Helmet Rules: ಹೆಲ್ಮೆಟ್ ಹಾಕಿದ್ರೂ ಬೀಳುತ್ತೆ 2,000 ದಂಡ !! ಯಾಕೆ ಗೊತ್ತಾ?

Helmet Rules: ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಸಂಚಾರಿ ಪೊಲೀಸರು ವಾಹನ ಸವಾರರಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಅದಾಗ್ಯೂ, ಪದೇಪದೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರು ಹೆಚ್ಚಾಗುತ್ತಲೇ ಇದ್ದಾರೆ. ಅದರಲ್ಲೂ ಈ ಹೆಲ್ಮೆಟ್‌ ಬಗ್ಗೆ ನಿರ್ಲಕ್ಷ್ಯ, ಹಾಕದಿದ್ರೆ ಏನಾಗ್ತದೆ ಅನ್ನೋ ಉಡಾಫೆ ಮಾತಾಡುವರೇ ಹೆಚ್ಚು. ಹೀಗಿರುವವರಿಗೆ ಬಿಸಿ ಮುಟ್ಟಿಸೋ ಸುದ್ದಿ ಬಂದಿದೆ. ಅದೇನೆಂದರೆ ಹೆಲ್ಮೆಟ್ ಹಾಕಿದಿದ್ರೆ ಮಾತ್ರವಲ್ಲ, ಹೆಲ್ಮೆಟ್(Helmet rules)ಹಾಕಿದರೂ 2,000 ದಂಡ ಕಟ್ಟಬೇಕಾದೀತು.

ಇದೇನು ವಿಚಿತ್ರ ಸುದ್ದಿ ಅಂದುಕೊಳ್ಳಬೇಡಿ. ಸಾರಿಗೆ ಇಲಾಖೆಗೆ ಹೆಲ್ಮೆಟ್ ಹಾಕಿದರೂ ದಂಡ ವಸೂಲಿಮಾಡುವ ಅಧಿಕಾರವಿದೆ. ಆದರೆ ಅದು ಎಲ್ಲರಿಗೂ ಅಲ್ಲ. ಬದಲಿಗೆ ಕಳಪೆ ಮಟ್ಟದ ಹೆಲ್ಮೆಟ್ ಧರಿಸಿದವರಿಗೆ.

ಹೌದು, ಹೆಲ್ಮೆಟ್ ಧರಿಸುವ ನಿಯಮಗಳನ್ನು (Traffic Rules) ಸರ್ಕಾರ ಬದಲಾಯಿಸಿ ಫೈನ್ ನ ಮೊತ್ತವನ್ನು ಹೆಚ್ಚಿಸಿದೆ. 194 ಡಿ ಎಂ ವಿ ಎ ಅಡಿಯಲ್ಲಿ ಹೆಲ್ಮೆಟ್ ಧರಿಸದೇ ಇದ್ದಾಗ ಸಾವಿರ ರೂಪಾಯಿಗಳು ಹಾಗೂ ಧರಿಸಿದ ಹೆಲ್ಮೆಟ್ ದೋಷಪೂರಿತವಾದದಲ್ಲಿ ಒಂದು ಸಾವಿರ ರೂಪಾಯಿಗಳ ದಂಡವನ್ನು ವಿಧಿಸಬಹುದಾಗಿದೆ. ಹೀಗಾಗಿ ಹೆಲ್ಮೆಟ್ ಧರಿಸಿವುದು ಹೇಗೆ ಅಗತ್ಯವೋ ಧರಿಸಿದ ಹೆಲ್ಮೆಟ್ ನ ಗುಣಮಟ್ಟ ಚೆನ್ನಾಗಿರುವುದು ಕೂಡ ಅಷ್ಟೇ ಅಗತ್ಯ. ಹೀಗೆ ಒಟ್ಟಾಗಿ 2,000 ಗಳ ಚಲನ್ ಅನ್ನು ಕೂಡ ನಿಮಗೆ ಕೊಡಬಹುದಾಗಿದೆ.

Leave A Reply

Your email address will not be published.