Ad Widget

ವೀಕೆಂಡ್ ಕರ್ಫ್ಯೂ ಎಫೆಕ್ಟ್| ಮದ್ಯ ಅಕ್ರಮ ದಾಸ್ತಾನು ಪತ್ತೆ; ಯುವಕನ ಬಂಧನ

ಬಂಟ್ವಾಳ: ವಿಟ್ಲ ಪೊಲೀಸರು ಮದ್ಯ ಅಕ್ರಮ ದಾಸ್ತಾನು ಪ್ರಕರಣವನ್ನು ಶನಿವಾರ ಪತ್ತೆ ಹಚ್ಚಿದ್ದು ಒಬ್ಬನನ್ನು ಬಂಧಿಸಿದ್ದಾರೆ.

ಗಸ್ತಿನಲ್ಲಿದ್ದ ಸಂದರ್ಭ ಮದ್ಯದ ಪ್ಯಾಕೇಟ್ ಗಳು ಅಂಗಡಿ ಸಮೀಪ ಬಿದ್ದಿರುವುದನ್ನು ಗಮನಿಸಿ ದಾಳಿ ನಡೆಸಿದಾಗ ಅನಂತಾಡಿ ಗ್ರಾಮದ ದರ್ಖಾಸುವಿನಲ್ಲಿ ಆರು ಲೀಟರ್ ಮದ್ಯ ಪತ್ತೆಯಾಗಿದೆ. ಬೀಡಿ ಖರೀದಿ ಅಂಗಡಿ ಮಾಲೀಕ ಅನಂತಾಡಿ ದರ್ಖಾಸು ನಿವಾಸಿ ಚಂದ್ರಹಾಸ (25) ಬಂಧಿತ.

ವಿಟ್ಲ ಪಿಎಸ್ ಐ ವಿನೋದ್ ರೆಡ್ಡಿ ಹಾಗೂ ಪ್ರೊಬೆಷನರಿ ಪಿಎಸ್ಐ ಮಂಜುನಾಥ ನೇತೃತ್ವದಲ್ಲಿ ಸಿಬ್ಬಂದಿ ಪ್ರಸನ್ನ, ಪ್ರತಾಪ್ ರೆಡ್ಡಿ, ವಿನಾಯಕ ಅವರ ತಂಡ, ಚಂದ್ರಹಾಸ್ ಅಂಗಡಿಯ ಆಸುಪಾಸಿನಲ್ಲಿ ಖಾಲಿಯಾದ ಮದ್ಯದ ಪ್ಯಾಕೇಟ್ ಗಳು ಅಲ್ಲಲ್ಲಿ ಬಿದ್ದಿರುವುದು ಕಂಡಿದ್ದು, ಅಂಗಡಿಯಲ್ಲಿ ಮದ್ಯ ಸಂಗ್ರಹ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ವಿಚಾರಿಸಿದಾಗ ಅಂಗಡಿ ಹಿಂಬದಿ ರಟ್ಟಿನ ಬಾಕ್ಸ್ ನಲ್ಲಿ ಮದ್ಯ ಪತ್ತೆಯಾಗಿದೆ.

67 ಮೈಸೂರು ಲ್ಯಾನ್ಸರ್ ಕಂಪನಿಯ 90 ಎಂಎಲ್ ನ ಟೆಟ್ರಾ ಪ್ಯಾಕೇಟ್ ಜತೆಗೆ ಗಿರಾಕಿಗಳಿಂದ ಪಡೆದ ಹಣ ಪತ್ತೆಯಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: