ದ.ಕ : ಸೆ.1ರಿಂದ ದ್ವಿತೀಯ ಪಿಯುಸಿ ತರಗತಿ ಆರಂಭಿಸಲು ಜಿಲ್ಲಾಧಿಕಾರಿ ನಿರ್ದೇಶನ

ದ.ಕ.ಜಿಲ್ಲೆಯಲ್ಲಿ ಸೆ.1ರಿಂದ ದ್ವಿತೀಯ ಪಿಯು ಕಾಲೇಜುಗಳ ಭೌತಿಕ ತರಗತಿಗಳನ್ನು ಆರಂಭಿಸಲು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ನಿರ್ದೇಶನ ನೀಡಿದ್ದಾರೆ.ಪ್ರಥಮ ಪಿಯು ತರಗತಿಯನ್ನು ಪಿಯು ಡಿಡಿ ಹಾಗೂ ಪದವಿ/ ಸ್ನಾತಕೋತ್ತರ ಭೌತಿಕ ತರಗತಿಗಳನ್ನು ಕಾಲೇಜಿನ ಜಂಟಿ ನಿರ್ದೇಶಕರ

ಮಂಜೇಶ್ವರ: ಕಳವು ಪ್ರಕರಣದ ಮೂವರು ಆರೋಪಿಗಳ ಬಂಧನ

ಕಾಸರಗೋಡು: ಉಪ್ಪಳದ ಜುವೆಲ್ಲರಿಯಿಂದ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಮಂದಿ ಆರೋಪಿಗಳನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.ಉಪ್ಪಳದ ಎಸ್.ಎಸ್ ಗೋಲ್ಡ್ ನಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿದೆ.

ಶಿಥಿಲಗೊಂಡಿದೆ ಉದನೆ ತೂಗುಸೇತುವೆ | ಬಿರುಕು ಬಿಟ್ಟ ಕಾಂಕ್ರೀಟ್ ಹಲಗೆ ,ಜನರ ಓಡಾಟಕ್ಕೆ ಅಪಾಯ

ಕಡಬ: ಎರಡು ದಶಕಗಳ ಹಿಂದೆ ನಿರ್ಮಾಣವಾದ ಶಿರಾಡಿ ಗ್ರಾಮದ ಉದನೆ ಎಂಬಲ್ಲಿನ ಗುಂಡ್ಯ ಹೊಳೆಗೆ ಅಡ್ಡಲಾಗಿರುವ ತೂಗುಸೇತುವೆಯ ಕಾಂಕ್ರಿಟ್ ಹಲಗೆ ಐದು ಕಡೆಗಳಲ್ಲಿ ಬಿರುಕು ಬಿಟ್ಟಿದ್ದು ಜನರ ಓಡಾಟಕ್ಕೆ ಅಪಾಯಕಾರಿಯಾಗಿದೆ.ಕಡಬ ತಾಲೂಕಿನ ಶಿರಾಡಿ ಗ್ರಾಮದ ಉದನೆ ಪೇಟೆಯಿಂದ ಕೊಣಾಜೆ,

ಪರಿವರ್ತನಾ ಸುದ್ದಿ ಸಂಪಾದಕ ಜನಾರ್ದನ ಪುರಿಯ ನಿಧನ

ಕಡಬ: ಪರಿವರ್ತನಾ ಸುದ್ದಿ ಪತ್ರಿಕೆಯ ಸಂಪಾದಕ ಕುಟ್ರುಪಾಡಿ ಗ್ರಾಮದ ಪುರಿಯ ನಿವಾಸಿ, ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿದ್ದ ಜನಾರ್ದನ ಅವರು ಆ.28 ರಂದು ನಿಧನ ಹೊಂದಿದ್ದಾರೆ.ಇವರು ಮುಂಬಯಿಯಲ್ಲಿದ್ದು ಅಸೌಖ್ಯದಿಂದ ಕೆಲ ದಿನಗಳ ಹಿಂದೆ ಎರಡು ಬಾರಿ ಆಸ್ಪತ್ರೆ ಗೆ ದಾಖಲಾಗಿದ್ದರು. ಆ.27 ರ ರಾತ್ರಿ

ಖ್ಯಾತ ಹೆರಿಗೆ ತಜ್ಞ, ಪುತ್ತೂರು ಸರಕಾರಿ ಆಸ್ಪತ್ರೆಯ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞರಾದ ಶಿರ್ವ ಮಂಚಕಲ್ಲು ನಿವಾಸಿ ಡಾ.ಸಂದೀಪ್ ಅವರು ಅನಾರೋಗ್ಯದ ಕಾರಣದಿಂದಾಗಿ ಮಂಗಳೂರಿನಲ್ಲಿ ಆ.27 ರಂದು ರಾತ್ರಿ ನಿಧನರಾದರು.ಇವರು ಸೌತ್ ಕೆನರಾದಲ್ಲಿಯೇ ಅತೀ ಹೆಚ್ಚು ಹೆರಿಗೆ ಮಾಡಿಸಿರುವ ಖ್ಯಾತ ಹೆರಿಗೆ ತಜ್ಞರಾಗಿದ್ದಾರೆ.

ಮಂಗಳೂರು : ಶುಶ್ರೂಷಕಿ ಹುದ್ದೆಗೆ ಆ.30ಕ್ಕೆ ನೇರ ಸಂದರ್ಶನ

ಮಂಗಳೂರು : ಕೋವಿಡ್ ವಿಭಾಗದಲ್ಲಿ ಶುಶ್ರೂಷಕರಾಗಿ ಕೆಲಸ ಮಾಡಲು ನಗರದ ವೆಸ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಆ.30ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ ಕರೆಯಲಾಗಿದೆ.ನರ್ಸಿಂಗ್‌ನಲ್ಲಿ ಡಿಪ್ಲೋಮಾ ಅಥವಾ ಬಿ.ಎಸ್.ಸಿ. ನರ್ಸಿಂಗ್ ಆಗಿರಬೇಕು. ಆಯ್ಕೆ ಆದವರಿಗೆ ವೇತನ 25,000 ರೂ. ವೇತನ

ಪುಣಚ : ರಿಕ್ಷಾ-ಕಾರು ಅಪಘಾತ | ರಿಕ್ಷಾ ಚಾಲಕ ಮೃತ್ಯು

ಆಟೋ ರಿಕ್ಷಾ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಪುಣಚ ಗ್ರಾಮದ ಮಣಿಲ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ಪುಣಚ ಗ್ರಾಮದ ಪರಿಯಾಲ್ತಡ್ಕ ನಿವಾಸಿ ಅಶ್ರಫ್ ಎಂಬವರೇ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ನತದೃಷ್ಟ ರಿಕ್ಷಾ

ಭಾರತದ ನೆತ್ತಿಯ ಮೇಲೆ ಹಾರಾಟ ನಡೆಸುತ್ತಿದ್ದ, 126 ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿದ್ದ ವಿಮಾನದ ಪೈಲೆಟ್ ಗೆ…

ನಾಗ್ಪುರ: ಢಾಕಾದಿಂದ ಮಸ್ಕಟ್ ಗೆ ತೆರಳುತ್ತಿದ್ದ ಬಾಂಗ್ಲಾದೇಶದ ಬಿಮಾನ್ ಸಂಸ್ಥೆಯ ವಿಮಾನ ಆಕಾಶದಲ್ಲಿ ಹಾರುತ್ತಿದ್ದಾಗಲೇ ವಿಮಾನ ಚಾಲಕ ಹೃದಯಾಘಾತಕ್ಕೀಡಾದ ಘಟನೆ ನಡೆದಿದೆ.ಬೋಯಿಂಗ್ ವಿಮಾನದಲ್ಲಿ ಈ ಸಂದರ್ಭ 126 ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಾಲಕ

ಪುತ್ತೂರು | ಹನಿಟ್ರ್ಯಾಪ್ ಬಲೆಗೆ ಬಿದ್ದು ಒದ್ದಾಡುತ್ತಿರುವ ರಾಜಕಾರಣಿ | ದೂರು ನೀಡಿದರೆ ಹೆಸರು ಬಹಿರಂಗವಾಗುವ ಆತಂಕ

ಪುತ್ತೂರು : ಹನಿಟ್ರ್ಯಾಪ್ ಈಗ ಒಂದು ದಂಧೆ ಯಾಗಿ ಪರಿಣಮಿಸಿದೆ. ಈ ದಂಧೆಗೆ ಬೀಳದವರು ಬಹಳ ಕಡಿಮೆ. ತಿಂಗಳ ಹಿಂದೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖದಲ್ಲಿ ಇಂಥದೊಂದು ಘಟನೆ ನಡೆದಿತ್ತು ಬಳಿಕ ಮಂಗಳೂರಿನಲ್ಲಿ,ನಿನ್ನೆ ಕಡಬದ ಬಿಳಿನೆಲೆಯಲ್ಲೂ ನಡೆದಿತ್ತು. ಎರಡೂ ಪ್ರಕರಣದಲ್ಲಿ ಆರೋಪಿಗಳ

ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನೆ ಮತ್ತೆ ಮರುಜೀವ ನೀಡಲು ಮುಂದಾದ ಕೇರಳ ಸರ್ಕಾರ

ಕಡಬ: ಕೇರಳ –ಕರ್ನಾಟಕ ಎರಡು ರಾಜ್ಯಗಳನ್ನು ಬೆಸೆಯುವ ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ಕೇರಳ ಸರ್ಕಾರ ಯೋಜನೆ ಮುಂದುವರಿಸಲು ಪ್ರಯತ್ನ ನಡೆಸಲಿದೆ ಎಂದಿದೆ.ವಾಣಿಜ್ಯ, ಪ್ರವಾಸೋದ್ಯಮ ಮಂತಾದ ಕಾರಣಗಳಿಂದ ಈ ರೈಲ್ವೆ ಯೋಜನೆ ದಶಕಗಳ ಹಿಂದೆ ಪ್ರಸ್ತಾಪಗೊಂಡಿತು. ಇದೀಗ