ಎಳೆಯ 7 ರ ಬಾಲಕನ ಮುಂದೆ ಪೂರ್ತಿ ಬೆತ್ತಲೆಯಾಗಿ ನಿಂತು ಕ್ಯಾಮೆರಾಗೆ ಫೋಸ್ !!

Share the Article

ಎಳೆಯ ಬಾಲಕನ ಮುಂದೆ ಪೂರ್ತಿ ಬೆತ್ತಲೆಯಾಗಿ ನಿಂತು ಕ್ಯಾಮೆರಾಗೆ ಪೋಸ್ ನೀಡಿದ ಘಾನಾ ಮೂಲದ ಮಹಿಳೆಗೆ 90 ದಿನಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಆ ಮಹಿಳೆ 7 ವರ್ಷದ ಬಾಲಕನನ್ನು ತನ್ನೆದುರು ನಿಲ್ಲಿಸಿಕೊಂಡು ಆತನ ಕೈ ಹಿಡಿದುಕೊಂಡು ಪೂರ್ತಿಯಾಗಿ ಬೆತ್ತಲಾಗಿದ್ದಳು. ಆಕೆಯ ಮೇಲೆ
“ಕೌಂಟುಂಬಿಕ ಹಿಂಸೆ” ಮತ್ತು “ಅಕ್ಷೇಪಾರ್ಹ ಅಂಶವೆಂದು ನ್ಯಾಯಾಲಯ ಪರಿಗಣಿಸಿ ತನಿಖೆ ನಡೆದು ಇದೀಗ ನ್ಯಾಯಾಲಯವು ಆಕೆಗೆ ಶಿಕ್ಷೆ ವಿಧಿಸಿದೆ.

ಕಳವಳಕಾರಿ ಸಂಗತಿ ಎಂದರೆ ಆ ಸಂತ್ರಸ್ತ ಬಾಲಕ ಬೇರೆ ಯಾರೂ ಅಲ್ಲ, ಆತ ಆ ನಟಿಯ 7 ವರ್ಷ ಪ್ರಾಯದ ಸ್ವಂತ ಮಗ. ಆತನ 7ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ವೇಳೆ ಈ ರೀತಿಯ ಅಶ್ಲೀಲತೆಯನ್ನು ಆಕೆ ಪ್ರಚೋದಿಸಿದ್ದಳು. ಅದು ಅನೇಕರ ಕೆಂಗಣ್ಣಿಗೆ ನಟಿ ಗುರಿಯಾಗಿತ್ತು.

ನಟಿಯ ಹೆಸರು ರೋಸ್‌ಮಂಡ್ ಬ್ರೌನ್, ಈಕೆ ಅಕುವಪೆಮ್ ಪೊಲೋ ಎಂದೇ ಘಾನಾದಲ್ಲಿ ತುಂಬಾ ಪರಿಚಿತ. ಈ ಘಟನೆ 2020ರ ಜೂನ್‌ನಲ್ಲಿ ನಡೆದಿದ್ದು, ಅದನ್ನು ರೋಸ್‌ಮಂಡ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಜಗತ್ತಿನ ಅತ್ಯಂತ ಅನೇಕ ಗಣ್ಯರು ಇದನ್ನು ಕಟುವಾಗಿ ಖಂಡಿಸಿದ್ದರು.

ಇದಾದ ಬಳಿಕ ನಟಿಯ ವಿರುದ್ಧ ಪ್ರಕರಣ ದಾಖಲಾಗಿ, ಅಂದಿನಿಂದ ವಿಚಾರಣೆ ನಡೆಯುತ್ತಲೇ ಇತ್ತು. ಕೊನೆಗೂ ಘಾನಾ ರಾಜಧಾನಿ ಅಕ್ರಾದಲ್ಲಿರುವ ನ್ಯಾಯಾಲಯ ನಟಿ ವರ್ತನೆ “ಕೌಂಟುಂಬಿಕ ಹಿಂಸೆ” ಮತ್ತು “ಅಕ್ಷೇಪಾರ್ಹ ಅಂಶ”ವೆಂದು ಪರಿಗಣಿಸಿ 90 ದಿನಗಳು ಸಾಧಾರಣ ಶಿಕ್ಷೆಯನ್ನು ವಿಧಿಸಿದೆ.

ನ್ಯಾಯಮೂರ್ತಿ ಎಂ.ಎಸ್. ಕ್ರಿಸ್ಟಿಯಾನಾ ಕ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಣೆ ವೇಳೆ, ಘಾನಾದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಅಶ್ಲೀಲ ವಸ್ತುಗಳನ್ನು ಪೋಸ್ಟ್ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದು ನ್ಯಾಯಾಲಯ ಹೇಳಿದೆ.

Leave A Reply

Your email address will not be published.