Home Interesting Haveri: ಹಿಂದೂ ಯುವತಿಯ ಕಿಡ್ನಾಪ್ ಮಾಡಿದ ಮುಸ್ಲಿಂ ಯುವಕ – ಕಾಲೇಜಿಗೆ ಹೋಗಿದ್ದ ಯುವತಿಯನ್ನು ಈ...

Haveri: ಹಿಂದೂ ಯುವತಿಯ ಕಿಡ್ನಾಪ್ ಮಾಡಿದ ಮುಸ್ಲಿಂ ಯುವಕ – ಕಾಲೇಜಿಗೆ ಹೋಗಿದ್ದ ಯುವತಿಯನ್ನು ಈ ಪಾಪಿ ಕರೆದೊಯ್ದದ್ದೆಲ್ಲಿಗೆ?

Haveri

Hindu neighbor gifts plot of land

Hindu neighbour gifts land to Muslim journalist

Haveri: ಕೆಲವು ದಿನಗಳ ಹಿಂದಷ್ಟೇ ಹಾವೇರಿಯ ಹಾನಗಲ್ ನಲ್ಲಿ 7 ಮಂದಿ ಮುಸ್ಲಿಂ ಯುವಕರು ಸೇರಿ ವಿವಾಹಿತ ಮುಸ್ಲಿಂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬೆದರಿಕೆ ಒಡ್ಡಿದ್ದ ಘಟನೆ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಇದೀಗ ಈ ಬೆನ್ನಲ್ಲೇ ಹಾವೇರಿ(Haveri) ಯಲ್ಲಿ ಮತ್ತೊಂದು ಅಹಿತಕರ ಗಟನೆ ನಡೆದೆದ್ದು, ಕಾಲೇಜಿಗೆ ಹೋಗಿದ್ದ ಹಿಂದೂ ಯುವತಿಯನ್ನು ಮುಸ್ಲಿಂ ಯುವಕನೊಬ್ಬ ಕಿಡ್ನಾಪ್ ಮಾಡಿದ್ದಾನೆ.

ಹೌದು, ಹಾನಗಲ್(Hanagal) ಶಹರದ ಹಂಚಿ ಓಣಿಯಯಲ್ಲಿ ಈ ಘಟನೆ ನಡೆದಿದ್ದು, ಹುಡುಗಿಯು ಮಲ್ಲಿಗಾರ್ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ‌ನಲ್ಲಿ ಮೂರನೇ ವರ್ಷದ ಬಿಕಾಂ ಓದುತ್ತಿದ್ದಳು. ಎಂದಿನಂತೆ ತನ್ನ ಮಗಳು ಕಾಲೇಜಿಗೆ ಹೋಗುವಾಗ ಅಪ್ತಾಬ್ ಎಂಬ ಯುವಕ ಕಿಡ್ನಾಪ್ ಮಾಡಿದ್ದಾನೆ ಎಂದು ಯುವತಿಯ ತಂದೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Haveri: ಹಿಂದೂ ಯುವತಿಯ ಕಿಡ್ನಾಪ್ ಮಾಡಿದ ಮುಸ್ಲಿಂ ಯುವಕ – ಕಾಲೇಜಿಗೆ ಹೋಗಿದ್ದ ಯುವತಿಯನ್ನು ಈ ಪಾಪಿ ಕರೆದೊಯ್ದದ್ದೆಲ್ಲಿಗೆ?

ಎಂದಿನಂತೆ ಕಾಲೇಜಿಗೆ ಹೋಗಿರುವ ಮಗಳು ಮನೆಗೆ ಬಂದಿರುವುದಿಲ್ಲ. ಹೀಗಾಗಿ ಅಪಹರಣಕ್ಕೊಳಗಾಗಿರುವ ಮಗಳನ್ನು ಸುರಕ್ಷಿತವಾಗಿ ಕರೆತರುವಂತೆ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಯುವತಿಯ ಕುಟುಂಬಸ್ಥರು ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.