ಅತಿಕ್ರಮಣಕ್ಕೊಳಗಾದ ಕೊಟ್ಯಂತರ ಮೌಲ್ಯದ ದೇವಸ್ಥಾನಗಳ ಜಮೀನುಗಳ ರಕ್ಷಣೆ ಮಾಡಿ ಎಂದು ಆಗ್ರಹ

ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ 36 ಸಾವಿರ ದೇವಸ್ಥಾನಗಳ ಬಳಿ ಸರಿ ಸುಮಾರು 10 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಜಮೀನುಗಳು ಇದೆ. ಆದರೆ ಅಧಿಕಾರಿಗಳ ನಿರ್ಲಕ್ಷ, ಬೇಜವಾಬ್ದಾರಿ, ಹಣದಾಸೆಯಿಂದ ಮತ್ತು ಪ್ರಭಾವಿಗಳ ಕುತಂತ್ರದಿಂದ ಕೊಟ್ಯಂತರ ಮೌಲ್ಯದ ದೇವಸ್ಥಾನದ ಜಮೀನು ಖಾಸಗಿಯವರ ಪಾಲಾಗುತ್ತಿದೆ.

ರಾಜ್ಯದಲ್ಲಿ ಈ ವಾರ ಪೂರ್ತಿ ಲಾಕ್‌ಡೌನ್ ಸಾಧ್ಯತೆ | ಇಂದು ಮಹತ್ವದ ಸಚಿವ ಸಂಪುಟ ಸಭೆ

ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಕರ್ಫ್ಯೂವನ್ನು ಇಡೀ ವಾರ ಮುಂದುವರಿಸುವ ಸಾಧ್ಯತೆ ದಟ್ಟವಾಗಿದೆ. ಇದಕ್ಕಾಗಿ ಇಂದು ಬೆಳಗ್ಗೆ ನಡೆಯಲಿರುವ ರಾಜ್ಯ ಸಚಿವಸಂಪುಟ ಸಭೆಯತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಕೊರೋನಾ ನಿಯಂತ್ರಣಕ್ಕಾಗಿ ಇಡೀ ರಾಜ್ಯಕ್ಕೆ ಲಾಕ್

ನಿನ್ನೆ ಆಡು ಹಿಡಿಯಲು ಬಂದ ಚಿರತೆ ಮತ್ತೆ ವಾಪಸ್ | ರಾತ್ರಿ ಮರದ ಮೇಲೆ ಕುಳಿತಿದ್ದ ಕೋಳಿ ಕದ್ದು ಪರಾರಿ

ಕಡಬ ತಾಲೂಕಿನ ಮರ್ದಾಳದ ಐತ್ತೂರು‌ ಗ್ರಾಮದಲ್ಲಿ ಮೇಯುತ್ತಿದ್ದ ಆಡಿನ ಮೇಲೆ ಚಿರತೆ ದಾಳಿ‌ಮಾಡಿ ಪರಾರಿಯಾದ ಚಿರತೆ ಮತ್ತೆ ರಾತ್ರಿ ಪ್ರತ್ಯಕ್ಷವಾಗಿದೆ. ನಿನ್ನೆ ಅದೇ ಮನೆಯವರ ಮನೆಯಂಗಳದವರೆಗೆ ಬಂದು ಮರದಲ್ಲಿ ಕುಳಿತ್ತಿದ್ದ ಕೋಳಿಯನ್ನು ಹೊತ್ತೊಯ್ದಿದೆ. ನಿನ್ನೆ ರಾತ್ರಿ 10 ರ ಸುಮಾರಿಗೆ

ಪಡುಮಲೆ ಕ್ಷೇತ್ರದಲ್ಲಿ ಆರಾಧನೆ ಆರಂಭಗೊಳ್ಳುತ್ತಿದ್ದಂತೆ ನಾಗ ಪ್ರತ್ಯಕ್ಷ..500 ವರ್ಷದಿಂದ ಪಡುಮಲೆ ಸಾನಿಧ್ಯದಲ್ಲಿ…

500 ವರ್ಷದಿಂದ ಪಡುಮಲೆ ಸಾನಿಧ್ಯದಲ್ಲಿ ನಿಂತಿದ್ದ ಪೂಜಾ ವಿಧಿ ವಿಧಾನಗಳಿಗೆ ಏ.24ರ ಮೀನ ಸುಮುಹೂರ್ತದಲ್ಲಿ ಕೋವೀಡ್ ನಿಯಮಾನುಸಾರ ಹಾಗೂ ಸೀಮಿತ ಭಕ್ತರ ಸಮ್ಮುಖದಲ್ಲಿ ಚಾಲನೆ ದೊರೆಯಿತು. ಆದರೆ ಕುಂಬಳೆ ಸೀಮೆ ಅರ್ಚಕರ ವೈಭವದ ವೇದಗೋಷ ಆರಂಭಗೊಳ್ಳುತ್ತಿದ್ದಂತೆ ಸಾನಿಧ್ಯದಡೆಗೆ ನಾಗಗಳ

ಹಂಪಿಯ ಪ್ರಸಿದ್ಧ ಬಡವಿ ಲಿಂಗ ದೇವಸ್ಥಾನದ ಅರ್ಚಕ ಕೃಷ್ಣ ಭಟ್ ನಿಧನ

ಹಂಪಿಯ ಪ್ರಸಿದ್ಧ ಬಡವಿ ಲಿಂಗ ದೇವಸ್ಥಾನದ ಅರ್ಚಕ ಕೃಷ್ಣ ಭಟ್ ಅವರು ಭಾನುವಾರ ನಿಧನ ಹೊಂದಿದರು. 87 ವರ್ಷ ಪ್ರಾಯದ ಅವರು ವಯೋಸಹಜ ಖಾಯಿಲೆಯಿಂದ ಇಂದು ಮನೆಯಲ್ಲಿ ನಿಧನಹೊಂದಿದರು. ಕೃಷ್ಣ ಭಟ್ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿಯವರು. 1979ರಲ್ಲಿ ಅವರು ಹಂಪಿಗೆ

ಗುರುವಾಯನಕೆರೆ | ಕೆಲಸಕ್ಕಿದ್ದ ಅಂಗಡಿಗೆ ಕನ್ನ , ಹಾಡುಹಗಲೇ ಕಳ್ಳನಿಗೆ ಬಿತ್ತು ಗುನ್ನ !

ಬೆಳ್ತಂಗಡಿ : ಗುರುವಾಯನಕೆರೆಯ ಉಪ್ಪಿನಂಗಡಿ ರಸ್ತೆ ಬಳಿಯ ಫ್ಯಾಬ್ರಿಕೇಶನ್ ಸಾಮಾಗ್ರಿಗಳ ಮಾರಾಟ ಅಂಗಡಿ ವಿನಾಯಕ ಏಜನ್ಸಿ ಯಿಂದ ಹಗಲು ಹೊತ್ತಿನಲ್ಲಿ ಕಳವು ನಡೆಸುತ್ತಿದ್ದ ಹುಡುಗನನ್ನು ಹಿಡಿಯಲಾಗಿದೆ. ಆ ಹುಡುಗ ಅದೇ ಅಂಗಡಿಯಲ್ಲಿ ಕೆಲಸಕ್ಕಿದ್ದ. ಯುವಕನ ಸಹಿತ ಮೂವರು ರೆಡ್ ಹ್ಯಾಂಡ್ ಆಗಿ

ವೀಕೆಂಡ್ ಕರ್ಫ್ಯೂ ಎಫೆಕ್ಟ್| ಮದ್ಯ ಅಕ್ರಮ ದಾಸ್ತಾನು ಪತ್ತೆ; ಯುವಕನ ಬಂಧನ

ಬಂಟ್ವಾಳ: ವಿಟ್ಲ ಪೊಲೀಸರು ಮದ್ಯ ಅಕ್ರಮ ದಾಸ್ತಾನು ಪ್ರಕರಣವನ್ನು ಶನಿವಾರ ಪತ್ತೆ ಹಚ್ಚಿದ್ದು ಒಬ್ಬನನ್ನು ಬಂಧಿಸಿದ್ದಾರೆ. ಗಸ್ತಿನಲ್ಲಿದ್ದ ಸಂದರ್ಭ ಮದ್ಯದ ಪ್ಯಾಕೇಟ್ ಗಳು ಅಂಗಡಿ ಸಮೀಪ ಬಿದ್ದಿರುವುದನ್ನು ಗಮನಿಸಿ ದಾಳಿ ನಡೆಸಿದಾಗ ಅನಂತಾಡಿ ಗ್ರಾಮದ ದರ್ಖಾಸುವಿನಲ್ಲಿ ಆರು ಲೀಟರ್

18 + ಕೋವಿಡ್ ಲಸಿಕೆ : ರಾಜ್ಯಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ

ಕೊರೋನ ಸೋಂಕಿನ ಪ್ರಕರಣಗಳ ತೀವ್ರ ಏರಿಕೆಯ ನಡುವೆ ಮೇ 1ರಿಂದ ನೂತನ 3ನೇ ಹಂತದ ಲಸಿಕೆ ನೀಡಿಕೆ ಕಾರ್ಯತಂತ್ರದ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗದರ್ಶನ ನೀಡಲು ಕೇಂದ್ರ ಆರೋಗ್ಯ ಸಚಿವ ರಾಜೇಶ್ ಭೂಷಣ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಉನ್ನತ

2550 ಮಂದಿ ಕೋವಿಡ್ ಸೋಂಕಿತರು ಹೋಂ ಐಸೊಲೇಶನ್‌ನಲ್ಲಿ ; ಬಿಕ್ಕಟ್ಟು ಎದುರಾದರೂ ಸಮರ್ಥವಾಗಿ ನಿರ್ವಹಿಸಲು ಜಿಲ್ಲಾಡಳಿತ…

ಜಿಲ್ಲೆಯಲ್ಲಿ 2550 ಮಂದಿ ಕೋವಿಡ್ ಸೋಂಕಿತರು ಹೋಂ ಐಸೊಲೇಶನ್‌ನಲ್ಲಿದ್ದಾರೆ. 642 ಮಂದಿ ಆಸ್ಪತ್ರೆಯಲ್ಲಿ ದ್ದಾರೆ. ಆಸ್ಪತ್ರೆಗಳಲ್ಲಿ ನಮ್ಮಲ್ಲಿರುವ 4800 ಬೆಡ್‌ಗಳಲ್ಲಿ 642 ಬೆಡ್‌ಗಳು ಮಾತ್ರ ಬಳಕೆಯಾಗಿವೆ. 15 ದಿನಗಳ ಬಳಿಕ ಜಿಲ್ಲೆಯಲ್ಲಿ ಇದೇ ರೀತಿ ಸೋಂಕಿತರ ಸಂಖ್ಯೆ ಹೆಚ್ಚಳಗೊಂಡು

ದ.ಕ.ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

ದ.ಕ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಈಗಿನ ಪರಿಸ್ಥಿತಿಯಲ್ಲಿ ಮುಂದಿನ 15 ದಿನಗಳವರೆಗೆ ಎಲ್ಲವನ್ನೂ ಸಮರ್ಪಕವಾಗಿ ಎದುರಿಸಲು ದ.ಕ. ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸಾರ್ವಜನಿಕರಿಗೆ