ಜಿಲ್ಲಾ ಮಾರುಕಟ್ಟೆಗೆ ಬರಲಿದೆ ನಾಟಿ ಹಸುಗಳ ಪೌಷ್ಟಿಕಯುಕ್ತವಾದ ಕಲಬೆರಕೆ ರಹಿತ ಹಳ್ಳಿ-ಹಾಲು…ಗ್ರಾಮೀಣ ಯುವಕನ ಸಾಧನೆಗೆ ನಿಮ್ಮದೊಂದು ಸಹಕಾರವಿರಲಿ

Share the Article

ಜಿಲ್ಲೆಯ ಮಾರುಕಟ್ಟೆಗೆ ಬರಲಿದೆ ಶುದ್ಧ ದೇಸಿ ತಳಿಯ ಉತ್ತಮ ಗುಣಮಟ್ಟದ ಕಲಬೆರಕೆ ರಹಿತ ಹಳ್ಳಿಹಾಲು.ಕಳೆದ ನಾಲ್ಕು ವರುಷಳಿಂದ ಧಾರಾಮೃತ ಡೈರಿ ಪ್ರಾಡಕ್ಟ್ಸ್ ಪ್ರೈ.ಲಿ. ಪಾಲುದಾರಿಕೆಯೊಂದಿಗೆ ಪಿರಿಯಾಪಟ್ಟಣದಲ್ಲಿ ನಡೆಯುತ್ತಿದ್ದ ರೈತರಿಂದ ನೇರ ಗ್ರಾಹಕರಿಗೆ ದೊರೆಯುತ್ತಿದ್ದ ಹಾಲು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಮಾರುಕಟ್ಟೆಗೆ ಲಗ್ಗೆ ಇಡಲು ತಯಾರಾಗಿದೆ. ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಹಳ್ಳಿ-ಹಾಲು ಎಂಬ ಹೆಸರಿನಿಂದ ಹೊಸದಾಗಿ ಉತ್ತಮ ಸ್ಪಂದನೆಯನ್ನು ಕೋರಿದೆ.

ಸುಮಾರು 1600 ರಷ್ಟು ರೈತರನ್ನು ಒಳಗೊಂಡು, ಹಳ್ಳಿಕಾರ್ ಮತ್ತು ಮಲ್ನಾಡ್ ಗಿಡ್ಡ ಜಾತಿಯ ಹಸುವಿನಿಂದ ಹಾಲು ಸಂಗ್ರಹಿಸಿ, ಯಾವುದೇ ಕಲಬೆರಕೆ ಇಲ್ಲದೇ ನೇರವಾಗಿ ಗ್ರಾಹಕರಿಗೆ ನೀಡುತ್ತಿದೆ. ಈ ಮೊದಲು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿರಿಸಿದ್ದ ಮಾರುಕಟ್ಟೆ ಇಂದು ಬೆಳೆದು ಹಳ್ಳಿ ಹಾಲು ಎಂಬ ಹೊಸ ಬ್ರಾಂಡ್ ಮುಖಾಂತರ ರಾಜ್ಯದ ಕೆಲ ಭಾಗಗಳಿಗೆ ಪೂರೈಸುತ್ತಿದೆ. ಹಳ್ಳಿಗಳಲ್ಲಿ ತನ್ನದೇ ಡೈರಿ ಹೊಂದಿದ್ದು, ರೈತರಿಂದ ಹಾಲನ್ನು ಶೇಖರಿಸಿ, ಗುಣಮಟ್ಟ ಪರಿಶೀಲಿಸಿ ಕೇವಲ 48 ಗಂಟೆಯೊಳಗಡೆ ಗ್ರಾಹಕರಿಗೆ ನೀಡಲಾಗುತ್ತಿದೆ.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಎಲ್ಲಾ ಭಾಗಗಳಿಗೂ ಈ ಹಳ್ಳಿ ಹಾಲನ್ನು ಪರಿಚಯಿಸುವ ಕನಸನ್ನು ಹೊಂದಿದ್ದು ಇದೇ ಆಗಸ್ಟ್ ತಿಂಗಳಿನಲ್ಲಿ ಮಾರುಕಟ್ಟೆಗೆ ತರಲಾಗುತ್ತಿದೆ.

ಸುಬ್ರಹ್ಮಣ್ಯ ನಿವಾಸಿ ಅನೂಪ್ ಅವರು ಕಳೆದ 8 ವರ್ಷಗಳಿಂದ ಕಂಪನಿಯ ಪಾಲುದಾರರಾಗಿದ್ದು, ಇದೀಗ ತನ್ನದೇ ಬ್ರಾಂಡ್ ತಯಾರಿಸಿ ಜೊತೆಗೆ ಸುಮಾರು 12 ಇತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದಾರೆ. ಜಿಲ್ಲೆಯ ಡೀಲರ್ಸ್ ಹಾಗೂ ಆಸಕ್ತರು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :??

ಅನೂಪ್ ಕುಮಾರ್ ಕುಕ್ಕೆ ಸುಬ್ರಹ್ಮಣ್ಯ

ಮೊ :+91 96060 58321

Leave A Reply

Your email address will not be published.