ಪರಿವರ್ತನಾ ಸುದ್ದಿ ಸಂಪಾದಕ ಜನಾರ್ದನ ಪುರಿಯ ನಿಧನ

ಕಡಬ: ಪರಿವರ್ತನಾ ಸುದ್ದಿ ಪತ್ರಿಕೆಯ ಸಂಪಾದಕ ಕುಟ್ರುಪಾಡಿ ಗ್ರಾಮದ ಪುರಿಯ ನಿವಾಸಿ, ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿದ್ದ ಜನಾರ್ದನ ಅವರು ಆ.28 ರಂದು ನಿಧನ ಹೊಂದಿದ್ದಾರೆ.
ಇವರು ಮುಂಬಯಿಯಲ್ಲಿದ್ದು ಅಸೌಖ್ಯದಿಂದ ಕೆಲ ದಿನಗಳ ಹಿಂದೆ ಎರಡು ಬಾರಿ ಆಸ್ಪತ್ರೆ ಗೆ ದಾಖಲಾಗಿದ್ದರು. ಆ.27 ರ ರಾತ್ರಿ ಮುಂಬಾಯಿಯ ಅವರ ನಿವಾಸದಲ್ಲಿ ಅಸ್ವಸ್ಥ ಗೊಂಡು ಕೊನೆಯಸಿರುಳೆದಿದ್ದಾರೆ ಎಂದು ತಿಳಿದು ಬಂದಿದೆ. ಇವರು ಪತ್ನಿ ಪ್ರೇಮ, ಪುತ್ರ ಪ್ರತೀಕ್,ಪುತ್ರಿ ಪ್ರಿಯಾಂಕ ಅವರನ್ನು ಅಗಲಿದ್ದಾರೆ.
ಪರಿವರ್ತನಾ ಸುದ್ದಿ ಸಂಪಾದಕ:
ಮುಂಬಯಿ ಯಲ್ಲಿ ಪ್ರಕಟಗೊಳ್ಳುತ್ತಿದ್ದ ಪರಿವರ್ತನಾ ಸುದ್ದಿ ಎಂಬ ಮಾಸ ಪತ್ರಿಕೆಯನ್ನು ಕಡಬದಿಂದಲೂ ಪ್ರಕಟಿಸುತ್ತಿದ್ದರು. ಇವರು ಉತ್ತಮ ಬರಹಗಾರರಾಗಿದ್ದರು.

Leave a Reply

error: Content is protected !!
Scroll to Top
%d bloggers like this: