ಬೀದಿ ನಾಯಿಯನ್ನು ಜೀವಂತವಾಗಿ ಹೂಳಿದ ಪಾಪಿಗಳು|ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಒಂಬತ್ತು ಜನರ ಬಂಧನ!!

Share the Article

ಶಿವಮೊಗ್ಗ:ಬೀದಿ ನಾಯಿಗಳ ಹತ್ಯೆ ಮಾಡುವವರ ಸಂಖ್ಯೆ ಇತ್ತೀಚಿಗೆ ಅಧಿಕವೇ ಆಗಿದೆ.ಅವುಗಳಿಗೆ ಅನ್ನ ನೀಡಿ ಆಶ್ರಯ ನೀಡಬೇಕಿದ್ದ ಜನಗಳೇ ಅವುಗಳಿಗೆ ಹಿಂಸೆ ನೀಡುತ್ತಿದ್ದಾರೆ.

ಇದೀಗ ಭದ್ರಾವತಿ ತಾಲೂಕು ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳನ್ನು ಕೊಂದು ಅರಣ್ಯಪ್ರದೇಶದಲ್ಲಿ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರು, ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಮತ್ತು ನಾಯಿಗಳನ್ನು ಹಿಡಿದು ಸಾಯಿಸಿದ್ದ ಮೈಸೂರಿನ ನಾಲ್ವರನ್ನು ಬಂಧಿಸಲಾಗಿದೆ.

ಬೀದಿನಾಯಿಗಳ ಕಾಟ ವಿಪರೀತವಾಗಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಕಂಬದಾಳ್ ಹೊಸೂರು ಹುಣಸೆಕಟ್ಟೆ ಸಮೀಪ ಆಳದ ಗುಂಡಿ ತೆಗೆದು ಜೀವಂತವಾಗಿ ಹೂಳಲಾಗಿತ್ತು. ಪ್ರಾಣಿದಯಾ ಸಂಘದವರಿಗೆ ಈ ವಿಚಾರ ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು 9ಮಂದಿಯನ್ನು ಬಂಧಿಸಿದ್ದಾರೆ.

Leave A Reply