Udupi: ದ.ಕ ದಲ್ಲಿ ಬ್ರಿಜೇಶ್‌ ಚೌಟಾ, ಉಡುಪಿ ಶ್ರೀನಿವಾಸ್‌ ಕೋಟಾ, ಕಾಂಗ್ರೆಸ್‌ಗೆ ಗೂಟ- ಬಸವನಗೌಡ ಪಾಟೀಲ್‌ ಯತ್ನಾಳ್ ‌

Udupi: ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರ ನಾಮಪತ್ರ ಸಲ್ಲಿಕೆ ನಂತರ ವಿಜಯಪುರ ಶಾಸಕ ಬಸವನಗೌಡ ಅವರು ಮಾತನಾಡುತ್ತಾ, “ಕರಾವಳಿ ಹಿಂದುತ್ವ ನೋಡಲು ಬಂದಿದ್ದೇನೆ- ಉತ್ತರ ಕರ್ನಾಟಕದಲ್ಲಿ ಈಗ ಹಿಂದುತ್ವ ಉಗಮ ಆಗುತ್ತಿದೆ. ಇನ್ನು ಈ ಬಾರಿಯ ಚುನಾವಣೆ ಮೋದಿ ಚುನಾವಣೆ ಅಲ್ಲ, ಸನಾತನ ಧರ್ಮ ಉಳಿಸೋ ಚುನಾವಣೆಯಾಗಿದೆ. ಎಲ್ಲರೂ ಧರ್ಮ ಉಳಿಸುವ ನಿಟ್ಟಿನಲ್ಲಿ ಮತದಾನ ಮಾಡಬೇಕು. ಅವರು ಚೌಟಾ ಇವರು ಕೋಟಾ ಕಾಂಗ್ರೆಸ್‌ಗೆ ಗೂಟ ಎಂದು ಹೇಳಿದರು.

ಇದನ್ನೂ ಓದಿ: Rajiv Gandhi Assassination Case: ಭಾರತ ತೊರೆದ ನಳಿನಿ ಪತಿ ಸೇರಿ ಮೂವರು ರಾಜೀವ್ ಗಾಂಧಿ ಪ್ರಕರಣದ ಅಪರಾಧಿಗಳು

ಕಾಂಗ್ರೆಸ್‌ನವರು ಮಗ -ತಂಗಿ- ಅಣ್ಣನ ಮಗನಿಗೆ ಟಿಕೆಟ್ ಅಂತ ಕಚ್ಚಾಡ್ತಿದ್ದಾರೆ. ಪರಿವಾರ ವಾದ 2024 ಕ್ಕೆ ಮೋದಿ ಆಯ್ಕೆ ಆದ್ರೆ ಎಲ್ಲಾ ನಿರ್ನಾಮ ಆಗುತ್ತದೆ. ಇನ್ನು ರಾಹುಲ್ ಗಾಂಧಿ ದೇಗುಲ -ಮಸೀದಿ -ಚರ್ಚ್ ಹೋದಾಗ ಬದಲಾಗ್ತಾನೆ. ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗ್ತೀನಿ ಅಂತಾನೆ. ಸಿದ್ದುಗೆ ಮುಂದಿನ ಜನ್ಮ ಕೊಡೋಕೆ ದೇವರಿಗೆ ತಲೆ ಕೆಟ್ಟಿದ್ಯಾ? ಮುಂದಿನ ಜನ್ಮದಲ್ಲೇನು ಈಗಲೇ ಮುಸ್ಲಿಂ ಆಗಿಬಿಡು. ಅಖಿಲಭಾರತ ವೀರಶೈವ ಮಹಾಸಭಾ ಮೂರು ಜನರ ಕಂಪನಿ. ಮುಖ್ಯಮಂತ್ರಿಗೆ ಸನ್ಮಾನ ಸಂದರ್ಭ ಸತ್ತಮೇಲೆ ಲಿಂಗಾಯತರ ಹೆಣ ಕೂರಿಸಿದಂಗೆ ಕೂರಿಸಿ ಹೂವು ಹಾಕಿದರು. ಸಿದ್ದರಾಮಯ್ಯ ನಕ್ಕರೆ ರಾವಣ ನಕ್ಕಂಗಾಗುತ್ತದೆ. ಸಿದ್ದರಾಮಯ್ಯ ಇಳಿದರೆ ಕಾಂಗ್ರೆಸ್ ಡುಬುಕ್ ಅಂತ ಬಿದ್ ಬಿಡುತ್ತದೆ ಎಂದು ಏಷ್ಯಾನೆಟ್‌ ಸುವರ್ಣ ವರದಿ ಮಾಡಿದೆ.

ಇದನ್ನೂ ಓದಿ: Kasaragod Student Death: ಕಾಸರಗೋಡು-ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಶವ ಪತ್ತೆ

Leave A Reply

Your email address will not be published.