U.P: ರೋಗಿಗಳ ನೋಡವುದನ್ನು ಬಿಟ್ಟು, ಮಂಗನ ಜೊತೆ ಆಟವಾಡುತ್ತಾ, ರೀಲ್ಸ್ ಮಾಡಿದ ಆರು ನರ್ಸ್‌ಗಳ ಅಮಾನತು
U.P: ಸ್ಟಾಫ್ ನರ್ಸ್‌ಗಳು ತಮ್ಮ ಕೆಲಸ ಬಿಟ್ಟು ಮರಿ ಕೋತಿಗಳೊಂದಿಗೆ ರೀಲ್ಸ್ ಮಾಡಿದ್ದು, ಇದನ್ನು ಕಂಡು ಆರು ಸ್ಟಾಫ್ ನರ್ಸ್‌ಗಳನ್ನು ಇದೀಗ ಅಲ್ಲಿನ ಸರಕಾರ ಅಮಾನತು ಮಾಡಲಾಗಿದ್ದು, ತನಿಖಾ ಸಮಿತಿಯನ್ನು ರಚಿಸಲಾಗಿದೆ. ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಬಹ್ರೈಚ್‌ನಲ್ಲಿ. ಮೆಡಿಕಲ್ ಕಾಲೇಜಿನ ಎಂಸಿಎಚ್ ವಿಂಗ್‌ನಲ್ಲಿ ಮರಿ ಕೋತಿಯೊಂದಿಗೆ ಆಟವಾಡುತ್ತಾ ಈ ನರ್ಸ್‌ಗಳು ಸಮಯ ಕಳೆದಿರುವುದು ರೀಲ್ಸ್ ಮೂಲಕ ತಿಳಿದು ಬಂದಿದೆ.
ಮಹಾರಾಜ ಸುಹೇಲ್ದೇವ್ ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜು ಮತ್ತು ಮಹರ್ಷಿ ಬಾಲಾರ್ಕ್ ಆಸ್ಪತ್ರೆಯಲ್ಲಿರುವ ಮಹಿಳಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸ್ಟಾಫ್ ನರ್ಸ್ ಮರಿ ಕೋತಿಯೊಂದಿಗೆ ರೀಲ್ ಮಾಡುತ್ತಿದ್ದರು. ವೀಡಿಯೊದಲ್ಲಿ, ಮರಿ ಕೋತಿಯು ಸ್ಟಾಫ್ ನರ್ಸ್‌ಗಳ ಮಡಿಲಲ್ಲಿ ಬಟ್ಟೆಗಳನ್ನು ಧರಿಸಿ ಕೆಲವೊಮ್ಮೆ ಮೇಜಿನ ಮೇಲೆ ಇರಿಸಲಾದ ಆಸ್ಪತ್ರೆಯ ಪ್ರಮುಖ ದಾಖಲೆಗಳ ಮೇಲೆ ಆಟವಾಡುತ್ತಿರುವುದನ್ನು ಕಾಣಬಹುದು.
ಈ ವಿಡಿಯೋ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಟಾಫ್ ನರ್ಸ್‌ಗಳಾದ ಅಂಜಲಿ, ಕಿರಣ್ ಸಿಂಗ್, ಆಂಚಲ್ ಶುಕ್ಲಾ, ಪ್ರಿಯಾ, ಪೂನಂ ಪಾಂಡೆ ಮತ್ತು ಸಂಧ್ಯಾ ಸಿಂಗ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಮತ್ತು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.
Six nurses suspended in UP's Bahraich for playing with monkey while on duty. pic.twitter.com/2Q1irJdBgM
— Raajeev Chopra (@Raajeev_Chopra) July 9, 2024
ventolin prescription uk: Buy Ventolin inhaler online – can i buy ventolin over the counter in australia
ventolin 108
lasix side effects: buy furosemide – lasix generic