ಕಾಸರಗೋಡು

ಮುಂದುವರಿದ ನಟಿಯರ ಆತ್ಮಹತ್ಯೆ | ಮಂಗಳಮುಖಿ ನಟಿ, ರೂಪದರ್ಶಿ ಶೆರಿನ್ ಆತ್ಮಹತ್ಯೆ | ಶೆಹ್ನಾ ಸಾವಿನ ಬೆನ್ನಲ್ಲೇ ಮತ್ತೋರ್ವ ನಟಿಯ ಸಾವು|

ನಟಿ, ರೂಪದರ್ಶಿಯರ ಸಾವಿನ ಸರಮಾಲೆಗೆ ಈಗ ಮತ್ತೊಂದು ನಟಿಯ ಸಾವು ಸೇರಿಕೊಂಡಿದೆ. ನಟಿ, ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದ ಮಂಗಳಮುಖಿ ಶೆರಿನ್ ಸೆಲಿನ್ ಮ್ಯಾಥ್ಯೂ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಚ್ಚಿಯ ಚಕ್ಕರಪರಂಬು ಪ್ರದೇಶದಲ್ಲಿರುವ ಅಪಾರ್ಟೆಂಟ್ ಕೊಠಡಿಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಶೆರಿನ್ ಮೃತಪಟ್ಟಿದ್ದಾರೆ. 26 ವರ್ಷ ವಯಸ್ಸಿನ ಶೆರಿನ್ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಆಕೆಯ ರೂಂಮೇಟ್ ಮೊದಲು ನೋಡಿದ್ದು, ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಬಳಿಕ ಮಾನಸಿಕ ಒತ್ತಡ ಎದುರಿಸಲಾಗದೆ ಆಕೆ …

ಮುಂದುವರಿದ ನಟಿಯರ ಆತ್ಮಹತ್ಯೆ | ಮಂಗಳಮುಖಿ ನಟಿ, ರೂಪದರ್ಶಿ ಶೆರಿನ್ ಆತ್ಮಹತ್ಯೆ | ಶೆಹ್ನಾ ಸಾವಿನ ಬೆನ್ನಲ್ಲೇ ಮತ್ತೋರ್ವ ನಟಿಯ ಸಾವು| Read More »

54 ದಿನಗಳ ಕಾಲ ಹೆದ್ದಾರಿ ಕಾಮಗಾರಿ ಸ್ಥಗಿತ | ಕಾರಣ ಹಾವು ಮೊಟ್ಟೆಗೆ ಕಾವು ಕೊಡುತ್ತಿತ್ತು!!

ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಅಣತಿ ದೂರದಲ್ಲಿ ಅಂದರೆ ರಸ್ತೆ ಬದಿಯಲ್ಲಿ ಹಾವೊಂದು ಮೊಟ್ಟೆಗಳಿಗೆ ಕಾವು ನೀಡುತ್ತಿದ್ದು ಕಂಡು ಬಂದು ರಸ್ತೆ ಕಾಮಗಾರಿಯನ್ನು 54 ದಿನ ನಿಲ್ಲಿಸಲಾಯಿತು ಎಂದರೆ ನಂಬುತ್ತೀರಾ? ಹೌದು. ಇದು ನಿಜ. ಈ ಘಟನೆ ನಡೆದಿರುವುದು ಕಾಸರಗೋಡಿನಲ್ಲಿ. ರಸ್ತೆ ಕಾಮಗಾರಿ ಹೊಣೆ ಹೊತ್ತಿರುವ ಉರಾಳುಂಗಲ್ ಸೊಸೈಟಿಯು ಈ ನಿರ್ಧಾರ ತೆಗೆದುಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುವ ವೇಳೆ ಹಾವೊಂದು ಕಂಡು ಬಂದಿದ್ದರಿಂದ, ಆ ಹಾವನ್ನು ಸ್ಥಳಾಂತರಿಸಲು ಯತ್ನಿಸುತ್ತಿರುವಾಗ ಅದು ಮೊಟ್ಟೆಗೆ ಕಾವು ನೀಡುತ್ತಿರುವ …

54 ದಿನಗಳ ಕಾಲ ಹೆದ್ದಾರಿ ಕಾಮಗಾರಿ ಸ್ಥಗಿತ | ಕಾರಣ ಹಾವು ಮೊಟ್ಟೆಗೆ ಕಾವು ಕೊಡುತ್ತಿತ್ತು!! Read More »

ರೈಲ್ವೇ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ, ರೈಲು ಬಡಿದು 16 ರ ಬಾಲಕಿ ದಾರುಣ ಸಾವು!!!

ರೈಲ್ವೇ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ರೈಲು ಡಿಕ್ಕಿ ಹೊಡೆದು 16 ವರ್ಷದ ಬಾಲಕಿಯೋರ್ವಳು ಮೃತಪಟ್ಟ ದಾರುಣ ಘಟನೆಯೊಂದು ಕೇರಳದಲ್ಲಿ ಸಂಭವಿಸಿದೆ. ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಕರುವಂತುರುತಿ ಮೂಲದ ನಫತ್ ಫತಾಹ್ (16) ಮೃತ ಬಾಲಕಿ. ನಿನ್ನೆ ತನ್ನ ಸ್ನೇಹಿತೆ ಜೊತೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕಿ ನಫತ್ ಫತಾಹ್ ಚಲಿಸುತ್ತಿದ್ದ ಕೊಯಮತ್ತೂರು-ಮಂಗಳೂರು ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದಿದ್ದಾಳೆ. ಪರಿಣಾಮ ಪಕ್ಕದ ನದಿಗೆ …

ರೈಲ್ವೇ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ, ರೈಲು ಬಡಿದು 16 ರ ಬಾಲಕಿ ದಾರುಣ ಸಾವು!!! Read More »

ಬೈಕ್ ಗೆ ಡಿಕ್ಕಿ ಹೊಡೆದು,ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು!|ಬಾವಿಗೆ ಹಗ್ಗ ಇಳಿಸಿ ಕಾರಿನಲ್ಲಿದ್ದ ಮೂವರ ರಕ್ಷಣೆ

ಕಾಸರಗೋಡು: ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಬಳಿಕಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಮಸೀದಿ ಪಕ್ಕದ ಬಾವಿಗೆ ಬಿದ್ದ ಘಟನೆ ಮಂಗಳವಾರ ಕಾಸರಗೋಡು ಬಳಿಯ ಪೂಚಕ್ಕಾಡ್ ಎಂಬಲ್ಲಿ ನಡೆದಿದೆ. ಉದುಮ ಭಾಗದಿಂದ ಬರುತ್ತಿದ್ದ ಕಾರೊಂದು ಪೂಚಕ್ಕಾಡ್ ಬಳಿ ಬೈಕೊಂದಕ್ಕೆ ಡಿಕ್ಕಿ ಹೊಡೆದಿದ್ದು,ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ರಸ್ತೆ ಪಕ್ಕದ ಬಾವಿಗೆ ಬಿದ್ದಿದೆ.ಕಾರಿನಲ್ಲಿ ಒಟ್ಟು ಮೂವರು ಯುವಕರು ಇದ್ದು, ರಕ್ಷಿಸಲಾಗಿದೆ. ಈದುಲ್ ಫಿತ್ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಸಾಕಷ್ಟುಸಂಖ್ಯೆಯಲ್ಲಿ ಮುಸ್ಲಿಮರು ಇದ್ದಿದ್ದರಿಂದ,ತಕ್ಷಣ ಕಾರ್ಯಾಚರಣೆಗೆ ಇಳಿದು ಹಗ್ಗದ …

ಬೈಕ್ ಗೆ ಡಿಕ್ಕಿ ಹೊಡೆದು,ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು!|ಬಾವಿಗೆ ಹಗ್ಗ ಇಳಿಸಿ ಕಾರಿನಲ್ಲಿದ್ದ ಮೂವರ ರಕ್ಷಣೆ Read More »

ಮುಸ್ಲಿಂರು ಚಹಾದಲ್ಲಿ ಬಂಜೆತನ ಬರುವ ಹನಿ ಹಾಕ್ತಾರೆ: ವಿವಾದತ್ಮಕ ಹೇಳಿಕೆ ನೀಡಿದ ಮಾಜಿ ಶಾಸಕ ಪಿ.ಸಿ.ಜಾರ್ಜ್

ಶುಕ್ರವಾರ ತಿರುವನಂತಪುರದಲ್ಲಿ ನಡೆಯುತ್ತಿದ್ದ ಅನಂತಪುರಿ ಹಿಂದೂ ಮಹಾ ಸಮ್ಮೇಳನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ “ಈ ಹಿಂದೂ ರಾಷ್ಟ್ರವನ್ನು ವಶಪಡಿಸಿಕೊಳ್ಳುವ ಗುರಿಯತ್ತ ಸಾಗುತ್ತಿದ್ದಾರೆ. ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರು ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು. ನಾನು ದಂಪತಿಗಳ ಮದುವೆಯಲ್ಲಿ ಭಾಗವಹಿಸಿದಾಗಲೆಲ್ಲ ನಾನು ಯಾವಾಗಲೂ ಈ ಬೇಡಿಕೆಯನ್ನು ಇಡುತ್ತೇನೆ. ಅವರಲ್ಲಿ ಕೆಲವರು ನನ್ನ ಸಲಹೆಯನ್ನು ಸಂತೋಷದಿಂದ ಒಪ್ಪುತ್ತಾರೆ ” ಎಂದು ಹೇಳಿದ್ದಾರೆ ಎನ್ನಲಾಗಿದೆ. ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಕೇರಳದ ಹಿರಿಯ …

ಮುಸ್ಲಿಂರು ಚಹಾದಲ್ಲಿ ಬಂಜೆತನ ಬರುವ ಹನಿ ಹಾಕ್ತಾರೆ: ವಿವಾದತ್ಮಕ ಹೇಳಿಕೆ ನೀಡಿದ ಮಾಜಿ ಶಾಸಕ ಪಿ.ಸಿ.ಜಾರ್ಜ್ Read More »

ಕೇರಳದ ಪ್ರಖ್ಯಾತ ಯೂಟ್ಯೂಬ್ ಸ್ಟಾರ್ ರಿಫಾ ಮೆಹ್ನು ಸಾವಿನ ಕಾರಣ ಬಯಲು| ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಗಂಡನ ಭಯಾನಕ ಮುಖ

ಕೇರಳದ ಪ್ರಖ್ಯಾತ ಬ್ಲಾಗರ್ ಮತ್ತು ಮಲಯಾಳಂ ಯುಟ್ಯೂಬರ್ ಸ್ಟಾರ್ ರಿಫಾ ಮೆಹ್ನು (21) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಮೆಹ್ವಾಸ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ದುಬೈನ ಜಫಿಲಿಯಾದಲ್ಲಿರುವ ಫ್ಲ್ಯಾಟ್‌ನಲ್ಲಿ ಮಾರ್ಚ್ 1ರಂದು ಶವವಾಗಿ ಪತ್ತೆಯಾಗಿದ್ದರು. ರಿಫಾ ಕೇರಳದ ಕೊಯಿಕ್ಕೋಡ್ ನಗರದ ಬಲುಸ್ಸೆರಿ ಮೂಲದ ನಿವಾಸಿ, ಪತಿ ಮೆಹ್ವಾಸ್ ಮತ್ತು ಮಗಳ ಜತೆ ದುಬೈನಲ್ಲಿ ನೆಲೆಸಿದ್ದರು. ಈ ಹಿಂದೆಯೇ ಕಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಪ್ರಾಥಮಿಕ ತನಿಖೆಯ ಪ್ರಕಾರ ದೈಹಿಕ ಹಾಗೂ ಮಾನಸಿಕ ಹಿಂಸೆಯೇ …

ಕೇರಳದ ಪ್ರಖ್ಯಾತ ಯೂಟ್ಯೂಬ್ ಸ್ಟಾರ್ ರಿಫಾ ಮೆಹ್ನು ಸಾವಿನ ಕಾರಣ ಬಯಲು| ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಗಂಡನ ಭಯಾನಕ ಮುಖ Read More »

ಕೋಟಿಗಟ್ಟಲೆ ಸಾಲ ಮಾಡಿದ್ದ ಸಾಮಾನ್ಯ ವರ್ಗದ ಯುವತಿಯ ಸೂಸೈಡ್ ಪ್ರಕರಣ ಭೇದಿಸಿದ ಪೊಲೀಸರು!

2021ರ ಡಿಸೆಂಬರ್ 12ರಂದುಜೊಯಿಲ್ಯಾಂಡಿಯಲ್ಲಿರುವ ಮನೆಯಲ್ಲಿ ಓರ್ವ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಯುವತಿಯ ಹೆಸರೇ ಬಿಜಿಶಾ. ನಿಗೂಢವಾಗಿ ಮೃತಪಟ್ಟಿದ್ದ ಬಿಜಿಶಾ ಎಂಬಾಕೆಯ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದ್ದ ಕೇರಳದ ಸಿಸಿಬಿ ತಂಡ ಕೊನೆಗೂ ಸಾವಿಗೆ ಕಾರಣ ಏನೆಂದು ಕಂಡುಹಿಡಿಯುವಲ್ಲಿ ಸಫಲವಾಗಿದೆ. ಬಿಜಿಶಾ ಸಾವು ಆತ್ಮಹತ್ಯೆಯಾಗಿದ್ದು, ಆನ್‌ಲೈನ್ ರಮ್ಮಿ ಗೇಮ್ ಆಕೆಯ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಚೆಲಾಯಿಲ್ ಮೂಲದ ಬಿಜಿಶಾ ಖಾಸಗಿ ಟೆಲಿಕಾಂ ಸ್ಟೋರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಪೊಲೀಸ್ ತನಿಖೆಯಲ್ಲಿ ಯುಪಿಐ ಆ್ಯಪ್ …

ಕೋಟಿಗಟ್ಟಲೆ ಸಾಲ ಮಾಡಿದ್ದ ಸಾಮಾನ್ಯ ವರ್ಗದ ಯುವತಿಯ ಸೂಸೈಡ್ ಪ್ರಕರಣ ಭೇದಿಸಿದ ಪೊಲೀಸರು! Read More »

ಸುಳ್ಯ: ಹೊಳೆಯಲ್ಲಿ ಸ್ನಾನ ಮಾಡಲೆಂದು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು!

ಸುಳ್ಯ:ಹೊಳೆಯಲ್ಲಿ ಸ್ನಾನ ಮಾಡಲೆಂದು ಹೋದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಸಂಜೆ ಅರಂತೋಡು ಗ್ರಾಮದ ಕುಕ್ಕುಂಬಳದಲ್ಲಿ ನಡೆದಿದೆ. ಮೃತರನ್ನು ಮನ್ವಿತ್(12 ವ)ಎಂದು ಗುರುತಿಸಲಾಗಿದೆ. ಅರಂತೋಡಿನ ಬಾಲಕೃಷ್ಣ ಶೆಟ್ಟಿಯವರ ಪುತ್ರಿಯನ್ನು ಮಂಗಳೂರಿಗೆ ವಿವಾಹ ಮಾಡಿಕೊಡಲಾಗಿತ್ತು. ಹೀಗಾಗಿ ಅವರ ಮಗ ಮನ್ವಿತ್ ಅಜ್ಜನ ಮನೆಗೆ ಬಂದಾಗ,ಹಂಸ ಕುಕ್ಕುಂಬಳರವರ ಮನೆ ಸಮೀಪ ಸ್ನಾನ ಮಾಡಲೆಂದು ನೀರಿಗಿಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ.ಮೃತದೇಹವನ್ನು ಶರತ್, ನಿಧೀಶ್, ತಾಜ್ ಅರಂತೋಡು, ಮುನೀರ್ ನೀರಿನಿಂದ ಹೊರತೆಗೆಯಲು ಸಹಕರಿಸಿದ್ದಾರೆ.

ಸುಳ್ಯ: ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾಟದ ವೇಳೆ ಪರಸ್ಪರ ಹೊಡೆದಾಟ!! ಘಟನೆಯ ವೀಡಿಯೋ ವೈರಲ್-ಸಂಘಟಕರ ನಡೆಗೆ ಆಟಗಾರರು ಗರಂ

ಸುಳ್ಯ: ತಾಲೂಕಿನ ಅರಂತೋಡು ಎಂಬಲ್ಲಿ ವಾಹನ ಚಾಲಕ ಮಾಲಕರ ಸಂಘದ ವತಿಯಿಂದ ನಡೆಯುತ್ತಿದ್ದ ಹೊನಲು ಬೆಳಕಿನ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಆಟಗಾರರು ಮತ್ತು ಸಂಘಟಕರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡ ಘಟನೆಯೊಂದು ಬೆಳಕಿಗೆ ಬಂದಿದ್ದು, ಕೆಲ ಬಿಜೆಪಿ ಮುಖಂಡರ ಮಧ್ಯಪ್ರವೇಶದಿಂದ ಪ್ರಕರಣ ತಿಳಿಯಾಗಿದೆ ಎಂದು ತಿಳಿದುಬಂದಿದೆ. ಘಟನೆ ವಿವರ: ಅರಂತೋಡು ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಕ್ಕೆ ಹಲವು ತಂಡಗಳು ಹೆಸರು ನೋಂದಾಯಿಸಿದ್ದವು. ಪಂದ್ಯ ಆರಂಭಕ್ಕೂ ಮುನ್ನ ನಡೆದ ಟಾಸ್ ನಲ್ಲಿ ಶಿವಾಜಿನಗರದ ಮೂರು …

ಸುಳ್ಯ: ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾಟದ ವೇಳೆ ಪರಸ್ಪರ ಹೊಡೆದಾಟ!! ಘಟನೆಯ ವೀಡಿಯೋ ವೈರಲ್-ಸಂಘಟಕರ ನಡೆಗೆ ಆಟಗಾರರು ಗರಂ Read More »

ಬ್ರಹ್ಮಾವರ: ಜೀವನದಲ್ಲಿ ಜಿಗುಪ್ಸೆಗೊಂಡು ಹೋಟೆಲ್ ರೂಮ್ ನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ನೌಕರ ಆತ್ಮಹತ್ಯೆ

ಬ್ರಹ್ಮಾವರ:ಹೋಟೆಲ್ ನಲ್ಲಿ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ನೌಕರ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಚ್ಚುಲು ಗ್ರಾಮದ ಕೊಳವಿನ ಬಾಗಿಲಿನಲ್ಲಿ ನಡೆದಿದೆ. ಆತ್ಮಹತ್ಯೆ ಗೆ ಶರಣಾದ ವ್ಯಕ್ತಿಯನ್ನು 34 ವರ್ಷದ ಭಾಸ್ಕರ್ ಪೂಜಾರಿ ಎಂದು ಗುರುತಿಸಲಾಗಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಏಪ್ರಿಲ್ 26 ರ ಬೆಳಗ್ಗೆ ತಾನು ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಬ್ರಹ್ಮಾವರದ ಆಶ್ರಯ ಹೋಟೆಲ್ ನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಸಂಬಂಧ …

ಬ್ರಹ್ಮಾವರ: ಜೀವನದಲ್ಲಿ ಜಿಗುಪ್ಸೆಗೊಂಡು ಹೋಟೆಲ್ ರೂಮ್ ನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ನೌಕರ ಆತ್ಮಹತ್ಯೆ Read More »

error: Content is protected !!
Scroll to Top