Scientist N Valarmathi passed away: ಚಂದ್ರಯಾನ -3 ಉಡಾವಣೆ ಸಮಯದಲ್ಲಿ ಕೌಂಟ್‌’ಡೌನ್‌’ಗೆ ಧ್ವನಿ ನೀಡಿದ್ದ ಇಸ್ರೋ ವಿಜ್ಞಾನಿ ನಿಧನ!

chandrayaan-3 isro Scientist N Valarmathi passed away

Scientist Valarmathi passed away: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ವಲರ್ಮತಿ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ(Scientist Valarmathi passed away). ಇವರು ಶ್ರೀಹರಿಕೋಟಾದಲ್ಲಿ ರಾಕೆಟ್‌ ಉಡಾವಣೆ ಸಂದರ್ಭದಲ್ಲಿ ಧ್ವನಿ ನೀಡಿದ್ದರು. ಚಂದ್ರಯಾನ-3 ಜುಲೈ 14 ರಂದು ಶ್ರೀಹರಿ ಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಚಂದ್ರಯಾನ-3 ಉಡಾವಣೆಯಲ್ಲಿ ವಿಜ್ಞಾನಿ ವಲಮತ್ತಿ ಅವರು ಧ್ವನಿ ನೀಡಿದ್ದರು.

ತಮ್ಮ ಗಂಭೀರ ಧ್ವನಿಯಿಂದ ಉದ್ಯೋಗ ನಿರ್ವಹಿಸಿದ್ದ ವಲರ್ಮತಿ ಅವರು ರಾತ್ರಿ ಚೆನ್ನೈನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜುಲೈ 14ರಂದು ಚಂದ್ರಯಾನ -3 ಯಶಸ್ವಿ ಉಡಾವಣೆಗೆ ನೀಡಿದ ಧ್ವನಿ ಅವರ ಕೊನೆಯ ಧ್ವನಿಯಾಗಿತ್ತು.

ಇದನ್ನೂ ಓದಿ: ಮಂಗಳೂರು: ಸಮುದ್ರ ವಿಹಾರಕ್ಕೆ ಬಂದ ವೈದ್ಯರ ತಂಡ, ಓರ್ವ ನೀರು ಪಾಲು

Leave A Reply

Your email address will not be published.