕಿದೆ ಬಿಜೆಪಿ. ನಿನ್ನೆ ಬಂದ 2019 ರ ಚುನಾವಣಾ ಫಲಿತಾಂಶದಲ್ಲಿ 44 ಸೀಟುಗಳನ್ನು ಪಡೆದ ಬಿಜೆಪಿ ಅಧಿಕಾರವನ್ನು ಹಿಡಿದಿದೆ. ಉಳಿದಂತೆ ಕಾಂಗ್ರೆಸ್ 14 ಸೀಟು, ಎಸ್ಡಿಪಿಐ 2 ಸೀಟುಗಳಿಗೆ ತೃಪ್ತವಾಗಿವೆ. ಕಳೆದ ಬಾರಿ ಜೆಡಿಎಸ್ 2 ಸೀಟುಗಳನ್ನು ಪಡೆದಿದ್ದರೆ, ಈ …

ಮಂಗಳೂರು ಮಹಾನಗರಪಾಲಿಕೆಯಲ್ಲಿ ಮುಂದುವರೆದ ಬಿಜೆಪಿಯ ದಿಗ್ವಿಜಯ Read More »

ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಈಗ ಅರ್ಹರು

ಕರ್ನಾಟಕದ ರಾಜಕೀಯ ಮತ್ತೆ ಬಿರುಸುಗೊಂಡಿದೆ. ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ 17 ಜನ ಅತೃಪ್ತ ಶಾಶಕರ ಭವಿಷ್ಯ ಇವತ್ತಿನಿಂದ ಅವರ ಕೈಯಲ್ಲಿದೆ. ಅವರ ಕೈಲಿದೆ ಅಂತಲೂ ಅನ್ನಬಹುದು ಅಥವಾ ಜನರ ಕೈಲಿದೆ ಅಂತ ಹೇಳುವುದು ಇನ್ನಷ್ಟು ಸೂಕ್ತ. ಎಷ್ಟೇ ಆದರೂ ಅವ್ರಿಗೆ ಓಟು ಕೊಟ್ಟು ಗೆಲ್ಲಿಸೋದು ಜನರೇ ತಾನೇ? ಸುಪ್ರೀಂ ಕೋರ್ಟು ಎಲ್ಲ 17 ಜನ ಶಾಶಕರನ್ನು ಅಮಾನತ್ತು ಮಾಡಿದ ಸ್ಪೀಕರ್ ಅವರ ಆದೇಶವನ್ನು ಮೇಲಕ್ಕೆತ್ತಿ ಹಿಡಿದಿದ್ದಾರೆ. ಆದರೆ ಸ್ಪೀಕರ್ ಅವರು, ಇನ್ನು ಮೂರೂವರೆ ವರ್ಷ ಗಳು …

ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಈಗ ಅರ್ಹರು Read More »

ಅಯೋಧ್ಯೆಯಲ್ಲಿ ರಾಮಮಂದಿರ ಪರವಾಗಿ ತೀರ್ಪಿನ ಸಂದರ್ಭ ಪ್ರಾಜ್ಞತೆ ಮೆರೆದ ಮುಸ್ಲಿಂಮರು

ಇದು ತುಂಬಾ ಅಚ್ಚರಿಯ ವಿಷಯ. ಭಾರತದ ಮುಸ್ಲಿಮರು ಬದಲಾಗಿದ್ದಾರೆ. ಧರ್ಮದ ವಿಷಯ ಬಂದಾಗ, ಧರ್ಮ ಮುಖ್ಯ, ಧರ್ಮ ಮಾತ್ರವೇ ಮುಖ್ಯ ಎಂಬ ನಿಲುವನ್ನು ಮುಸ್ಲಿಮರು ತಾಳುತ್ತಿದ್ದರೋ, ಅಂತಹ ಮುಸ್ಲಿಂ ಸಮುದಾಯ ಬದಲಾಗಿರುವ ಸ್ಪಷ್ಟ ನಿದರ್ಶನ ಈ ಅಯೋಧ್ಯೆಯ ರಾಮ ಮಂದಿರ ತೀರ್ಪಿನ ಸಂದರ್ಭ ಅವರು ತೋರಿದ ತಾಳ್ಮೆ ಮತ್ತು ಪ್ರಾಜ್ಞತೆ. ಶತಮಾನಗಳಿಂದ ಮಗ್ಗುಲ ಮುಳ್ಳಾಗಿ ತಿಕ್ಕಿ ತಿವಿದು ಧಾರ್ಮಿಕವಾಗಿ, ರಾಜಕೀಯವಾಗಿ ಭಾರತವನ್ನು ಜರ್ಝರಿತವಾಗಿ ಮಾಡಿದ, ಅಯೋಧ್ಯೆ ರಾಮಮಂದಿರ- ಬಾಬರಿ ಮಸೀದಿ, ಕೊನೆಗೂ ಹಿಂದೂಗಳ ಕೈಸೇರಿದೆ. ಆ ಮೂಲಕ …

ಅಯೋಧ್ಯೆಯಲ್ಲಿ ರಾಮಮಂದಿರ ಪರವಾಗಿ ತೀರ್ಪಿನ ಸಂದರ್ಭ ಪ್ರಾಜ್ಞತೆ ಮೆರೆದ ಮುಸ್ಲಿಂಮರು Read More »

ಸ್ವಾತಂತ್ರೋತ್ತರ ಸ್ವಾತಂತ್ರ ಹೋರಾಟಗಾರ ಟಿ ಎನ್ ಶೇಷನ್ ಇತಿಹಾಸದಲ್ಲಿ ಭದ್ರ

ಟಿ ಎನ್ ಶೇಷನ್ ಅವರು ತಮ್ಮ ವಯೋಸಹಜದಿಂದ ಪೀಡಿತರಾಗಿ ತಮ್ಮ 86 ನೆಯ ವಯಸ್ಸಿನಲ್ಲಿ ತೀರಿಹೋಗಿದ್ದಾರೆ. ಭಾರತದ ರಾಜಕೀಯ ವ್ಯವಸ್ಥೆಯ ಮೂಲವನ್ನೇ ‘ಸ್ವಚ್ಛಭಾರತ’ ಮಾಡಲು ಶ್ರಮಿಸಿದ್ದ ಮುಕುಟಮಣಿ ಕೆಳಗೆ ಬಿದ್ದಿದೆ. ಅದು 1990 ರ ಕಾಲ. ದೇಶದ ಹಲವು ರಾಜ್ಯಗಳಲ್ಲಿ ಚುನಾವಣಾ ಸಮಯದಲ್ಲಿ ಬೂತ್ ಕ್ಯಾಪ್ಚರಿಂಗ್ ನಡೆಯುತ್ತಿತ್ತು. ಬಿಹಾರ, ಉತ್ತರಪ್ರದೇಶ ಮುಂತಾದೆಡೆಯಲ್ಲಿ ತೋಳುಬಲ ರಾರಾಜಿಸುತ್ತಿತ್ತು. ದೇಶಾದ್ಯಂತ ಝಣ ಝಣ ಹಣದ ಕಾಂಚಾಣ ನೃತ್ಯ. ಎಲ್ಲಿ ಹೋದರಲ್ಲಿ ಕಟೌಟುಗಳು, ಮೈಕುಗಳು, ಪಟಾಕಿಗಳು, ಮತದಾರರಿಗೆ ನಾನಾ ತರದ ಆಮಿಷಗಳು. ಇದು …

ಸ್ವಾತಂತ್ರೋತ್ತರ ಸ್ವಾತಂತ್ರ ಹೋರಾಟಗಾರ ಟಿ ಎನ್ ಶೇಷನ್ ಇತಿಹಾಸದಲ್ಲಿ ಭದ್ರ Read More »

ರಾಹುಲ್ ಸಹಿತ ಕಾಂಗ್ರೆಸ್ ನ ಮುಂಚೂಣಿ ನಾಯಕರುಗಳು ಕಾಂಗ್ರೆಸ್ ಅನ್ನು ಮುಳುಗಿಸಲು ಕಂಕಣ ಬದ್ಧ

ಕಾಂಗ್ರೆಸ್ ಗೆ ಮತ್ತೆ ಮುಖಭಂಗವಾಗಿದೆ. ಮುಖ & ಮತ್ತೊಂದು ಭಂಗ ಆಗುವುದು ಕಾಂಗ್ರೆಸ್ ಗೆ ಹೊಸದಲ್ಲ. ದಿನಾ ಒಂದಲ್ಲಾ  ಒಂದು ವಿಷಯಗಳಲ್ಲಿ ಅನಾವಶ್ಯಕವಾಗಿ ತಲೆ ತೂರಿಸುವುದು ಅಥವಾ, ಮೂಗು ಹೊಕ್ಕಿಸುವುದು ಅಥವಾ ಕೈಯಾಡಿಸುವುದು ಮತ್ತು ಶೇಪ್ ಔಟ್ ಆಗುವುದು ಅದು ಕಾಂಗ್ರೆಸ್ ನ ದಿನ ನಿತ್ಯದ ದಿನಚರಿ. ಕಾಂಗ್ರೆಸ್ ಗೆ ಅದು ಬೆಳಿಗ್ಗೆ ನಾವು ಎದ್ದು ಮುಖ ತೊಳೆದು ಬ್ರಷ್ ಮಾಡುವಷ್ಟರಮಟ್ಟಿಗಿನ ದಿನನಿತ್ಯದ ದಿನಚರಿಯಾಗಿದೆ. ಈಗ ಅದಕ್ಕೊಂದು ಸೇರ್ಪಡೆ ಇವತ್ತಿನ ರಫೇಲ್ ಯುದ್ಧವಿಮಾನ ಖರೀದಿಯಲ್ಲಿ ನಡೆದಿದೆಯೆನ್ನಬಹುದಾದ ಅವ್ಯವಹಾರದ …

ರಾಹುಲ್ ಸಹಿತ ಕಾಂಗ್ರೆಸ್ ನ ಮುಂಚೂಣಿ ನಾಯಕರುಗಳು ಕಾಂಗ್ರೆಸ್ ಅನ್ನು ಮುಳುಗಿಸಲು ಕಂಕಣ ಬದ್ಧ Read More »

ಶಬರಿಮಲೆಗೆ ಸ್ತ್ರೀಯರ ಪ್ರವೇಶದ ಬಗ್ಗೆ ವಿಸ್ತೃತ ಚರ್ಚೆಯಾಗಬೇಕು: ಸುಪ್ರೀಂ

ಇವತ್ತು ಒಟ್ಟು ಎರಡು ತೀರ್ಪುಗಳು ಸುಪ್ರೀಂ ಕೋರ್ಟಿನಿಂದ ಬಂದಿದೆ. ಮೊದಲನೆಯದು ಶಬರಿಮಲೆಗೆ ಸ್ತ್ರೀಯರ ಪ್ರವೇಶ ಬೇಕೇ ಬೇಡವೇ ಎಂದು. ಕಳೆದ 2018 ರ ಸೆಪ್ಟೆಂಬರ್ ನಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟು ಮಹಿಳೆಯರಿಗೆ ಶಬರಿಮಲೆಯ ದೇವಳದ ಬಾಗಿಲನ್ನು ತೆರೆದುಬಿಟ್ಟಿತ್ತು. ಈವರೆಗೆ ಶಬರಿಮಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ 2018 ರ ತೀರ್ಪಿನ ವಿರುದ್ಧ ಬರೋಬ್ಬರಿ 60 ಕ್ಕೂ ಹೆಚ್ಚು ಅರ್ಜಿಗಳು ದಾಖಲಾಗಿದ್ದವು. ಶಬರಿಮಲೆ ಪ್ರಕರಣದಲ್ಲಿ ಗುರುವಾರ ಬಹುಮತದ ತೀರ್ಪನ್ನು ಓದಿದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, …

ಶಬರಿಮಲೆಗೆ ಸ್ತ್ರೀಯರ ಪ್ರವೇಶದ ಬಗ್ಗೆ ವಿಸ್ತೃತ ಚರ್ಚೆಯಾಗಬೇಕು: ಸುಪ್ರೀಂ Read More »

ಮೋದಿಯ ಚೇಂಜ್ ವಿಥ್ ಇನ್ ಮತ್ತು ಎಸ್ಪಿ ಬಾಲಸುಬ್ರಮಣ್ಯಮ್ & ಜಗ್ಗೇಶ್

ಇದು ನರೇಂದ್ರ ಮೋದಿಯವರು ಕಳೆದ ಅಕ್ಟೋಬರ್ 29 ರಂದು ತಮ್ಮ ಮನೆಯಲ್ಲಿ ಆಯೋಜಿಸಿದ್ದ ‘ಚೇಂಜ್ ವಿಥ್ ಇನ್’ ಕಾರ್ಯಕ್ರಮದ ಕುರಿತಾದದ್ದು. ಆ ಸಭೆಗೆ ಹೆಚ್ಚಿನ ಎಲ್ಲ ಉತ್ತರ ಭಾರತೀಯ ನಟ ನಟಿಯರನ್ನು ಆಹ್ವಾನಿಸಿದ್ದು, ದಕ್ಷಿಣ ಭಾರತೀಯರನ್ನು ಕಡೆಗಣಿಸಲಾಗಿದೆ ಎಂದು ನಮ್ಮ ಕನ್ನಡ ನಟ ಮತ್ತು ಬಿಜೆಪಿಯದೇ ವಿಧಾನ ಪರಿಷತ್ ಸದಸ್ಯ ಜಗ್ಗೇಶ್ ರವರು ಮೋದಿಯವರ ಮೇಲೆ ಮುನಿಸಿಕೊಂಡದ್ದು ನಮಗೆಲ್ಲ ಗೊತ್ತೇ ಇದೆ. ಈಗ, ಎಸ್ ಪಿ ಬಾಲಸುಬ್ರಮಣ್ಯಂ ಅವರ ಸರದಿ. ಎಸ ಪಿ ಬಿ ಯವರು ತಮ್ಮ …

ಮೋದಿಯ ಚೇಂಜ್ ವಿಥ್ ಇನ್ ಮತ್ತು ಎಸ್ಪಿ ಬಾಲಸುಬ್ರಮಣ್ಯಮ್ & ಜಗ್ಗೇಶ್ Read More »

error: Content is protected !!
Scroll to Top