Noida: ಬೇರೆ ಜಾತಿಯವನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ತಂದೆ ಹಾಗೂ ಅಣ್ಣ ಸೇರಿಕೊಂಡು ಯುವತಿಯ ಕೊಲೆ

Share the Article

Noida: ಬೇರೆ ಜಾತಿಯವನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ತಂದೆ ಹಾಗೂ ಅಣ್ಣ ಸೇರಿಕೊಂಡು ಯುವತಿಯನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

ಯುವತಿಯನ್ನು ಕೊಂದ ನಂತರ, ಇಬ್ಬರೂ ಆಕೆಯ ದೇಹವನ್ನು ಸುಡುವ ಮಾಡುವ ಮೂಲಕ ಸಾಕ್ಷ್ಯವನ್ನು ನಾಶಮಾಡಲು ಪ್ರಯತ್ನಿಸಿದ್ದರು. ಆದ್ರೆ ಇಬ್ಬರನ್ನೂ ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಸಂತ್ರಸ್ತೆ ನೇಹಾ ರಾಥೋಡ್ ಬೇರೆ ಜಾತಿಯ ವ್ಯಕ್ತಿಯೊಂದಿಗೆ ಹೊಂದಿದ್ದ ಪ್ರೇಮ ಸಂಬಂಧದಿಂದ ತಂದೆ-ಮಗ ಇಬ್ಬರೂ ಕೋಪಗೊಂಡಿದ್ದರು.

ಕೊನೆಗೂ ಮನೆಯವರನ್ನು ಧಿಕ್ಕರಿಸಿ ಮಾರ್ಚ್ 11 ರಂದು ಗಾಜಿಯಾಬಾದ್‌ನ ಆರ್ಯ ಸಮಾಜ ಮಂದಿರದಲ್ಲಿ ಯುವತಿ ಸೂರಜ್‌ನನ್ನು ವಿವಾಹವಾಗಿದ್ದಳು. ಅವರ ವಿವಾಹದ ಬಗ್ಗೆ ಮಾಹಿತಿ ಪಡೆದ ನಂತರ, ಆರೋಪಿ ಭಾನು ರಾಥೋಡ್ ಮತ್ತು ಅವರ ಮಗ ಹಿಮಾಂಶು ರಾಥೋಡ್ ಮಾರ್ಚ್ 12 ರ ಬೆಳಗ್ಗೆ ನೇಹಾಳನ್ನು ಕೊಲೆ ಮಾಡಿದ್ದರು.

Comments are closed.