Job Alert: ಕರ್ನಾಟಕ ಯೂನಿವರ್ಸಿಟಿಯಲ್ಲಿ SSLC ಪಾಸಾದವರಿಗೆ ಉದ್ಯೋಗ; 52 ಸಾವಿರ ವೇತನ!

job news kud recruitment 2023 apply for 3 various post in dharwad

KUD Recruitment 2023: ಕರ್ನಾಟಕ ಯುನಿವರ್ಸಿಟಿ ಧಾರವಾಡ (Karnataka University Dharwad) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಿ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26/10/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 28, 2023

ಹುದ್ದೆಗಳ ವಿವರ: ಪ್ರೂಫ್‌ ರೀಡರ್‌ -1
ಕಾರ್ಪೆಂಟರ್‌ ಮತ್ತು ಪೈಂಟರ್‌ – 1
ಎಲೆಕ್ಟ್ರಿಷಿಯನ್‌ – 1

ವಿದ್ಯಾರ್ಹತೆ: ಪ್ರೂಫ್ ರೀಡರ್- 10ನೇ ತರಗತಿ, ಪದವಿ
ಕಾರ್ಪೆಂಟರ್ & ಪೈಂಟರ್- 7ನೇ ತರಗತಿ
ಎಲೆಕ್ಟ್ರಿಷಿಯನ್- 10ನೇ ತರಗತಿ

ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ: ಅಭ್ಯರ್ಥಿಗಳು 700 ರೂ. ಅರ್ಜಿ ಶುಲ್ಕ ಪಾವತಿ ಮಾಡಬೇಕು. ಡಿಡಿ ಮೂಲಕ ಪಾವತಿಸಲು ಅವಕಾಶ ನೀಡಲಾಗಿದೆ.

ಮಾಸಿಕ ವೇತನ: ಪ್ರೂಫ್‌ ರೀಡರ್‌ ಹುದ್ದೆಗೆ ನೀವು ಆಯ್ಕೆಯಾದರೆ ನಿಮಗೆ ಮಾಸಿಕ ರೂ.27,650-52,650
ಕಾರ್ಪೆಂಟರ್‌ ಮತ್ತು ಪೈಂಟರ್‌- ರೂ.21,400-42,000
ಎಲೆಕ್ಟ್ರಿಷಿಯನ್- ಮಾಸಿಕ ರೂ.23,500-47,650

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಮೆರಿಟ್‌ಲಿಸ್ಟ್‌, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಧಾರವಾಡ ಹುದ್ದೆ ಸ್ಥಳ ಎಂದು ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 28ರೊಳಗೆ ಕಳುಹಿಸಬೇಕು.

ಕುಲಪತಿಗಳು
ಕರ್ನಾಟಕ ವಿಶ್ವವಿದ್ಯಾಲಯ
ಪಾವಟೆ ನಗರ
ಧಾರವಾಡ-580003

ಹೆಚ್ಚಿನ ಮಾಹಿತಿಗಾಗಿ kud.ac.in ಗೆ ಭೇಟಿ ನೀಡಿ.

 

ಇದನ್ನು ಓದಿ: Pregnancy Tips: ಗರ್ಭಿಣಿಯರೇ ಹೃದಯಾಘಾತದಿಂದ ಪಾರಾಗಲು ಇರಲಿ ಈ ಎಚ್ಚರಗಳು !!

ಇದನ್ನು ಓದಿ: BJP Satate president: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುರುಬ ಸಮುದಾಯದ ಈ ನಾಯಕನ ಹೆಸರು ಫಿಕ್ಸ್ ?!

Leave A Reply

Your email address will not be published.