ದಕ್ಷಿಣ ಕನ್ನಡ

ಬೆಳ್ತಂಗಡಿ: ಮಾಜಿ ಶಾಸಕರ ಪತ್ನಿಗೆ ಹೃದಯಾಘಾತ, ಅಪಾಯದಿಂದ ಪಾರು

ಬೆಳ್ತಂಗಡಿ :ಮಾಜಿ ಶಾಸಕರಾದ ಕೆ.ವಸಂತ ಬಂಗೇರರ ಪತ್ನಿ ಸುಜಿತಾ.ವಿ.ಬಂಗೇರರಿಗೆ ಶನಿವಾರ ಸಂಜೆ ಹೃದಯಘಾತ ಸಂಭವಿಸಿದೆ. ತಕ್ಷಣ ಖಾಸಗಿ ವೈದ್ಯರು ಮನೆಗೆ ಬಂದು ಪರೀಕ್ಷಿಸಿದನಂತರ ಅಂಬುಲೆನ್ಸ್ ಮೂಲಕ ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಿಸಿದರು.ವೈದ್ಯರು ರಾತ್ರಿಯೆ ಸರ್ಜರಿ ಮಾಡಿ ಹೃದಯಕ್ಕೆ ಸ್ಟ್ಯಾಂಟ್ ಅಳವಡಿಸಿದ್ದು ಅಪಾಯದಿಂದ ಪಾರಾಗಿದ್ದಾರೆ. ಎ.ಜೆ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಜಿತಾ ಬಂಗೇರರವರು ಗೆಜ್ಜೆಗಿರಿ ಕ್ಷೇತ್ರದಬ್ರಹ್ಮಕಲಶೋತ್ಸವ ಮತ್ತು ಇತರ ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಕ್ರಮಗಳ ಮೂಲಕ ತನ್ನನ್ನುತಾನು ತೊಡಗಿಸಿಕೊಂಡು ತಮ್ಮ ಸೇವೆ …

ಬೆಳ್ತಂಗಡಿ: ಮಾಜಿ ಶಾಸಕರ ಪತ್ನಿಗೆ ಹೃದಯಾಘಾತ, ಅಪಾಯದಿಂದ ಪಾರು Read More »

ಎಲ್ಲೆಂದರಲ್ಲಿ ಕಸ ಎಸೆಯುವವರ ಫೋಟೋ ಕ್ಲಿಕ್ಕಿಸಿ 500 ರೂ. ಗೆಲ್ಲಿ !!! | ಇದೇ ಈ ಗ್ರಾಮಪಂಚಾಯತ್ ನ ವಿಶಿಷ್ಟ ಉಪಾಯ

ಸ್ವಚ್ಛ ಭಾರತ್ ಎಂಬ ಪರಿಕಲ್ಪನೆ ದೇಶದಲ್ಲಿ ಪ್ರಾರಂಭವಾಗಿ ಕೆಲವು ವರ್ಷಗಳೇ ಕಳೆದರೂ ಜನತೆ ಮಾತ್ರ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಕಸದ ತೊಟ್ಟಿ ಇದ್ದರೂ ಅಲ್ಲಿ ಕಸ ಹಾಕದೆ ಎಲ್ಲೆಂದರಲ್ಲಿ ಕಸ ಬಿಸಾಕಿ ಊರಿಡೀ ಗಬ್ಬುನಾಥ ಬೀರುವ ಪರಿಸ್ಥಿತಿ ತುಂಬಾ ಕಡೆ ಮಾಮೂಲಾಗಿದೆ. ಈ ಪರಿಸ್ಥಿತಿಯನ್ನು ತಡೆಗಟ್ಟಲು ಈ ಗ್ರಾಮ ಪಂಚಾಯತ್ ಮಾಡಿದ ಉಪಾಯ ತುಂಬಾ ಪ್ರಶಂಸನೀಯವಾದುದು. ರಸ್ತೆ ಬದಿ ಮತ್ತು ಉದ್ಯಾನವನಗಳ ಒಳಗೆ ಕಸ ಎಸೆಯುವ ಕಿಡಿಗೇಡಿಗಳ ಛಾಯಾಚಿತ್ರಗಳನ್ನು ಕ್ಲಿಕ್ ಮಾಡಿ ಮತ್ತು ಕುಪ್ಪೆಪದವು ಗ್ರಾಮ ಪಂಚಾಯತ್ …

ಎಲ್ಲೆಂದರಲ್ಲಿ ಕಸ ಎಸೆಯುವವರ ಫೋಟೋ ಕ್ಲಿಕ್ಕಿಸಿ 500 ರೂ. ಗೆಲ್ಲಿ !!! | ಇದೇ ಈ ಗ್ರಾಮಪಂಚಾಯತ್ ನ ವಿಶಿಷ್ಟ ಉಪಾಯ Read More »

ಉಪ್ಪಿನಂಗಡಿ:ಯುವಕರ ಮೇಲೆ ತಲವಾರು ದಾಳಿ ಐದು ಮಂದಿ ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿ: ಯುವಕರ ಮೇಲೆ ಗುಂಪೊಂದು ತಲವಾರು ದಾಳಿ ನಡೆಸಿದ ಘಟನೆ ಡಿ.5ರ ಸಂಜೆ ಇಳಂತಿಲ ಗ್ರಾಮದ ಅಂಡೆತಡ್ಕದಲ್ಲಿ ನಡೆದಿದೆ. ಇಲ್ಲಿನ ಅಂಗಡಿಯೊಂದರ ಬದಿಯಲ್ಲಿ ಸುಮಾರು 7 ಗಂಟೆಗೆ ಸ್ಥಳೀಯ ನಿವಾಸಿಗಳಾದ ಫಯಾಝ್ (26ವ.) ಹಾಗು ಆಫೀಝ್ (19ವ.) ಎಂಬವರು ಕುಳಿತುಕೊಂಡಿದ್ದ ವೇಳೆ ಅಲ್ಲಿಗೆ ಬಂದ 4-5 ಮಂದಿಯಿದ್ದ ತಂಡ ಏಕಾಏಕಿ ತಲವಾರು ದಾಳಿ ನಡೆಸಿದ್ದಾರೆ. ಗಾಯಗೊಂಡ ಫಯಾಝ್ ಹಾಗೂ ಆಫೀಜ್ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಳಿಕದ ಬೆಳವಣಿಗೆಯಲ್ಲಿ ರಾತ್ರಿ ಸುಮಾರು 8.30ರ ವೇಳೆಗೆ 30-40 ಮಂದಿ …

ಉಪ್ಪಿನಂಗಡಿ:ಯುವಕರ ಮೇಲೆ ತಲವಾರು ದಾಳಿ ಐದು ಮಂದಿ ಆಸ್ಪತ್ರೆಗೆ ದಾಖಲು Read More »

ಸುಬ್ರಹ್ಮಣ್ಯ: ದೇವರ ಮುಂದೆ ಮಕ್ಕಳು ಮಾಡಿದ ಕುಣಿತ ಭಜನೆಯಲ್ಲಿ ಜಾತಿಯ ಎಳೆತಂದ ಸರ್ಕಾರಿ ಅಧಿಕಾರಿ!!ಶೂದ್ರ-ವೈಷ್ಯ ರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಟುವಾದ ಮಾತು!!

ಚಂಪಾಷಷ್ಠಿಯ ಪ್ರಯುಕ್ತ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಕ್ಷದೀಪೋತ್ಸವದ ದಿನ ಮಕ್ಕಳು ಮಾಡಿದ್ದ ಕುಣಿತ ಭಜನೆಯ ವಿಚಾರದಲ್ಲಿ ಜಾತಿಯ ಧೋರಣೆ ವ್ಯಕ್ತವಾಗಿ,ಸರ್ಕಾರಿ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಜಾತಿಯ ವಿಚಾರ ಪ್ರಸ್ತಾಪಿಸಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು,ಸದ್ಯ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಾಗಿದೆ. ದೇವರ ಎದುರು ಮಕ್ಕಳು ಮಾಡಿದ್ದ ಕುಣಿತ ಭಜನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಹರಿದಾಡಿದ್ದು, ಇದನ್ನು ಕಂಡ ಕಾಣಿಯೂರು ಮೂಲದ ಸರ್ಕಾರಿ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೂದ್ರರು-ವೈಷ್ಯರು …

ಸುಬ್ರಹ್ಮಣ್ಯ: ದೇವರ ಮುಂದೆ ಮಕ್ಕಳು ಮಾಡಿದ ಕುಣಿತ ಭಜನೆಯಲ್ಲಿ ಜಾತಿಯ ಎಳೆತಂದ ಸರ್ಕಾರಿ ಅಧಿಕಾರಿ!!ಶೂದ್ರ-ವೈಷ್ಯ ರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಟುವಾದ ಮಾತು!! Read More »

ಬೆಳ್ತಂಗಡಿ :ರಬ್ಬರ್ ತೋಟದಲ್ಲಿ ಕಂಡು ಬಂದ ಸುಮಾರು 8 ರಿಂದ 9 ಅಡಿ ಉದ್ದದ ಮೊಸಳೆ|ಸ್ಥಳೀಯರಿಂದ ಅರಣ್ಯ ಇಲಾಖೆ
ಅಧಿಕಾರಿಗಳಿಗೆ ಮಾಹಿತಿ

ಬೆಳ್ತಂಗಡಿ : ರಬ್ಬರ್ ತೋಟವೊಂದರಲ್ಲಿ ಸುಮಾರು 8 ರಿಂದ 9 ಅಡಿ ಉದ್ದದ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆ ಕಡಿರುದ್ಯಾವರ ಗ್ರಾಮದ ಕಾನರ್ಪ ಸಮೀಪದ ಕುದೂರು ಎಂಬಲ್ಲಿ ನಡೆದಿದೆ. ಕುದೂರು ನಿವಾಸಿ ಸದಾಶಿವ ಎಂಬುವವರ ರಬ್ಬರ್ ತೋಟ ಸಮೀಪದ ತೋಡಿನಲ್ಲಿ ಮೊಸಳೆ ಕಂಡುಬಂದಿದೆ.ಸ್ಥಳೀಯ ನಿವಾಸಿಗಳಾದಸಂತೋಷ್ ಅವರು ರಬ್ಬರ್ ತೋಟದ ಸೊಪ್ಪು ಸ್ವಚ್ಛಗೊಳಿಸುವ ವೇಳೆ ಪತ್ತೆಯಾಗಿದ್ದು,ಇದರಿಂದ ಗಾಬರಿಯಾದ ಸ್ಥಳೀಯರು ಅರಣ್ಯ ಇಲಾಖೆಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಮೊಸಳೆ ಸೆರೆಗೆಕಾರ್ಯಾಚರಣೆ ನಡೆದಿದೆ. 2019 ಜೂನ್ ತಿಂಗಳಲ್ಲಿ ಧರ್ಮಸ್ಥಳ ಗ್ರಾಮದ ದೊಂಡೋಲೆ ಸಮೀಪ ಪಾಳು …

ಬೆಳ್ತಂಗಡಿ :ರಬ್ಬರ್ ತೋಟದಲ್ಲಿ ಕಂಡು ಬಂದ ಸುಮಾರು 8 ರಿಂದ 9 ಅಡಿ ಉದ್ದದ ಮೊಸಳೆ|ಸ್ಥಳೀಯರಿಂದ ಅರಣ್ಯ ಇಲಾಖೆ
ಅಧಿಕಾರಿಗಳಿಗೆ ಮಾಹಿತಿ
Read More »

ಸವಣೂರಿನಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವಕ್ಕೆ ಚಾಲನೆ

ಸವಣೂರು: ಯುವಜನೋತ್ಸವವು ಜನಪದೀಯ ಸಾಂಸ್ಕೃತಿಕ ಲೋಕದ ಅನಾವರಣದ ಜತೆಗೆ ಸುಪ್ತವಾದ ಪ್ರತಿಭೆ ಅನಾವರಣಕ್ಕೂ ಉತ್ತಮ ವೇದಿಕೆಯಾಗಿದೆ. ಪ್ರತಿಭೆಗಳನ್ನು ಗುರುತಿಸಲು ವೇದಿಕೆ ಅವಶ್ಯಕ. ಯುವಜನೋತ್ಸವ ಕಾರ್ಯಕ್ರಮದ ಮೂಲಕ ಪ್ರತಿಭೆಗಳನ್ನು ಬೆಳಕಿಗೆ ತರುವ ಕಾರ್ಯ ಆಗುತ್ತಿರುವುದು ಶ್ಲಾಘನೀಯ ಎಂದು ಪುತ್ತೂರು ಸಹಾಯಕ ಆಯುಕ್ತರಾದ ಡಾ| ಯತೀಶ್ ಉಳ್ಳಾಲ್ ಹೇಳಿದರು. ಅವರು ಜಿಲ್ಲಾಡಳಿತ ದ.ಕ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ದ.ಕ ಜಿಲ್ಲಾ ಯುವಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ ಕಡಬ, ರಾಜ್ಯ ಪ್ರಶಸ್ತಿ ಪುರಸ್ಕೃತ …

ಸವಣೂರಿನಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವಕ್ಕೆ ಚಾಲನೆ Read More »

ಓಮಿಕ್ರಾನ್ ವೈರಸ್ ಹಿನ್ನೆಲೆ!!ಕಡಬ ತಾಲೂಕಿನಾದ್ಯಂತ ವೈರಸ್ ತಡೆಗೆ ಕಟ್ಟುನಿಟ್ಟಿನ ಕ್ರಮಗಳ ಪಾಲಿಸಲು ಸೂಚನೆ

ರಾಜ್ಯಾದ್ಯಂತ ಓಮಿಕ್ರಾನ್ ವೈರಸ್ ತಡೆಗೆ ರಾಜ್ಯ ಸರ್ಕಾರವು ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಬೆನ್ನಲ್ಲೇ ಕಡಬದಲ್ಲೂ ವೈರಸ್ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ. ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದು, ವೈರಸ್ ತಡೆಗೆ ಕಡಬ ಠಾಣಾ ವ್ಯಾಪ್ತಿಯಲ್ಲಿ ವೈರಸ್ ತಡೆಗಾಗಿ ಸಾರ್ವಜನಿಕರು ಮಾಸ್ಕ್ ಕಡ್ಡಾಯವಾಗಿ ಧರಿಸಿ ಸಹಕರಿಸಲು ಕೋರಲಾಗಿದೆ.

ಉಪ್ಪಿನಂಗಡಿ:ಈಜಲು ತೆರಳಿ ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

ಉಪ್ಪಿನಂಗಡಿ: ನಾಲ್ಕು ದಿನಗಳ ಹಿಂದೆ ಬೊಳ್ಳಾರು ನೇತ್ರಾವತಿ ನದಿ ನೀರಿನಲ್ಲಿ ಸ್ನಾನ ಮಾಡುವ ವೇಳೆ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ನದಿ ದಡದಲ್ಲಿ ಪತ್ತೆಯಾಗಿದೆ. ನದಿಗೆ ಒಟ್ಟು ಐದು ಮಂದಿ ಸ್ನಾನಕ್ಕೆ ಇಳಿದಿದ್ದು ಐವರ ಪೈಕಿ ಛತ್ತಿಸ್ ಘಡ್ ನ ಸುಕ್ಕೊ ರಾಮ್ ಗಡ್ಡೆ (21 ವ) ರವರು ಕಣ್ಮರೆಯಾಗಿದ್ದರು.ಇದೀಗ ಮೃತ ದೇಹ ಪೆರ್ನೆ ಸಮೀಪ ಬಿಳಿಯೂರು ನದಿ ದಡದಲ್ಲಿ ಪತ್ತೆಯಾಗಿದೆ. ಈ ಯುವಕ ಸ್ವರ್ಣ ಭೂಮಿ ಬೋರ್ ವೆಲ್ ನಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು.ನದಿ ನೀರಿನಲ್ಲಿ ಸ್ನಾನ …

ಉಪ್ಪಿನಂಗಡಿ:ಈಜಲು ತೆರಳಿ ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆ Read More »

ಮಂಗಳೂರು :ಆಕಾಶಭವನದಲ್ಲಿ ಬ್ಯೂಟೀಶಿಯನ್ ಆಗಿದ್ದ ಯುವತಿ ನೇಣಿಗೆ ಶರಣು|ಆಕೆಯ ಸಾವಿಗೆ ಕಾರಣ!?

ಮಂಗಳೂರು : ಕಾವೂರು ಬಳಿಯ ಆಕಾಶಭವನ ಎಂಬಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಆಕಾಶಭವನದ ಕಾಪಿಗುಡ್ಡೆನಿವಾಸಿ ಶಿಫಾಲಿ ಮೃತ ಯುವತಿ ಎಂದು ತಿಳಿದು ಬಂದಿದೆ. ಆಕಾಶಭವನದಲ್ಲಿ ಬ್ಯೂಟೀಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ಎಂದಿನಂತೆ ಮನೆಗೆ ಮರಳಿದ್ದಳು. ಬಳಿಕ ಕೋಣೆಗೆ ತೆರಳಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈಕೆಯ ಈ ನಿರ್ಧಾರದ ಹಿಂದಿರುವ ನಿಗೂಢವಾದ ರಹಸ್ಯ ಏನೆಂದು ಯಾರಿಗು ತಿಳಿದಿಲ್ಲ.ಮನೆಯವರು ಕೋಣೆಗೆ ಹೋಗಿ ನೋಡುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು …

ಮಂಗಳೂರು :ಆಕಾಶಭವನದಲ್ಲಿ ಬ್ಯೂಟೀಶಿಯನ್ ಆಗಿದ್ದ ಯುವತಿ ನೇಣಿಗೆ ಶರಣು|ಆಕೆಯ ಸಾವಿಗೆ ಕಾರಣ!? Read More »

ಮಂಗಳೂರು :ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ತಂಡಗಳ ನಡುವೆ ಮಾರಾಮಾರಿ!! ಆರೋಪಿಗಳ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೇಯೂ ಹಲ್ಲೆಗೆ ಯತ್ನ

ಮಂಗಳೂರು:ಹಾಸ್ಟೆಲ್ ನಲ್ಲಿ ವಾಸ್ತವ್ಯವಿದ್ದ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ತಡರಾತ್ರಿ ಮಾರಮಾರಿ ನಡೆದಿದ್ದು, ಘಟನೆಯ ಸಂಬಂಧ ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೇಯೂ ಕಲ್ಲುತೂರಾಟ ನಡೆಸಿ ಹಲ್ಲೆಗೆ ಮುಂದಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಘಟನೆ ವಿವರ: ಮಂಗಳೂರಿನ ಹೆಸರಾಂತ ಯೇನಪೋಯ ಕಾಲೇಜಿನ ವಿದ್ಯಾರ್ಥಿ ಬಣಗಳ ನಡುವೆ ನಿನ್ನೆ ತಡರಾತ್ರಿ ಹಾಸ್ಟೆಲ್ ನಲ್ಲಿ ಹಲ್ಲೆ ನಡೆದಿದೆ. ವೈಯಕ್ತಿಕ ಕಾರಣ ತಂಡವೊಂದು ವಿದ್ಯಾರ್ಥಿಯೋರ್ವನ ಮೇಲೆ ಹಲ್ಲೆ ನಡೆಸಿದ್ದು, ಇದಾದ ಬಳಿಕ ಪ್ರತೀಕಾರವಾಗಿ ಮತ್ತೊಂದು ತಂಡ ಬಂದು ಹಲ್ಲೆ ನಡೆಸಿದೆ …

ಮಂಗಳೂರು :ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ತಂಡಗಳ ನಡುವೆ ಮಾರಾಮಾರಿ!! ಆರೋಪಿಗಳ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೇಯೂ ಹಲ್ಲೆಗೆ ಯತ್ನ Read More »

error: Content is protected !!
Scroll to Top