New Delhi: ಬ್ಯಾಂಕ್ ನೌಕರರಿಗೆ ಮಾರ್ಚ್ ನಲ್ಲಿ 14 ದಿನ ರಜೆ ಸಿಗಲಿದೆ
ನವದೆಹಲಿ: ಇನ್ನೂ ಬ್ಯಾಂಕ್ ಆರ್ಥಿಕ ವರ್ಷ ಮುಗಿದಿದೆ. ಅದರಂತೆ ಮಾರ್ಚ್ ನಲ್ಲಿ 14 ದಿನಗಳ ರಜೆ ಇರಲಿದೆ. ಗುಡ್ ಫ್ರೈಡೇ, ಮಹಾಶಿವರಾತ್ರಿ, ಹೋಳಿ, ಸೇರಿಸಿ ಇತರ ರಜೆಗಳು ಇವೆ. ಭಾನುವಾರ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇರಲಿವೆ. ಮಾರ್ಚ್ ತಿಂಗಳು ಬ್ಯಾಂಕ್ ನ ಆರ್ಥಿಕ ವರ್ಷದ ಕೊನೆಯ ದಿನವಾಗಿದೆ. ನೀವು ರಜೆ ಇಲ್ಲದ ದಿನವನ್ನು ನೋಡಿಕೊಂಡು ಹೋಗುವುದು ಒಳ್ಳೆಯದು . ಆದರೆ ಎಟಿಎಂ, ಹಾಗೂ ಆನ್ಲೈನ್ ಬ್ಯಾಂಕ್ ಸೇವೆಗಳು ಸದಾ ಲಭ್ಯವಿರುತ್ತದೆ ಎಂದು ತಿಳಿದು ಬಂದಿದೆ.
ಇಷ್ಟೇ ಅಲ್ಲದೇ ಪ್ರಾದೇಶಿಕ ಹಬ್ಬಗಳು ಹಾಗೂ ಆಚರಣೆಗಳಿಗೆ ರಜೆ ಇರಲಿದೆ. ಸಾರ್ವಜನಿಕ ಮತ್ತು ಗೆಜೆಟ್ ರಜೆಗಳು ಮಾತ್ರ ಎಲ್ಲ ಬ್ಯಾಂಕು ಗಳಿಗೂ ಅನ್ವಯವಾಗುತ್ತದೆ. ಆದ್ರೆ ರಜೆ ದಿನಗಳಲ್ಲಿ ಆನ್ಲೈನ್ ಸೇವೆಗಳು ಇರಲಿವೆ. ಒಂದು ವೇಳೆ ಗೃಹ ಸಾಲ, ವಾಹನ ಸಾಲ ವಿದ್ದರೆ ರಜೆ ಇಲ್ಲದ ದಿನ ಬ್ಯಾಂಕ್ ಗೆ ಭೇಟಿ ನೀಡುವುದು ಉತ್ತಮ.
ಸಾಮಾನ್ಯವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 3 ರೀತಿಯ ರಜೆಗಳನ್ನು ನೀಡುತ್ತದೆ . ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜೆ, ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು,ಅಕೌಂಟ್ಸ್ ಕ್ಲೋಸಿಂಗ್ ರಜೆಗಳು. ಈ ಎಲ್ಲಾ ರಜೆಗಳು ಪ್ರಾದೇಶಿಕ, ವಿದೇಶಿ ವಲಯ,ಖಾಸಗಿ ವಲಯ, ಕೋ ಆಪರೇಟಿವ್ ಬ್ಯಾಂಕ್ ಗಳಿಗೆ ಇರಲಿದೆ.
ರಜಾಪಟ್ಟಿ ಹೀಗಿದೆ:
ಮಾರ್ಚ್ 1ಕ್ಕೆ ಛಪ್ ಛರ್ ಕುತ್, ಮಾ.3ಕ್ಕೆ ಭಾನುವಾರ, ಮಾ.8ಕ್ಕೆ ಮಹಾ ಶಿವರಾತ್ರಿ ಮಾ.9ಕ್ಕೆ ಎರಡನೇ ಶನಿವಾರ, ಮಾ.10 ಭಾನುವಾರ, ಮಾ 17 ಭಾನುವಾರ, ಮಾ.22 ಬಿಹಾರ್ ದಿವಸ್, ಮಾ.23 ನಾಲ್ಕನೇ ಶನಿವಾರ, ಮಾ.24 ಭಾನುವಾರ, ಮಾ.25 ಹೋಳಿ, ಮಾ.26 ಯೋಸ್ಯಾಂಗ್ ಎರಡನೇ ದಿನ, ಮಾ.27 ಹೋಳಿ, ಮಾ.29ಗುಡ್ ಫ್ರೈಡೇ, ಮಾ.31 ಭಾನುವಾರ.
ಇಷ್ಟು ರಜೆ ಸಿಗಲಿವೆ.