Praveen Chennavara

Praveen Chennavara Palthady village & post Kadaba Taluq D.K.-For contact- 7090806456

ಗ್ರಾ.ಪಂ. ಸದಸ್ಯರಿಗೂ ಲಸಿಕೆ ನೀಡಲು ಸಚಿವ ಸಂಪುಟದಲ್ಲಿ ಚರ್ಚೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕೊರೋನ ಕಾರ್ಯಪಡೆ ಸದಸ್ಯರಾಗಿರುವ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಕೊರೋನಾ ವಾರಿಯರ್ಸ್ ಎಂಬುದಾಗಿ ಪರಿಗಣಿಸಿ ಪ್ರಥಮ ಪ್ರಾಶಸ್ತ್ಯದಲ್ಲಿ ಕೊರೋನ ಲಸಿಕೆ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ನಾಳೆ ನಡೆಯುವ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಬೈಂದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರಕಾರಿ ನೌಕರರಾಗಿರುವ ಗ್ರಾಪಂ ಪಿಡಿಓ ಹಾಗೂ ಇತರ ಸಿಬ್ಬಂದಿಗೆ ಪ್ರಥಮ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡುವ ಕೆಲಸ ಆಗಿದೆ. ಇದೀಗ ಸದಸ್ಯರಿಗೂ ಲಸಿಕೆ …

ಗ್ರಾ.ಪಂ. ಸದಸ್ಯರಿಗೂ ಲಸಿಕೆ ನೀಡಲು ಸಚಿವ ಸಂಪುಟದಲ್ಲಿ ಚರ್ಚೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ Read More »

ಕೃಷಿಕರಿಗೆ ಪುತ್ತೂರು ಎಪಿಎಂಸಿಯಿಂದ ಶೂನ್ಯ ಬಡ್ಡಿಯಲ್ಲಿ ಅಡಮಾನ ಸಾಲ : ದಿನೇಶ್ ಮೆದು

ಪುತ್ತೂರು : ಕೊರೋನ ಲಾಕ್‌ಡೌನ್ ಸಂಕಷ್ಟ ಕಾಲದಲ್ಲಿ ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯು ಅಡಿಕೆ ಬೆಳೆಗಾರರಿಗೆ ಮತ್ತು ಊರಿನ ತರಕಾರಿ ಬೆಳೆಗಾರರಿಗೆ ಸಹಾಯವಾಗುವಂತೆ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದ್ದಾರೆ. ಅವರು ಬುಧವಾರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪುತ್ತೂರು ಶಾಸಕರ ಸೂಚನೆಯಂತೆ ಕೊರೋನ 1ನೇ ಅಲೆಯ ಸಂದರ್ಭದಲ್ಲಿ ಮಾಡಿದ ರೈತ ಪರ ಯೋಜನೆಯಂತೆ ಇದೀಗ 2ನೇ ಅಲೆಯ ಸಂದರ್ಭದಲ್ಲೂ ಶೂನ್ಯ ಬಡ್ಡಿ ದರದ ಅಡಮಾನ ಸಾಲ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ …

ಕೃಷಿಕರಿಗೆ ಪುತ್ತೂರು ಎಪಿಎಂಸಿಯಿಂದ ಶೂನ್ಯ ಬಡ್ಡಿಯಲ್ಲಿ ಅಡಮಾನ ಸಾಲ : ದಿನೇಶ್ ಮೆದು Read More »

ಸಿಬಿಐ ಮುಖ್ಯಸ್ಥರಾಗಿ ಸುಭೋದ್ ಕುಮಾರ್ ಜೈಸ್ವಾಲ್ ನೇಮಕ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮುಖ್ಯಸ್ಥ ಸುಬೋಧ್ ಕುಮಾರ್ ಜೈಸ್ವಾಲ್ ಅವರು ಸಿಬಿಐ ನೂತನ ಮುಖ್ಯಸ್ಥರಾಗಿ ಮಂಗಳವಾರ ನೇಮಕಗೊಂಡಿದ್ದಾರೆ. ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕರಾಗಿಯೂ ಸೇವೆ ಸಲ್ಲಿಸಿರುವ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ಎರಡು ವರ್ಷಗಳ ಅವಧಿಗೆ ಕೇಂದ್ರ ತನಿಖಾ ವಿಭಾಗದ(ಸಿಬಿಐ) ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧುರಿ ನಡುವಿನ ಸರಣಿ ಸಭೆಗಳ ನಂತರ ಸರಕಾರದ ಅಧಿಸೂಚನೆ ಬಂದಿದೆ. ಜೈಸ್ವಾಲ್ …

ಸಿಬಿಐ ಮುಖ್ಯಸ್ಥರಾಗಿ ಸುಭೋದ್ ಕುಮಾರ್ ಜೈಸ್ವಾಲ್ ನೇಮಕ Read More »

ದ.ಕ ಜಿಲ್ಲೆಯ ಮಂಗಳವಾರದ ವರದಿ: ಕೊರೊನಾಗೆ 10 ಬಲಿ; 755 ಮಂದಿಗೆ ಪಾಸಿಟಿವ್

ದ.ಕ. ಜಿಲ್ಲೆಯಲ್ಲಿ ಮಂಗಳವಾರ 10 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 873ಕ್ಕೇರಿದೆ. ಮೃತಪಟ್ಟವರಲ್ಲಿ ಮಂಗಳೂರಿನ 8, ಬಂಟ್ವಾಳ ಮತ್ತು ಪುತ್ತೂರಿನ ತಲಾ ಒಬ್ಬರು ಸೇರಿದ್ದಾರೆ. ಅಲ್ಲದೆ ಮಂಗಳವಾರ ಜಿಲ್ಲೆಯಲ್ಲಿ 755 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ. ಜಿಲ್ಲೆಯಲ್ಲಿ ಈವರಗೆ 8,32,828 ಮಂದಿಯ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 7,61,013 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟು 71,815 ಮಂದಿ ಕೊರೋನ ಸೋಂಕಿಗೊಳಗಾಗಿದ್ದಾರೆ. ಮಂಗಳವಾರ 933 ಮಂದಿ ಕೊರೋನ ಸೋಂಕಿನಿಂದ …

ದ.ಕ ಜಿಲ್ಲೆಯ ಮಂಗಳವಾರದ ವರದಿ: ಕೊರೊನಾಗೆ 10 ಬಲಿ; 755 ಮಂದಿಗೆ ಪಾಸಿಟಿವ್ Read More »

ಅಂಗಡಿಯಿಂದ ಹಾಗೂ ಮಸೀದಿಯಿಂದ ಕಳವು

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಎಂಬಲ್ಲಿನ ರಝಾಕ್ ಸ್ಟೋರ್ ಎಂಬ ಅಂಗಡಿಯಿಂದ 12 ಸಾವಿರ ರೂ. ನಗದು ಕಳವಾದ ಬಗ್ಗೆ ಅಂಗಡಿಯ ಮಾಲಕ ಮುಹಮ್ಮದ್ ನವಾಝ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೇ 23ರಂದು ಬೆಳಗ್ಗೆ 9:30ಕ್ಕೆ ತನ್ನ ಅಂಗಡಿಯ ಬಾಗಿಲು ಹಾಕಿ ಹೋಗಿದ್ದ ನವಾಝ್ ಮೇ 24ರಂದು ಬೆಳಗ್ಗೆ 7ಕ್ಕೆ ಆಗಮಿಸಿದಾಗ ಯಾರೋ ಕಳ್ಳರು ಕಿಟಕಿಯ ಮೂಲಕ ಡ್ರಾಯರ್‌ನಲ್ಲಿರಿಸಿದ್ದ ನಗದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇನ್ನೊಂದೆಡೆ ಚೊಕ್ಕಬೆಟ್ಟುವಿನ ತಣ್ಣೀರುಬಾವಿ ಮೊಹಿಯುದ್ದೀನ್ ಜುಮ್ಮಾ …

ಅಂಗಡಿಯಿಂದ ಹಾಗೂ ಮಸೀದಿಯಿಂದ ಕಳವು Read More »

ಧರ್ಮಸ್ಥಳ ವ್ಯಕ್ತಿ ಆತ್ಮಹತ್ಯೆ

ಬೆಳ್ತಂಗಡಿ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪುದುವೆಟ್ಟು ಗ್ರಾಮದ ಬಾಜಿದಡಿ ನಿವಾಸಿಯಾಗಿರುವ ಕೊರಗಪ್ಪ ಪೂಜಾರಿಯವರು ಇಂದು ಮುಂಜಾನೆ ಹಟ್ಟಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ ಮೃತರು ಇಬ್ಬರು ಪುತ್ರರು,ಓರ್ವ ಪುತ್ರಿಯನ್ನು ಅಗಲಿದ್ದಾರೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಮತ್ತೆ ಆರಂಭಗೊಳ್ಳಲಿದೆ ಐಪಿಎಲ್ ಕ್ರಿಕೆಟ್ ಪಂದ್ಯ

ಕೋವಿಡ್ ಎರಡನೇ ಅಲೆಯಿಂದಾಗಿ ರದ್ದುಗೊಂಡಿದ್ದ ಐಪಿಎಲ್‌ 14ನೇ ಆವೃತ್ತಿಯನ್ನು ಮತ್ತೆ ಶುರು ಮಾಡುವ ಇರಾದೆಯನ್ನು ಬಿಸಿಸಿಐ ವ್ಯಕ್ತಪಡಿಸಿದೆ. ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 10 ರವರೆಗೆ ಈ ಆವೃತ್ತಿಯ ಉಳಿದ ಪಂದ್ಯಗಳು ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದ ವೇಳಾಪಟ್ಟಿ ಶೀಘ್ರದಲ್ಲೇ ಹೊರಬೀಳಲಿದೆ. ಅಕ್ಟೋಬರ್ 10 ರಂದು ಐಪಿಎಲ್‌ನ 14ನೇ ಆವೃತ್ತಿಯ ಅಂತಿಮ ಪಂದ್ಯ ನಡೆಯುವ ಸಾಧ್ಯತೆ ಇದೆ. ಇದರಲ್ಲಿ 10 ಡಬಲ್ ಹೆಡರ್ ಪಂದ್ಯಗಳು, ಮತ್ತೊಂದು ಏಳು ಸಿಂಗಲ್ಸ್ ಪಂದ್ಯಗಳು ಹಾಗೂ 4 ಮುಖ್ಯ …

ಮತ್ತೆ ಆರಂಭಗೊಳ್ಳಲಿದೆ ಐಪಿಎಲ್ ಕ್ರಿಕೆಟ್ ಪಂದ್ಯ Read More »

ದ.ಕ.ಜಿಲ್ಲೆಯಲ್ಲಿ ಮಳೆ : ಯೆಲ್ಲೋ ಅಲರ್ಟ್ ಘೋಷಣೆ

ದ.ಕ.ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆಯಿಂದ ಸಾಧಾರಣ ಮಳೆಯಾಗಿದ್ದರೆ ಅಪರಾಹ್ನ ಮತ್ತು ಮುಸ್ಸಂಜೆಯ ವೇಳೆಗೆ ಹಲವು ಕಡೆ ಉತ್ತಮ ಮಳೆ ಸುರಿದಿದೆ. ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಯಾಸ್ ಚಂಡಮಾರುತದ ಪ್ರಭಾವದಿಂದ ಕರಾವಳಿಯಲ್ಲಿ ಮಳೆಯಾಗಿದೆ. ಮೇ 29ರವರೆಗೂ ಜಿಲ್ಲೆಯ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳವಾರ ಗರಿಷ್ಠ ತಾಪಮಾನ 29.6 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬುಧವಾರ ಮುಂಜಾನೆಯವರೆಗೆ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಗುಡಗು ಸಹಿತ …

ದ.ಕ.ಜಿಲ್ಲೆಯಲ್ಲಿ ಮಳೆ : ಯೆಲ್ಲೋ ಅಲರ್ಟ್ ಘೋಷಣೆ Read More »

ನಾಳೆಯಿಂದ ಭಾರತದಲ್ಲಿ ಬಂದ್ ಆಗಲಿದೆಯಾ ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್…?​

ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ ನಾಳೆಯಿಂದ ಭಾರತದಲ್ಲಿ ಇರಲಿದೆಯೇ ಎಂಬ ಕುತೂಹಲ ಎಲ್ಲರಲ್ಲೀ ಉಂಟಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅದಾಗಲೇ ಕುತೂಹಲ ಕೆರಳಿದ್ದು, ಭಾರತದಲ್ಲಿ ನಾಳೆಯಿಂದ ಇವೆಲ್ಲ ಕಾರ್ಯನಿರ್ವಹಿಸಲಿವೆಯೇ ಇಲ್ಲವೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಬಹುರಾಷ್ಟ್ರೀಯ ಕಂಪನಿಗಳಿಗೆ ಸೇರಿದ ಈ ಸೋಷಿಯಲ್ ಮೀಡಿಯಾ ಹಾಗೂ ಮೆಸೆಜಿಂಗ್ ಆ್ಯಪ್​ಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ಇರುವ ಹೊಸ ಮಧ್ಯಸ್ಥಿಕೆಯ ಮಾರ್ಗಸೂಚಿಗಳನ್ನು ಪಾಲಿಸಲು ನೀಡಿದ್ದ ಗಡುವು ಇಂದಿಗೆ ಮುಗಿಯಲಿದ್ದು, ಅವುಗಳ ಪಾಲನೆ ಸಂಬಂಧ ಈ ಕಂಪನಿಗಳಿಂದ ಯಾವುದೇ ಕ್ರಮ ಜರುಗಿಲ್ಲ. …

ನಾಳೆಯಿಂದ ಭಾರತದಲ್ಲಿ ಬಂದ್ ಆಗಲಿದೆಯಾ ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್…?​ Read More »

ಆಸ್ಪತ್ರೆಯಿಂದ ಕರೆತಂದ ವೃದ್ದೆಯನ್ನು ದಾರಿಮಧ್ಯೆ ಬಿಟ್ಟು ಹೋದ ಆ್ಯಂಬುಲೆನ್ಸ್ ಚಾಲಕ

ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದ ವೃದ್ಧೆಯೊಬ್ಬರನ್ನು ಆ್ಯಂಬುಲೆನ್ಸ್ ಚಾಲಕನೊಬ್ಬ ದಾರಿಮಧ್ಯೆ ಬಿಟ್ಟು ಹೋದ ಅಮಾನವೀಯ ಘಟನೆ ಸೋಮವಾರಪೇಟೆಯ ಕಿರಗಂದೂರು ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ. ಕಿರಗಂದೂರಿನ 60 ವರ್ಷದ ಪೊನ್ನಮ್ಮ ಮೇ 15ರಂದು ತೀವ್ರ ಉಸಿರಾಟದ ತೊಂದರೆಯಿಂದ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ,ಗುಣಮುಖರಾದ ಮೇಲೆ ರವಿವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು. ಆಸ್ಪತ್ರೆಯಿಂದ ಪೊನ್ನಮ್ಮ ಅವರ ಮನೆಗೆ ಮಾಹಿತಿ ನೀಡಿರಲಿಲ್ಲ. ಆ್ಯಂಬುಲೆನ್ಸ್ ನಲ್ಲಿ ಕರೆತಂದ ಚಾಲಕ ಸಂಜೆ 5 ಗಂಟೆಯ …

ಆಸ್ಪತ್ರೆಯಿಂದ ಕರೆತಂದ ವೃದ್ದೆಯನ್ನು ದಾರಿಮಧ್ಯೆ ಬಿಟ್ಟು ಹೋದ ಆ್ಯಂಬುಲೆನ್ಸ್ ಚಾಲಕ Read More »

error: Content is protected !!
Scroll to Top