Praveen Chennavara

Praveen Chennavara Palthady village & post Kadaba Taluq D.K.-For contact- 7090806456

ಕೋವಿಡ್ ಸಂದರ್ಭದಲ್ಲಿ ಜನರಿಗೆ ನಿರಂತರ ಸ್ಪಂದನೆ – ಹರೀಶ್ ಕಂಜಿಪಿಲಿ

ಸುಳ್ಯದಲ್ಲಿ ಸಚಿವ ಅಂಗಾರ ನೇತೃತ್ವದಲ್ಲಿ ವಾರ್ ರೂಮ್ ರಚಿಸಿ ಜನಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಕೆಲಸವನ್ನು ಕಳೆದ 15ದಿನಗಳಿಂದಲೂ ಮಾಡುತ್ತಿದೆ. ಅಗತ್ಯ ವಸ್ತುಗಳ ಪೂರೈಕೆ, ಔಷಧಿ ಪೂರೈಕೆ, ಅಂತ್ಯ ಸಂಸ್ಕಾರಕ್ಕೆ ನೆರವು, ಈ ರೀತಿ ನಿರಂತರ ಜನಸೇವೆ ಯಲ್ಲಿ ಜನಪ್ರತಿನಿದಿಗಳು ಹಾಗೂ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ. ಈಗ ಲಾಕ್ ಡೌನ್ ವಿರೋಧಿಸುತ್ತಿರುವ ಕಾಂಗ್ರೆಸ್ಸಿಗರು ಕೆಲವು ದಿನಗಳ ಹಿಂದೆ ಲಾಕ್ ಡೌನ್ ಮಾಡದಿರುವ ಕುರಿತು ಟೀಕಿಸಿದ್ದರು. ಅಧಿಕಾರ ಇಲ್ಲದೇ …

ಕೋವಿಡ್ ಸಂದರ್ಭದಲ್ಲಿ ಜನರಿಗೆ ನಿರಂತರ ಸ್ಪಂದನೆ – ಹರೀಶ್ ಕಂಜಿಪಿಲಿ Read More »

ಮಂಗಳೂರು ಅನಗತ್ಯವಾಗಿ ನಗರಕ್ಕೆ ಬಂದ ವಾಹನ ಸೀಝ್ | ಐವನ್ ಡಿಸೋಜರ ಮಾತು ಕೇಳಿ ಸೀಝ್ ಆಯ್ತು ಗಾಡಿ

ಮಂಗಳೂರು: ಇಂದಿನಿಂದ ಮೇ 24ರವರೆಗೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಜಾರಿಯಲ್ಲಿದ್ದು, ಅನಗತ್ಯ ಸಂಚಾರಕ್ಕೆ ಅವಕಾಶವಿಲ್ಲ. ಆದರೂ ಸೋಮವಾರ ನಿಗಧಿತ ಅವಧಿ ಮೀರಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಬಂದ 180ಕ್ಕೂ ಅಧಿಕ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದ ಬಳಿಕ ಮಾಜಿ ಎಂಎಲ್ ಸಿ ಐವನ್ ಡಿಸೋಜ ಅವರು ಬೆಳಗ್ಗೆ 10 ಗಂಟೆಯವರೆಗೆ ವಾಹನ ಉಪಯೋಗಿಸಲು ಯಾವುದೇ ಅಡ್ಡಿಯಿಲ್ಲ ಎಂದು ದ.ಕ.ಜಿಲ್ಲಾಧಿಕಾರಿ ಸೂಚನೆ ನೀಡಿದ್ದು ಈ ಬಗ್ಗೆ ತಾನು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಮಂತ್ರಿಯವರೊಡನೆ ಮಾತನಾಡಿರುವೆ ಎಂದು ತಮ್ಮ …

ಮಂಗಳೂರು ಅನಗತ್ಯವಾಗಿ ನಗರಕ್ಕೆ ಬಂದ ವಾಹನ ಸೀಝ್ | ಐವನ್ ಡಿಸೋಜರ ಮಾತು ಕೇಳಿ ಸೀಝ್ ಆಯ್ತು ಗಾಡಿ Read More »

ಮೇ.11ರಿಂದ ಮೇ.15ರವರೆಗೆ ಎಲ್ಲ ವಹಿವಾಟು ಸ್ಥಗಿತಗೊಳಿಸಿದ ಕ್ಯಾಂಪ್ಕೊ

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ಯಾಂಪ್ಕೊ ಸಂಸ್ಥೆ ತಾತ್ಕಾಲಿಕವಾಗಿ ತನ್ನ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಕ್ಯಾಂಪ್ಕೊ, ಹೆಚ್ಚುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಕರ್ನಾಟಕ ಮತ್ತು ಕೇರಳದಲ್ಲಿ ರಾಜ್ಯ ಸರಕಾರಗಳು ಲಾಕ್ಡೌನ್ ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಪ್ಕೊ ಕೂಡ ಈಗಾಗಲೇ ತನ್ನ ಖರೀದಿ ಪ್ರಕ್ರಿಯೆಗೆ ಕೆಲವೊಂದು ನಿಯಮಗಳನ್ನು ವಿಧಿಸಿ ಕಾರ್ಯಾಚರಿಸುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ತನ್ನ ಸದಸ್ಯರ ಮತ್ತು ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ರೋಗ ಹರಡುವಿಕೆಯ …

ಮೇ.11ರಿಂದ ಮೇ.15ರವರೆಗೆ ಎಲ್ಲ ವಹಿವಾಟು ಸ್ಥಗಿತಗೊಳಿಸಿದ ಕ್ಯಾಂಪ್ಕೊ Read More »

ಎಲ್ಲಾ ಜಿಲ್ಲಾ, ತಾಲ್ಲೂಕಿನಲ್ಲಿ ಪತ್ರಕರ್ತರಿಗೆ ವ್ಯಾಕ್ಸಿನೇಷನ್‌: ಸಚಿವ ಡಾ.ಸುಧಾಕರ್ ಸೂಚನೆ

ಕೋವಿಡ್ ಸಂದರ್ಭದಲ್ಲಿಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್‌ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಎಲ್ಲಾ ವಯೋಮಾನದ ಪತ್ರಕರ್ತರಿಗೆ ಉಚಿತವಾಗಿ ವ್ಯಾಕ್ಸಿನ್ ನೀಡಬೇಕೆಂದುಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಸುಧಾಕರ್ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಿಎಂ ಆದೇಶ ಮಾಡಿದ್ದರೂ, ಕೆಲವು ಜಿಲ್ಲೆಯಲ್ಲಿ ಸಮಸ್ಯೆ ಮಾಡುತ್ತಿರುವ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ( *kUWJ ) ಅಧ್ಯಕ್ಷ ಶಿವಾನಂದ ತಗಡೂರು ಅವರು ಸಚಿವರನ್ನು ಭೇಟಿ ಮಾಡಿ ಗಮನಕ್ಕೆ ತಂದ …

ಎಲ್ಲಾ ಜಿಲ್ಲಾ, ತಾಲ್ಲೂಕಿನಲ್ಲಿ ಪತ್ರಕರ್ತರಿಗೆ ವ್ಯಾಕ್ಸಿನೇಷನ್‌: ಸಚಿವ ಡಾ.ಸುಧಾಕರ್ ಸೂಚನೆ Read More »

ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಕಟ್ಟೆ ಪ್ರದೇಶ ಸೀಲ್ ಡೌನ್

ಬೆಳ್ತಂಗಡಿ ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗು ತ್ತಿದ್ದು, ತಾಲೂಕಿನ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಕಟ್ಟೆ ಪ್ರದೇಶದಲ್ಲಿ ಸುಮಾರು 25 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು ಈ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಮಾವಿನಕಟ್ಟೆ ಪ್ರದೇಶದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿವೆ. ಸ್ಥಳಕ್ಕೆ ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಭಾಷಿಣಿ ಗೌಡ, ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಸುಧಾಕರ ಮಜಲು, ಯಶೋಧರ ಶೆಟ್ಟಿ, ಮಾಣಿಕ್ಯ, ಅಬ್ದುಲ್ ಕರೀಂ, ವಿಜಯ್ ಗೌಡ, ಲತೀಫ್, ಪುಷ್ಪ, ಮೋಹಿನಿ, ಇಂದಿರಾ, ಮಾರಿಟ್ …

ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಕಟ್ಟೆ ಪ್ರದೇಶ ಸೀಲ್ ಡೌನ್ Read More »

ಮನೆಯಲ್ಲಿ ದನವಿಲ್ಲದಿದ್ದರೂ ಬೈಕ್‌ನಲ್ಲಿ ಹಾಲಿನ ಕ್ಯಾನ್ | ಪೊಲೀಸರನ್ನು ಯಾಮಾರಿಸೋ ಯುವಕನ ಬಣ್ಣ ಬಯಲು : ಪೊಲೀಸರನ್ನು ಯಾಮಾರಿಸಬಹುದು, ಆದರೆ ಕೊರೊನಾವನ್ನಲ್ಲ !

ಕೋರೋನ ರೋಗದ ನಿಮಿತ್ತ ಸರಕಾರ ಒಂದಲ್ಲ ಒಂದು ಕಟ್ಟುಪಾಡುಗಳನ್ನು ಜಾರಿಗೆ ತರುತ್ತಿದೆ. ಹಾಗಾದರೂ ಸೋಂಕು ಹರಡದೆ ಇರಲಿ, ಎಂಬ ಸದುದ್ದೇಶ. ಹೊರಗಡೆ ಬಂದು ರಸ್ತೆಗಿಳಿದರೆ ಪೊಲೀಸರು ಮತ್ತು ಇತರ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾರೆ. ಮನೆಯಲ್ಲಿ ಕೂರಲು ಆಗದೆ ಇರುವವರು, ಹೇಗಾದರು ಮಾಡಿ ಪೊಲೀಸರ ಮತ್ತು ಅಧಿಕಾರಿಗಳ ಕಣ್ಣಿಂದ ತಪ್ಪಿಸಿಕೊಳ್ಳಬೇಕೆಂದು ಹಲವರು ವಿನೂತನ ಐಡಿಯಾಗಳಿಗೆ ಮೊರೆಹೋಗುತ್ತಿದ್ದಾರೆ. ಅಲ್ಲಿ ಕಡಬ ತಾಲೂಕಿನ ಪೇರಡ್ಕ ಎಂಬಲ್ಲಿ ಯುವಕನೊಬ್ಬ ಸಕತ್ ಪ್ಲಾನ್ ಹೆಣೆದಿದ್ದು, ಆತ ರಸ್ತೆಗೆ ಇಳಿಯುವಾಗ ಸದಾ ತನ್ನೊಂದಿಗೆ ಹಾಲಿನ ಕ್ಯಾನ್ …

ಮನೆಯಲ್ಲಿ ದನವಿಲ್ಲದಿದ್ದರೂ ಬೈಕ್‌ನಲ್ಲಿ ಹಾಲಿನ ಕ್ಯಾನ್ | ಪೊಲೀಸರನ್ನು ಯಾಮಾರಿಸೋ ಯುವಕನ ಬಣ್ಣ ಬಯಲು : ಪೊಲೀಸರನ್ನು ಯಾಮಾರಿಸಬಹುದು, ಆದರೆ ಕೊರೊನಾವನ್ನಲ್ಲ ! Read More »

ಸವಣೂರು : ಅವಧಿ ಮೀರಿ ವ್ಯಾಪಾರ | ಅಂಗಡಿಗಳಿಗೆ ದಂಡ ವಿಧಿಸಿದ ಗ್ರಾ.ಪಂ,ಮಾಸ್ಕ್ ಹಾಕದವರಿಗೂ ದಂಡ

     ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿ ರಾಜ್ಯಾದ್ಯಂತ ಮೇ.10 ರಿಂದ ಆರಂಭಗೊಂಡ ಸೆಮಿಲಾಕ್‌ಡೌನ್ ನಲ್ಲಿ ಬೆಳಗ್ಗಿನಿಂದಲೇ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಅದಕ್ಕಾಗಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಲಾಗಿದ್ದು,ಆದರೂ ಕೆಲವೆಡೆ ಅವಧಿ ಮೀರಿ ವ್ಯಾಪಾರ ನಡೆಸುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸವಣೂರು ಪೇಟೆಯಲ್ಲಿ ಕಾರ್ಯಾಚರಣೆ ನಡೆಸಿದ ಸವಣೂರು ಗ್ರಾ.ಪಂ ಹಾಗೂ ಪೊಲೀಸರು ಅಂಗಡಿಗಳಿಗೆ ದಂಡ ವಿಧಿಸಿದರು,ಜತೆಗೆ ಮಾಸ್ಕ್ ಹಾಕದವರಿಗೂ ದಂಡ ಹಾಕಲಾಯಿತು. ಇತ್ತ ಪಾಲ್ತಾಡಿ ಗ್ರಾಮದಲ್ಲೂ ಕಾರ್ಯಾಚರಣೆ ನಡೆಸಿದ ಗ್ರಾ.ಪಂ.ತಂಡ ಅಂಕತ್ತಡ್ಕದಲ್ಲಿ ಅವಧಿ ಮೀರಿ …

ಸವಣೂರು : ಅವಧಿ ಮೀರಿ ವ್ಯಾಪಾರ | ಅಂಗಡಿಗಳಿಗೆ ದಂಡ ವಿಧಿಸಿದ ಗ್ರಾ.ಪಂ,ಮಾಸ್ಕ್ ಹಾಕದವರಿಗೂ ದಂಡ Read More »

ಪುತ್ತೂರು ಕೋವಿಡ್ ರೂಲ್ಸ್ ಬ್ರೇಕ್ | ಹಲವು ವಾಹನಗಳ ಮುಟ್ಟುಗೋಲು ,ಅನಗತ್ಯ ತಿರುಗಾಟಕ್ಕೆ ಪೊಲೀಸ್ ತಡೆ

ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿ ರಾಜ್ಯಾದ್ಯಂತ ಮೇ.10 ರಿಂದ ಆರಂಭಗೊಂಡ ಸೆಮಿಲಾಕ್‌ಡೌನ್ ನಲ್ಲಿ ಪೊಲೀಸರು ಬೆಳಗ್ಗಿನಿಂದಲೇ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಅನಗತ್ಯ ವಾಹನಗಳಿಗೆ ಕಡಿವಾಣ ಹಾಕಿ ಹಲವು ವಾಹನಗಳನ್ನು ಮುಟ್ಟುಗೋಲು ಹಾಕಿದ್ದಾರೆ. ದರ್ಬೆ, ಮಂಜಲ್ಪಡ್ಪು, ನೆಹರುನಗರದಲ್ಲಿ ಮುಖ್ಯರಸ್ತೆ ಸಂಪರ್ಕವಾಗುವಲ್ಲಿ ಭಾರಿ ವಾಹನ ದಟ್ಟಣೆಯನ್ನು ಪೊಲೀಸರು ನಿಯಂತ್ರಿಸಿದಲ್ಲದೆ. ಕೆಲವು ವಾಹನಗಳಿಂದ ತಾವೇ ಕೀ ಎಳೆದು ವಾಹನಗಳ ಮಾಲಕರಿಗೆ ದಂಡ ವಿಧಿಸಿದರು. ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಗೋಪಾಲ್ ನಾಯ್ಕ್, ಎಸ್.ಐ ಜಂಬೂರಾಜ್ ಮಹಾಜನ್ ಹಾಗೂ ಸಿಬಂದಿಗಳು …

ಪುತ್ತೂರು ಕೋವಿಡ್ ರೂಲ್ಸ್ ಬ್ರೇಕ್ | ಹಲವು ವಾಹನಗಳ ಮುಟ್ಟುಗೋಲು ,ಅನಗತ್ಯ ತಿರುಗಾಟಕ್ಕೆ ಪೊಲೀಸ್ ತಡೆ Read More »

ಬರ್ತ್ ಡೇ ಪಾರ್ಟಿಯಲ್ಲಿ ಶೂಟೌಟ್ | 7 ಜನರ ಸಾವು

ಬರ್ತ್ ಡೇ ಪಾರ್ಟಿಯೊಂದರಲ್ಲಿ ಬಂದೂಕುಧಾರಿಯೊಬ್ಬ ಮನ ಬಂದಂತೆ ಗುಂಡು ಹಾರಿಸಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ ಘಟನೆ ಅಮೆರಿಕದ ಕೊಲರಾಡೋದಲ್ಲಿ ನಡೆದಿದೆ. ಕೊಲೊರಾಡೋ ಸ್ಪ್ರಿಂಗ್ಸ್ ನ ಮೊಬೈಲ್ ಹೋಮ್ ಪಾರ್ಕ್ ನಲ್ಲಿ ಮಧ್ಯರಾತ್ರಿಯ ವೇಳೆ ಈ ದಾಳಿ ನಡೆದಿದೆ. ಸ್ನೇಹಿತರು, ಕುಟುಂಬ ಮತ್ತು ಮಕ್ಕಳು ಭಾಗವಹಿಸಿದ ಪಾರ್ಟಿಯಲ್ಲಿ ಒಳನುಗ್ಗಿದ ಬಂದೂಕುಧಾರಿ ಗುಂಡು ಹಾರಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ. ಶಂಕಿತ ಶೂಟರ್ ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಯುವತಿಯ ಬಾಯ್ ಫ್ರೆಂಡ್ ಎನ್ನಲಾಗಿದೆ. ಆರು ಜನರನ್ನು ಕೊಂದ ಆರೋಪಿಯು …

ಬರ್ತ್ ಡೇ ಪಾರ್ಟಿಯಲ್ಲಿ ಶೂಟೌಟ್ | 7 ಜನರ ಸಾವು Read More »

ಮಂಗಳೂರು : ಆಮ್ಲಜನಕ ಪೂರೈಕೆಯ ಘಟಕಗಳಿಗೆ ಉಸ್ತುವಾರಿ ಸಚಿವರು ಭೇಟಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಕೋಟಾ ಶ್ರೀನಿವಾಸ ಪೂಜಾರಿ, ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಹಾಗೂ ಡಿಸಿ ಡಾ.ಕೆ.ವಿ ರಾಜೇಂದ್ರ ಅವರು ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆಯನ್ನು ಸುವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ ಭಾನುವಾರ ಮೂರು ಪ್ರಮುಖ ಆಮ್ಲಜನಕ ಘಟಕಗಳಿಗೆ ಭೇಟಿ ನೀಡಿ ಆಮ್ಲಜನಕ ಪೂರೈಕೆದಾರರೊಂದಿಗೆ ಮಾತುಕತೆ ನಡೆಸಿದರು. ಆಸ್ಪತ್ರೆಗಳಿಂದ ಆಮ್ಲಜನಕದ ಬೇಡಿಕೆ, ಪೂರೈಕೆ ಒಟ್ಟು ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಲು ಈಗಾಗಲೇ ಜಿಲ್ಲಾಡಳಿತದಿಂದ ಅಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ …

ಮಂಗಳೂರು : ಆಮ್ಲಜನಕ ಪೂರೈಕೆಯ ಘಟಕಗಳಿಗೆ ಉಸ್ತುವಾರಿ ಸಚಿವರು ಭೇಟಿ Read More »

error: Content is protected !!
Scroll to Top