ಉಡುಪಿ

ಕಾರ್ಕಳ:ಕಾರು ಹಾಗೂ ಆಟೋ ನಡುವೆ ಭೀಕರ ಅಪಘಾತ|ಆಟೋ ಚಾಲಕ ಸ್ಥಳದಲ್ಲೇ ಸಾವು

ಕಾರ್ಕಳ: ಮಿಯ್ಯಾರು ಚರ್ಚಿನ ಬಳಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಓರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತರು ಘಟನೆಯಲ್ಲಿ ಆಟೋ ಚಾಲಕ ಚಂದ್ರಶೇಖರ ಸಾವನ್ನಪ್ಪಿದ್ದು,ಅವರ ಸಹೋದರ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರ ಸಹೋದರರಿಗೆ ಅನಾರೋಗ್ಯ ಇದ್ದ ಕಾರಣ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದ್ದು,ಅಪಘಾತದ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ.ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು,ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …

ಕಾರ್ಕಳ:ಕಾರು ಹಾಗೂ ಆಟೋ ನಡುವೆ ಭೀಕರ ಅಪಘಾತ|ಆಟೋ ಚಾಲಕ ಸ್ಥಳದಲ್ಲೇ ಸಾವು Read More »

ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ : ವೇಳಾಪಟ್ಟಿ ಪ್ರಕಟ, ಹೆಚ್ಚಿನ ಮಾಹಿತಿ ಇಲ್ಲಿದೆ

ಉಡುಪಿ : 2020-21 ನೇ ಸಾಲಿನ ಸರಕಾರಿ ಪ್ರೌಢಶಾಲಾ ಶಿಕ್ಷಕರ ಅಂತರ್ ಘಟಕ ವಿಭಾಗದ ಹೊರಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ಗೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಕೌನ್ಸಿಲಿಂಗ್ ಮಂಗಳವಾರದಿಂದ ಪ್ರಾರಂಭಗೊಳ್ಳಲಿದೆ. ಸಹಶಿಕ್ಷಕರ ಕ್ರಮಸಂಖ್ಯೆ 151-300 ರವರೆಗಿನ 150 ಅರ್ಜಿಗಳಿಗೆ ಜನವರಿ 25 ರಂದು, ಕ್ರಮ ಸಂಖ್ಯೆ 301-500 ರವರೆಗಿನ 200 ಅರ್ಜಿಗಳಿಗೆ ಜನವರಿ 27 ರಂದು, ಕ್ರ.ಸಂಖ್ಯೆ 501 ರಿಂದ 700 ರವರೆಗಿನ 200 ಅರ್ಜಿಗಳಿಗೆ ಜನವರಿ 28 ರಂದು, ಕ್ರ. ಸಂಖ್ಯೆ 701 ರಿಂದ 900 …

ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ : ವೇಳಾಪಟ್ಟಿ ಪ್ರಕಟ, ಹೆಚ್ಚಿನ ಮಾಹಿತಿ ಇಲ್ಲಿದೆ Read More »

ಹಿರಿಯ ಯಕ್ಷಗಾನ ಕಲಾವಿದ, ಸ್ತ್ರೀ ಪಾತ್ರಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ!!

ಉಡುಪಿ: ಸತತವಾಗಿ ಹಲವು ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಬಣ್ಣಹಚ್ಚಿ ಕಲಾ ಸೇವೆಗೈದ ಹಿರಿಯ ಕಲಾವಿದ, ಸ್ತ್ರೀ ಪಾತ್ರಧಾರಿ ಉಡುಪಿ ಜಿಲ್ಲೆಯ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನಹೊಂದಿದ್ದಾರೆ. ಬಸ್ರೂರು ಸಮೀಪದ ಮಾರ್ಗೋಳಿ ಯಲ್ಲಿ ಜನಿಸಿದ್ದ ಗೋವಿಂದ ಶೇರಿಗಾರ್ ಬಾಲ್ಯದಿಂದಲೇ ರಂಗದತ್ತ ತನ್ನನ್ನು ತಾನು ಆಕರ್ಷಣೆಗೊಂಡು ಹಲವು ವರ್ಷಗಳಿಂದ ಯಕ್ಷರಂಗದಲ್ಲಿ ತನ್ನ ಸೇವೆ ಸಲ್ಲಿಸುತ್ತಾ ಬಂದಿದ್ದರು. ಮಂದಾರ್ತಿ ಮೇಳ, ಮಾರಣಕಟ್ಟೆ ಮೇಲೆ, ಕಮಲಶಿಲೆ ಮೇಲೆ ಹೀಗೆ ಹಲವು ಮೇಲಗಳಲ್ಲಿ ಸೇವೆ ಸಲ್ಲಿಸಿದ ಶೇರಿಗಾರ್ ನಿಧನಕ್ಕೆ ಯಕ್ಷ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.

ಉಡುಪಿ ಕಾಲೇಜು ಸ್ಕಾರ್ಫ್ ವಿವಾದಕ್ಕೆ ಇಂದು ತೆರೆ ಸಾಧ್ಯತೆ| ಡ್ರೆಸ್ ಕೋಡ್ ಬಗ್ಗೆ ಇಂದು ನಿರ್ಧಾರ, ಬಿ‌.ಸಿ.ನಾಗೇಶ್ ಹಾಗೂ ಸಿಎಂ ಚರ್ಚೆ

ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ‌ ಚರ್ಚೆ ನಡೆಸಲಿದ್ದಾರೆ. ಉಡುಪಿ ಸರಕಾರಿ ಕಾಲೇಜಿನಲ್ಲಿ ತಲೆ ಎತ್ತಿರುವ ಸ್ಕಾರ್ಫ್ ವಿವಾದಕ್ಕೆ‌ ಸಂಬಂಧಿಸಿದಂತೆ ರಾಜ್ಯ ಸರಕಾರ ಆದೇಶ ಹೊರಡಿಸುವ ಸಾದ್ಯತೆ ಇದ್ದು,ಈ ವಿವಾದಕ್ಕೆ ಸೋಮವಾರ ತೆರೆ ಎಳೆಯಲು ರಾಜ್ಯ ಸರಕಾರ ಮುಂದಾಗಿದೆ. ಉಡುಪಿ ಸರಕಾರಿ ಕಾಲೇಜಿನಲ್ಲಿ ಆರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ‌ ತರಗತಿಗೆ ಹಾಜರಾಗಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ …

ಉಡುಪಿ ಕಾಲೇಜು ಸ್ಕಾರ್ಫ್ ವಿವಾದಕ್ಕೆ ಇಂದು ತೆರೆ ಸಾಧ್ಯತೆ| ಡ್ರೆಸ್ ಕೋಡ್ ಬಗ್ಗೆ ಇಂದು ನಿರ್ಧಾರ, ಬಿ‌.ಸಿ.ನಾಗೇಶ್ ಹಾಗೂ ಸಿಎಂ ಚರ್ಚೆ Read More »

ಅಂತ್ಯ ಕಾಣದ ಉಡುಪಿ ಪಿಯು ಕಾಲೇಜ್ ‘ಹಿಜಾಬ್ ‘ಧರಿಸುವ ಪ್ರಕರಣ|ಮುಂದುವರಿದು ಬಿಜೆಪಿ-ಕಾಂಗ್ರೆಸ್ ನಡುವೆ ವಾಗ್ವಾದ |ಹಿಜಾಬ್‌ಗೆ ಅವಕಾಶ ನೀಡಿದರೆ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಹಿಂದೂ ಹುಡುಗರು ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹಾಜರು -ಹಿಂದೂ ಜಾಗರಣ ವೇದಿಕೆ|

ಉಡುಪಿ: ಮಹಿಳಾ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಳೆದ ಮೂರು ವಾರಗಳ ಹಿಂದೆ ನಡೆದ ಹಿಜಾಬ್ ಧರಿಸಿದ ಪ್ರಕರಣ ದಿನದಿಂದ ದಿನಕ್ಕೆ ಮುಂದುವರಿಯುತ್ತಲೇ ಇದ್ದು,ಧರ್ಮಗಳ ಪ್ರತಿಭಟನೆಗೆ ಅಂತ್ಯವಾಗದೆ,ಇದರ ಜೊತೆಗೆ ರಾಜಕೀಯ ಪಕ್ಷಗಳೂ ಸೇರಿಕೊಳ್ಳುತ್ತಿವೆ. ಮಸ್ಲಿಂ ಯುವತಿಯರು ಹಿಜಾಬ್ ಧರಿಸಿದರೇ ತರಗತಿ ಪ್ರವೇಶಿಸಲು ಬಿಡುವುದಿಲ್ಲ,ಇದು ಕಾಲೇಜಿನ ಸಮವಸ್ತ್ರ ನಿಯಮಕ್ಕೆ ವಿರುದ್ಧವಾಗಿದೆ ಎಂದು ಸ್ಥಳೀಯ ಬಿಜೆಪಿ ಮುಖಂಡರ ನೇತೃತ್ವದ ಕಾಲೇಜು ಅಭಿವೃದ್ಧಿ ಮಂಡಳಿ ಪಟ್ಟು ಹಿಡಿದಿದೆ. ಕ್ಯಾಂಪಸ್ ನಲ್ಲಿ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ, ಇದನ್ನು ವಿರೋಧಿಸಿ ಪಾಪ್ಯುಲರ್ ಫ್ರಂಟ್ …

ಅಂತ್ಯ ಕಾಣದ ಉಡುಪಿ ಪಿಯು ಕಾಲೇಜ್ ‘ಹಿಜಾಬ್ ‘ಧರಿಸುವ ಪ್ರಕರಣ|ಮುಂದುವರಿದು ಬಿಜೆಪಿ-ಕಾಂಗ್ರೆಸ್ ನಡುವೆ ವಾಗ್ವಾದ |ಹಿಜಾಬ್‌ಗೆ ಅವಕಾಶ ನೀಡಿದರೆ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಹಿಂದೂ ಹುಡುಗರು ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹಾಜರು -ಹಿಂದೂ ಜಾಗರಣ ವೇದಿಕೆ| Read More »

ಕಾಂಗ್ರೆಸ್ ಯುವ ನಾಯಕಿಗೆ ಚೂರಿ ಇರಿತ ,ಆಸ್ಪತ್ರೆಗೆ ದಾಖಲು

ಉಡುಪಿ : ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೀನಾ ಡಿ’ಸೋಜಾ(35) ಅವರಿಗೆ ನೆರೆ ಮನೆಯಾತ ಚೂರಿಯಿಂದ ಇರಿದ ಘಟನೆ ಜ. 21ರ ಶುಕ್ರವಾರ ರಾತ್ರಿ ನಡೆದಿದೆ. ಮಹಿಳೆಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಡಿತದ ಚಟ ಹೊಂದಿದ್ದ ನೆರೆಮನೆಯ ಸುಮಾರು 45 ವರ್ಷ ಪ್ರಾಯದ ವ್ಯಕ್ತಿಯು ಕ್ಷುಲ್ಲಕ ಕಾರಣಗಳಿಗಾಗಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.

ಮಂಗಳೂರು : ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಸತಾಯಿಸಿ ವಿಕೃತಿ‌ ಮೆರೆದಾತನ ಬಂಧನ

ಮಂಗಳೂರು : ಮಂಗಳೂರು – ಉಡುಪಿ ಹೆದ್ದಾರಿಯಲ್ಲಿ ಆಂಬ್ಯುಲೆನ್ಸ್ ಗೆ ದಾರಿ ಬಿಡದೆ ಸತಾಯಿಸಿದ ಕೇಸ್ ಗೆ ಸಂಬಂಧಿಸಿದಂತೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಹೆಸರು ಮೋನಿಶ್. ಈತನನ್ನು ಬಂಧಿಸಲಾಗಿದೆ. ಈತನ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಮಂಗಳೂರು ನಗರ ಉತ್ತರ ಸಂಚಾರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279 ಹಾಗೂ ಭಾರತೀಯ ಮೋಟಾರ್ ವಾಹನ ಕಾಯ್ದೆಯ 184 ರ ಅಡಿ ಪ್ರಕರಣ ದಾಖಲಾಗಿದೆ. ಘಟನೆ ವಿವರ : ಬುಧವಾರ ( ನಿನ್ನೆ) ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ …

ಮಂಗಳೂರು : ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಸತಾಯಿಸಿ ವಿಕೃತಿ‌ ಮೆರೆದಾತನ ಬಂಧನ Read More »

ಹಬ್ಬಕ್ಕೆ ಹೋಗುತ್ತಿದ್ದ ಮಹಿಳೆ ಅಪಘಾತಕ್ಕೆ ಬಲಿ | ಕೆಲವೇ ದಿನಗಳ ಹಿಂದೆ ಕುವೈಟ್‌ ‌ನಿಂದ ಊರಿಗೆ ಬಂದಿದ್ದರು

ಉಡುಪಿ : ಪತಿ ಮತ್ತು ಮಗನೊಂದಿಗೆ ಸಾಂತ್ಮಾರಿ ಹಬ್ಬಕ್ಕೆ ಹೋಗುತ್ತಿದ್ದ ಮಹಿಳೆಯೋರ್ವರು ರಸ್ತೆ ಅಪಘಾತಕ್ಕೆ ಒಳಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಬುಧವಾರ ನಿಧನ ಹೊಂದಿದರು. ಕೆಲವೇ ದಿನಗಳ ಹಿಂದೆ ಕುವೈಟ್‌ನಿಂದ ಆಗಮಿಸಿದ್ದ ಪತಿ ಅನಿಲ್ ಪಿಂಟೊ ಮತ್ತು 3 ವರ್ಷದ ಮಗನೊಂದಿಗೆ ಕೋಟದಲ್ಲಿರುವ ತನ್ನ ತಂದೆ ತಾಯಿ ಮನೆಗೆ ದ್ವಿಚಕ್ರ ವಾಹನದಲ್ಲಿ ಸೋಮವಾರ ತೆರಳುತ್ತಿದ್ದ ಸರಿತಾ ಪಿಂಟೊ (38), ಬ್ರಹ್ಮಾವರದಲ್ಲಿ ನಡೆದ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಪತಿ ಮತ್ತು ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, …

ಹಬ್ಬಕ್ಕೆ ಹೋಗುತ್ತಿದ್ದ ಮಹಿಳೆ ಅಪಘಾತಕ್ಕೆ ಬಲಿ | ಕೆಲವೇ ದಿನಗಳ ಹಿಂದೆ ಕುವೈಟ್‌ ‌ನಿಂದ ಊರಿಗೆ ಬಂದಿದ್ದರು Read More »

ಹಳೆಯಂಗಡಿ:ನಂದಿನಿ ನದಿಯ ನೀರಿನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆ|ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹಳೆಯಂಗಡಿ :ಕೊಪ್ಪಳದ ಅಣೆಕಟ್ಟು ಬಳಿಯ ರೈಲ್ವೆ ಸೇತುವೆ ಕೆಳಗಡೆ ನಂದಿನಿ ನದಿಯ ನೀರಿನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾದ ಘಟನೆ ವರದಿಯಾಗಿದೆ. ಹಳೆಯಂಗಡಿ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿಯ ಪಡುಪಣಂಬೂರು ಗ್ರಾಮ ಪಂಚಾಯತ್‌ನ ಬೆಳ್ಳಾಯರು ಗ್ರಾಮದ ನಿವಾಸಿ ಗಿರಿಯಪ್ಪ ಶೆಟ್ಟಿಗಾರ್ (74) ಎಂಬುವವರೆಂದು ಗುರುತಿಸಲಾಗಿದೆ. ಮೃತರು ತೆಂಗಿನ ಕಟ್ಟೆ ಕಟ್ಟುವುದು ಸಹಿತ ಕೂಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.ಇವರು ತಮ್ಮ ಮನೆಯಿಂದ ಕಟ್ಟಿಗೆ ತರಲು ತೆರಳಿದ್ದರು ಎಂದು ತಿಳಿದು ಬಂದಿದ್ದು,ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಉಡುಪಿ : ಹಿರಿಯ ಪತ್ರಕರ್ತ, ಖ್ಯಾತ ಸಂಗೀತ ನಿರ್ದೇಶಕ ವಾಸುದೇವ ಭಟ್ ನಿಧನ

ಉಡುಪಿ : ಖ್ಯಾತ ಸಂಗೀತ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ, ಇಂದ್ರಾಳಿಯ ನಿವಾಸಿ ವಾಸುದೇವ ಭಟ್ ನಿಧನರಾಗಿದ್ದಾರೆ‌. ಉಡುಪಿಯಲ್ಲಿ ನಾದವೈಭವಂ ಎಂಬ ಕಲಾ ಸಂಘಟನೆಯನ್ನು ಹುಟ್ಟು ಹಾಕಿದ ಕೀರ್ತಿ ವಾಸುದೇವ ಭಟ್ ಅವರಿಗೆ ಸಲ್ಲುತ್ತದೆ. 1994 ರಲ್ಲಿ ಭುವನ ಜ್ಯೋತಿ ಎಂಬ ಐದು ಭಾಷೆಗಳಲ್ಲಿ ರಚಿತವಾದ ಪ್ರಭು ಯೇಸು ಸ್ವಾಮಿಯ ಜೀವನಾಧಾರಿತ ಚಲನಚಿತ್ರ ತಯಾರಿಸಿ ಹಲವರಿಗೆ ಪಾತ್ರ ನೀಡಿದ್ದರು. ಅನೇಕ ಸಂಗೀತ ನೃತ್ಯ ರೂಪಕ ಹಾಗೂ ಚಲನಚಿತ್ರಗಳನ್ನು ರಚಿಸಿ ನಿರ್ದೇಶಿಸಿ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡವರು ವಾಸುದೇವ …

ಉಡುಪಿ : ಹಿರಿಯ ಪತ್ರಕರ್ತ, ಖ್ಯಾತ ಸಂಗೀತ ನಿರ್ದೇಶಕ ವಾಸುದೇವ ಭಟ್ ನಿಧನ Read More »

error: Content is protected !!
Scroll to Top