Praveen Chennavara

Praveen Chennavara Palthady village & post Kadaba Taluq D.K.-For contact- 7090806456

ತಂದೆಯ ಮರಣದ ಸುದ್ದಿ ತಿಳಿಸಿದರೂ ನೋಡಲು ಬಾರದ ಮಗ, ತಂದೆಯ ಲಕ್ಷಾಂತರ ಹಣವನ್ನು ಮಾತ್ರ ತಂದು ಕೊಡುವಂತೆ ತನ್ನ ವಿಳಾಸ ಹೇಳಿದ ಕಥೆ !

ದುಡ್ಡು ಎಷ್ಟು ಖರ್ಚಾದರೂ ಪರವಾಗಿಲ್ಲ. ನನ್ನ ತಂದೆ ತಾಯಿಯನ್ನು,ಬಂಧುಗಳನ್ನು ಉಳಿಸಿಕೊಡಿ ಎಂದು ಆಸ್ಪತ್ರೆಯಲ್ಲಿ ವೈದ್ಯರಲ್ಲಿ ಅಂಗಲಾಚಿ ಬೇಡಿಕೊಳ್ಳುವುದನ್ನು ನಾವು ಕಂಡಿದ್ದೇವೆ. ಅಂತಹ ವಿಷಯಗಳನ್ನು ಅಗಾಗ ಕೇಳಿದ್ದೇವೆ. ಆದರೆ ಇಲ್ಲೊಬ್ಬ ನಿಷ್ಕರುಣಿ ಪಾಪಿ ಪುತ್ರ ತನ್ನ ತಂದೆಯ ಮರಣದ ಸುದ್ದಿ ತಿಳಿಸಿದರೂ ಕೊನೆ ಕ್ಷಣದಲ್ಲಿ ತಂದೆಯ ಮುಖ ನೋಡಲು ಕೂಡ ಬಾರದೇ, ತಂದೆಯ ಬಳಿಯಿದ್ದ ಲಕ್ಷಾಂತರ ಹಣವನ್ನು ಮಾತ್ರ ತನಗೆ ತಂದು ಕೊಡುವಂತೆ ತನ್ನ ವಿಳಾಸ ಹೇಳಿದ ಕಥೆಯಿದು. ಮೈಸೂರಿನಲ್ಲಿ ಕೊರೊನಾದಿಂದ ವ್ಯಕ್ತಿಯೊಬ್ಬರ ತಂದೆ ನಿಧನರಾಗಿದ್ದಾರೆ. ಈ ವಿಚಾರವನ್ನು …

ತಂದೆಯ ಮರಣದ ಸುದ್ದಿ ತಿಳಿಸಿದರೂ ನೋಡಲು ಬಾರದ ಮಗ, ತಂದೆಯ ಲಕ್ಷಾಂತರ ಹಣವನ್ನು ಮಾತ್ರ ತಂದು ಕೊಡುವಂತೆ ತನ್ನ ವಿಳಾಸ ಹೇಳಿದ ಕಥೆ ! Read More »

ನಾಯಿ ಚಪ್ಪಲಿ ಕಚ್ಚಿತೆಂದು ಬೈಕ್ ಗೆ ನಾಯಿಯನ್ನೇ ಕಟ್ಟಿ ದರ ದರ ಎಳೆದೊಯ್ದ ಧೂರ್ತ ,ಆರೋಪಿ ಬಂಧನ

ಮಂಗಳೂರು: ನಗರದಲ್ಲಿ ಇತ್ತೀಚೆಗೆ ಶ್ವಾನವೊಂದನ್ನು ಬೈಕ್ ಗೆ ಕಟ್ಟಿ ಎಳೆದೊಯ್ದು ಅನಾಗರಿಕರಂತೆ ವರ್ತಿಸಿರುವ ಘಟನೆ ಮಾಸುತ್ತಿರುವಾಗಲೇ ಇಂಥದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಾಯಿ ತನ್ನ ಚಪ್ಪಲಿ ಕಚ್ಚಿದೆ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಈ ಕುಕೃತ್ಯ ನಡೆಸಲಾಗಿದೆ. ಕಲಬುರಗಿ ಮೂಲದ ಪ್ರಸ್ತುತ ಕೊಂಚಾಡಿ ಬಳಿಯ ವೈದ್ಯರ ಮನೆಯಲ್ಲಿ ತೋಟದ ಕೆಲಸಕ್ಕಿರುವ ಈರಯ್ಯ ಎಂಬಾತನೇ ಆರೋಪಿ. ನಾಯಿ ತನ್ನ ಚಪ್ಪಲಿ ಕಚ್ಚಿ ಹಾಳು ಮಾಡಿರುವ ಕೋಪಕ್ಕೆ ನಾಯಿಯನ್ನೇ ಬೈಕಿಗೆ ಕಟ್ಟಿ ಕೊಂಚಾಡಿಯಿಂದ ಮೇರಿಹಿಲ್ ವರೆಗೆ ಅಂದರೆ ಸುಮಾರು 2 …

ನಾಯಿ ಚಪ್ಪಲಿ ಕಚ್ಚಿತೆಂದು ಬೈಕ್ ಗೆ ನಾಯಿಯನ್ನೇ ಕಟ್ಟಿ ದರ ದರ ಎಳೆದೊಯ್ದ ಧೂರ್ತ ,ಆರೋಪಿ ಬಂಧನ Read More »

ಜಿಲ್ಲೆಯಲ್ಲಿ ಕೋವಿಡ್‌ನಿಂದ ಗುಣಮುಖರಾಗುವವರ ಪ್ರಮಾಣದಲ್ಲಿ ಏರಿಕೆ : ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.

ದ.ಕ.ಜಿಲ್ಲೆಯಲ್ಲಿ ಸದ್ಯ 10,398 ಕೋವಿಡ್ ಪ್ರಕರಣಗಳಿದೆ. 1,470 (ಶೇ.13.26) ರೋಗಿಗಳು ಆಸ್ಪತ್ರೆಯಲ್ಲಿ ಮತ್ತು 8,928(ಶೇ 85.86) ಮನೆ ಹಾಗೂ 91 (ಶೇ 0.88) ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದೊಂದು ವಾರ ದಿಂದ ಕೋವಿಡ್ ಪರೀಕ್ಷೆಯಲ್ಲಿ ಶೇ.31.58 ಸೋಂಕು ದೃಢ ಪಡುವ ಪ್ರಕರಣಗಳು ಕಂಡುಬರುತ್ತಿವೆ. ಪ್ರತಿದಿನ ಗುಣಮುಖ ಹೊಂದುವವರ ಪ್ರಮಾಣವು ಶೇ.84 .63ರಷ್ಟಿದ್ದರೆ ಮರಣ ಪ್ರಮಾಣವು ಶೇ.1.23 ರಷ್ಟಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತು …

ಜಿಲ್ಲೆಯಲ್ಲಿ ಕೋವಿಡ್‌ನಿಂದ ಗುಣಮುಖರಾಗುವವರ ಪ್ರಮಾಣದಲ್ಲಿ ಏರಿಕೆ : ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. Read More »

ಮೇ. 24ರ ಬೆಳಗ್ಗೆ 6 ರಿಂದ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ: ಜಿಲ್ಲಾಧಿಕಾರಿ

ಉಡುಪಿ: ಕೊರೊನ ಸೋಂಕು ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್- 19 ಸೋಂಕು ಪ್ರಸರಣದ ಸರಪಳಿಯನ್ನು ಮುರಿಯಲು ಮೇ 24ರ ಬೆಳಗ್ಗೆ 6 ರಿಂದ ಜೂ.7ರ ಬೆಳಗ್ಗೆ 6 ವರೆಗೆ ಉಡುಪಿ ಜಿಲ್ಲೆ ಯಾದ್ಯಂತ ಸಿಆರ್‌ಪಿಸಿ ಸೆಕ್ಷನ್144(3)ನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಅನ್ವಯವಾಗುವಂತೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಮುಂದಿನ ಆದೇಶದವರೆಗೆ ಹಲವು ಮಾರ್ಗಸೂಚಿಗಳನ್ನು ಅವರು ಹೊರಡಿಸಿದ್ದಾರೆ. ಈ ಮಾರ್ಗಸೂಚಿಗಳು ಮೇ 24ರ ಬೆಳಗ್ಗೆ 6ರಿಂದ ಜೂ.7ರ ಬೆಳಗ್ಗೆ 6ರವರೆಗೆ ಜಾರಿಯಲ್ಲಿರುತ್ತವೆ ಎಂದವರು …

ಮೇ. 24ರ ಬೆಳಗ್ಗೆ 6 ರಿಂದ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ: ಜಿಲ್ಲಾಧಿಕಾರಿ Read More »

ಮೆಹಂದಿ ಪಾರ್ಟಿಯಲ್ಲಿ ಮಾಸ್ಕ್ ಹಾಕದ ಆರೋಪ; 8 ಮಂದಿಯ ವಿರುದ್ಧ ಪ್ರಕರಣ ದಾಖಲು

ಉಡುಪಿ ಜಿಲ್ಲೆಯ ಕುಂದಾಪುರದ ಕರ್ಕುಂಜೆ ಗ್ರಾಮದ ಅಸೋಡಿ ಎಂಬಲ್ಲಿ ಮೇ 21ರಂದು ಸಂಜೆ ನಡೆದ ಮದುವೆ ಮೆಹಂದಿ ಕಾರ್ಯಕ್ರಮದಲ್ಲಿ ಮಾಸ್ಕ್ ಇಲ್ಲದೆ ಭಾಗವಹಿಸಿದ ಎಂಟು ಮಂದಿಯ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಮ್ರಾಡಿ ನಿವಾಸಿ ಭುಜಂಗ ಶೆಟ್ಟಿ ಎಂಬವರ ಮನೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಸುಮಾರು ಏಳು ಮಂದಿ ಮಾಸ್ಕ್ ಧರಿಸದೇ ಸುರಕ್ಷಿತ ಅಂತರ ಕಾಪಾಡದೇ ಕೋವಿಡ್ ನಿಯಮ ಉಲ್ಲಂಘಿಸಿ ಭಾಗವಹಿಸಿದ್ದಾರೆ ಎನ್ನಲಾದ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊ ಆಧಾರದಲ್ಲಿ ಫ್ಲೈಯಿಂಗ್ …

ಮೆಹಂದಿ ಪಾರ್ಟಿಯಲ್ಲಿ ಮಾಸ್ಕ್ ಹಾಕದ ಆರೋಪ; 8 ಮಂದಿಯ ವಿರುದ್ಧ ಪ್ರಕರಣ ದಾಖಲು Read More »

ಪುಟ್ಟ ಮಗುವಿನ ಸಂಗೀತ ‘ಜ್ಞಾನ’ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿತು

ಕಡಬ: ಖಾಸಗಿ ಚಾನೆಲ್ ನಡೆಸುವ ಸರಿಗಮಪ ಕಾರ್ಯಕ್ರಮದಲ್ಲಿ ಸಂಗೀತ ಮೋಡಿ ಮಾಡಿದ ಜ್ಞಾನ ಎನ್ನುವ ಪುಟ್ಟ ಬಾಲೆಯ ಹೆಸರು ಇಂಡಿಯನ್ ಬುಕ್ಕ್ ಆಫ್ ರೆರ್ಕಾಡ್‌ನಲ್ಲಿ ದಾಖಲಾಗಿದೆ. ತನ್ನ ಎರಡುವರೆ ವರ್ಷ ವಯಸ್ಸಿನಲ್ಲಿ ಸಂಗೀತ ಲೋಕದಲ್ಲಿ ಮಾಡಿದ ಸಾಧನೆಯ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಲಭಿಸಿದೆ.ಮೂಲತಃ ಕಡಬ ತಾಲೂಕು ಕೊಂಬಾರು ಕಟ್ಟೆ ಇಡ್ಯಡ್ಕ ಎಂಬಲ್ಲಿನ ನಿವಾಸಿ ಪ್ರಸ್ತುತ ಬೆಂಗಳೂರು ರಾಮನಗರದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿರುವ ರೇಖಾ ಹಾಗೂ ಬೆಂಗಳೂರು ಕನಕಪುರ ನಿವಾಸಿ, ಹಿನ್ನೆಲೆ ಗಾಯಕ ಗುರುರಾಜ್ ದಂಪತಿ …

ಪುಟ್ಟ ಮಗುವಿನ ಸಂಗೀತ ‘ಜ್ಞಾನ’ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿತು Read More »

ಸರಿಗಮಪ ರಿಯಾಲಿಟಿ ಶೋನಲ್ಲಿ ಮೋಡಿ ಮಾಡಿದ್ದ ಜ್ಞಾನ ಹೆಸರು ಈಗ ಇಂಡಿಯನ್ ಬುಕ್ ಆಫ್ ರೆರ್ಕಾಡ್‌ನಲ್ಲಿ ದಾಖಲು

ಕಡಬ: ಖಾಸಗಿ ಚಾನೆಲ್ ನಡೆಸುವ ಸರಿಗಮಪ ಕಾರ್ಯಕ್ರಮದಲ್ಲಿ ಸಂಗೀತ ಮೋಡಿ ಮಾಡಿದ ಜ್ಞಾನ ಎನ್ನುವ ಪುಟ್ಟ ಬಾಲೆಯ ಹೆಸರು ಇಂಡಿಯನ್ ಬುಕ್ ಆಫ್ ರೆರ್ಕಾಡ್‌ನಲ್ಲಿ ದಾಖಲಾಗಿದೆ. ತನ್ನ ಎರಡುವರೆ ವರ್ಷದ ಪ್ರಾಯದಲ್ಲಿ ಸಂಗೀತ ಲೋಕದಲ್ಲಿ ಮಾಡಿದ ಸಾಧನೆಯ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಲಭಿಸಿದೆ. ಮೂಲತಃ ಕಡಬ ತಾಲೂಕು ಕೊಂಬಾರು ಕಟ್ಟೆ ಇಡ್ಯಡ್ಕ ಎಂಬಲ್ಲಿನ ನಿವಾಸಿ ಪ್ರಸ್ತುತ ಬೆಂಗಳೂರು ರಾಮನಗರ ಎಂಬಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿರುವ ರೇಖಾ ಹಾಗೂ ಬೆಂಗಳೂರು ಕನಕಪುರ ನಿವಾಸಿ, ಹಿನ್ನೆಲೆ ಗಾಯಕ …

ಸರಿಗಮಪ ರಿಯಾಲಿಟಿ ಶೋನಲ್ಲಿ ಮೋಡಿ ಮಾಡಿದ್ದ ಜ್ಞಾನ ಹೆಸರು ಈಗ ಇಂಡಿಯನ್ ಬುಕ್ ಆಫ್ ರೆರ್ಕಾಡ್‌ನಲ್ಲಿ ದಾಖಲು Read More »

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಿಟ್ ವಿತರಣೆಗೆ ಚಾಲನೆ

ಮಂಗಳೂರು .ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಇರುವ ವೈದ್ಯಕೀಯ ಬಳಕೆಗೆ ಬೇಕಾಗಿರುವ ಸಾಮಗ್ರಿಗಳಾದಸರ್ಜಿಕಲ್ ಗ್ಲೌಸ್, ಮಾಸ್ಕ್,ಜಿಂಕ್ ವಿಟಮಿ ನ್ “C”ಮಾತ್ರೆಗಳನ್ನು ಒದಗಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸುದರ್ಶನ್ ಎಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಾಪೌರರಾದ ಪ್ರೇಮಾನಂದ್ ಶೆಟ್ಟಿ ,ಕರ್ನಾಟಕ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ಶ್ರೀ ನಿತಿನ್ ಕುಮಾರ್,ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸದಸ್ಯರಾದ ಅಕ್ಷಯ್ ಆಳ್ವ, ಮಂಗಳೂರು ನಗರ ದಕ್ಷಿಣ ಸಾಮಾಜಿಕ …

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಿಟ್ ವಿತರಣೆಗೆ ಚಾಲನೆ Read More »

ಅಂದರ್- ಬಾಹರ್ ಆಟ | ಒಟ್ಟು11 ಮಂದಿ ಅಂದರ್ !

ಮಂಗಳೂರಿನ ಬಿಕರ್ನಕಟ್ಟೆಯ ಬಾಡಿಗೆ ಮನೆಯಲ್ಲಿ ಅಕ್ರಮ ಜೂಜಾಟ ಅಂದರ್- ಬಾಹರ್ ಆಟ ಆಡುತ್ತಿದ್ದ ಆರೋಪದಲ್ಲಿ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ರಾಜೇಂದ್ರ ಹಲ್ದಾರ್(41), ಕನಕಪ್ಪ ಕೋಟಿ(40), ರಾಘವೇಂದ್ರ(24), ಉಮೇಶ ರಾಮಪ್ಪ ಚೌಡಪ್ಪ,(24), ಲಕ್ಷ್ಮಪ್ಪ (37), ರೋಹನ್ (24), ಲಕ್ಕಪ್ಪ, ಹನುಮಪ್ಪ ವಾಲಿಕಾರ್(26), ಬಾಸ್ಕರ (54) ಚಿದಾನಂದ (25), ಶಿವಲಿಂಗಪ್ಪ(30) ಎಂದು ಗುರುತಿಸಿದ್ದು,ಬಂಧಿತರಿಂದ ಜೂಜಾಟಕ್ಕೆ ಬಳಸಿದ 90.000 ರೂ. ನಗದು, ಮೊಬೈಲ್ ಫೋನುಗಳು ಹಾಗು ಇತರ ಸೊತ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಈ ಕುರಿತು ಮಂಗಳೂರು ಪೂರ್ವ …

ಅಂದರ್- ಬಾಹರ್ ಆಟ | ಒಟ್ಟು11 ಮಂದಿ ಅಂದರ್ ! Read More »

ಸೈಕಲ್‌ಗೆ ಲಾರಿ ಡಿಕ್ಕಿ, ಸೈಕಲ್ ಸವಾರ ಸ್ಥಳದಲ್ಲೇ ಮೃತ್ಯು

ಮಂಗಳೂರು : ರಾ.ಹೆ.ಯ ಬೈಕಂಪಾಡಿಯಲ್ಲಿ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮೃತ ಸೈಕಲ್ ಸವಾರನನ್ನು ಮಧು ಕೆ. ಎಂದು ಗುರುತಿಸಲಾಗಿದೆ. ಈತ ಹೈ ರೇಂಜ್ ಸೆಕ್ಯುರಿಟಿ ಸರ್ವಿಸಸ್‌ನ ಉದ್ಯೋಗಿ ಎಂದು ತಿಳಿದುಬಂದಿದೆ. ಶುಕ್ರವಾರ ಸಂಜೆ ಈತ ಸೈಕಲ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದ ಲಾರಿ ಢಿಕ್ಕಿ ಹೊಡೆಯಿತು ಎನ್ನಲಾಗಿದ್ದು, ಇದರಿಂದ ಸೈಕಲ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಉತ್ತರ …

ಸೈಕಲ್‌ಗೆ ಲಾರಿ ಡಿಕ್ಕಿ, ಸೈಕಲ್ ಸವಾರ ಸ್ಥಳದಲ್ಲೇ ಮೃತ್ಯು Read More »

error: Content is protected !!
Scroll to Top