Remedy for lizard-cockroach: ಈ ಸಿಂಪಲ್ ಟ್ರಿಕ್ಸ್ ಬಳಸಿದರೆ ಹಲ್ಲಿ, ಜಿರಲೆಗಳು ಮನೆಯ ಕಾಂಪೌಂಡ್ ಒಳಗೂ ಬರುವುದಿಲ್ಲ !!

Remedy for lizard-cockroach: ಮನೆಗೆ ಕರೆಯದೇ ಬರುವ ಅತಿಧಿಗಳು ಎಂದರೆ, ಜೆರಳೆಗಳು, ಸೊಳ್ಳೆಗಳು, ಸಣ್ಣ-ಪುಟ್ಟ ಕೀಟಗಳು, ಇರುವೆಗಳು, ಮನೆಯ ಹಂಚಿನಲ್ಲಿ ಅಥವಾ ಕಿಟಕಿ-ಬಾಗಿಲುಗಳ ಮೂಲೆಗಳಲ್ಲಿ ಬಲೆ ಕಟ್ಟಿರುವ ಜೇಡಗಳು, ಗೋಡೆಗಳಲ್ಲಿ ಸರ್ಕಸ್ ಮಾಡುತ್ತಿರುವ ಹಲ್ಲಿಗಳು. ಉಳಿದವು ಬಿಡಿ ಹೇಗೋ ಬಂದು ಹೋಗುತ್ತವೆ, ಇಲ್ಲ ನಾವೇನಾದರೂ ಮದ್ದು ಮಾಡಿದರೆ ಬರುವುದೂ ಇಲ್ಲ. ಆದರೆ ಈ ಹಲ್ಲಿ ಮತ್ತು ಜಿರಲೆಗಳು ಉಂಟಲ್ಲಾ? ಪರ್ಮನೆಂಟ್ ಗೆಸ್ಟ್ ಆಗಿಬಿಡುತ್ತವೆ. ಹೀಗಾಗಿ ಅನೇಕರು ಈ ಹಲ್ಲಿ, ಜಿರಲೆ ಕಾಟದಿಂದ ರೋಸಿ ಹೋಗಿದ್ದಾರೆ. ಹಾಗಿದ್ರೆ ಇನ್ನು ಆ ಚಿಂತೆ ಬಿಡಿ, ಈ ಸಿಂಪಲ್ ಟ್ರಿಕ್ಸ್ ಬಳಸಿ ಇವುಗಳ ಕಾಟದಿಂದ(Remedy for lizard-cockroach) ಮುಕ್ತಿ ಪಡೆಯಿರಿ.

 

ಹಲ್ಲಿ, ಜಿರಲೆಯ ಕಾಟ ತಪ್ಪಿಸೋ ವಿಧಾನ:
ಒಂದು ಮುಷ್ಟಿ ಕಹಿ ಬೇವಿನ ಸೊಪ್ಪನ್ನು ತೆಗೆದುಕೊಳ್ಳಿ, ಒಂಓಉ ಮುಷ್ಟಿ ಕರ್ಪೂರವನ್ನು ತೆಗೆದುಕೊಳ್ಳಿ. ಅದನ್ನು ಜಜ್ಜಿ ನೀಲಗಿರಿ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಬಳಿಕ ಅದನ್ನು ಸಣ್ಣ ಸಣ್ಣ ಗುಳಿಗೆ ಮಾಡಿ ಹಲ್ಲಿ, ಜಿರಲೆಗಳು ಓಡಾಡೋ ಜಾಗದಲ್ಲಿಡಿ. ಅದರ ವಾಸನೆಗೆ ಯಾವ ಹಲ್ಲಿ, ಜಿರಲೆಗಳೂ ನಿಮ್ಮ ಮನೆಯ ಹತ್ತಿರ ಸುಳಿಯೋದೆ ಇಲ್ಲ !!

Leave A Reply

Your email address will not be published.