Home Breaking Entertainment News Kannada Actress Nagma : ‘ಕುರುಬನ ರಾಣಿ’ ನಗ್ಮಾ ಮದುವೆಯಾಗದಿರುವುದಕ್ಕೆ ಕಾರಣವೇನು? ನಟಿ ನೀಡಿದ ಉತ್ತರಕ್ಕೆ ನೆಟ್ಟಿಗರೇನಂದ್ರು?

Actress Nagma : ‘ಕುರುಬನ ರಾಣಿ’ ನಗ್ಮಾ ಮದುವೆಯಾಗದಿರುವುದಕ್ಕೆ ಕಾರಣವೇನು? ನಟಿ ನೀಡಿದ ಉತ್ತರಕ್ಕೆ ನೆಟ್ಟಿಗರೇನಂದ್ರು?

Actress Nagama
Image source: Kannada news today

Hindu neighbor gifts plot of land

Hindu neighbour gifts land to Muslim journalist

Actress Nagma: ಸ್ಯಾಂಡಲ್​ವುಡ್​ (Sandalwood) ಸೇರಿದಂತೆ ಅನೇಕ ಭಾಷೆಗಳಲ್ಲಿ ಒಂದು ಕಾಲದ ಸೂಪರ್ ಸ್ಟಾರ್ (Super star) ಆಗಿ ಮೆರೆದಿದ್ದ ನಟಿ ನಗ್ಮಾ ಇನ್ನೂ ಮದುವೆಯಾಗಿಲ್ಲ. ಕುರುಬನ ರಾಣಿ ನಗ್ಮಾ (Actress Nagma) ಮದುವೆ ಆಗದಿರುವುದಕ್ಕೆ ಕಾರಣವೇನು? ಈ ಬಗ್ಗೆ ನಟಿ ಉತ್ತರ ನೀಡಿದ್ದು, ನಟಿ ನೀಡಿದ ಉತ್ತರಕ್ಕೆ ನೆಟ್ಟಿಗರೇನಂದ್ರು ಗೊತ್ತಾ??

1991ರಲ್ಲಿ ತೆರೆಗೆ ಬಂದ ಸಲ್ಮಾನ್ ಖಾನ್ (Salman Khan) ಅವರ ಬಾಗಿ (bhagi) ಸಿನಿಮಾದ ಮೂಲಕ ನಗ್ಮಾ ಬಣ್ಣದ ಲೋಕಕ್ಕೆ ಡೆಬ್ಯೂ ಮಾಡಿದರು. ಇದಾದ ಬಳಿಕ ನಗ್ಮಾ ಅವರಿಗೆ ದಕ್ಷಿಣದಲ್ಲಿ ಸಾಕಷ್ಟು ಸಿನಿಮಾಗಳ ಅವಕಾಶ ದೊರಕುತ್ತದೆ. ಬಾಲಿವುಡ್ (Bollywood) ಹಾಗೂ ದಕ್ಷಿಣ ಕನ್ನಡ ಸಿನಿಮಾ ರಂಗದಲ್ಲಿ (Kannada Cinema Industry) ತಮ್ಮ ನಟನೆಯ ಮೂಲಕ ಸಾಕಷ್ಟು ಸದ್ದು ಮಾಡಿದರು.

ರವಿಮಾಮ ಹಾಗೂ ಹೃದಯವಂತ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಯವಾಗಿರುವ ನಟಿ ನಗ್ಮಾ, 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ತಮಿಳು, ತೆಲುಗು, ಹಿಂದಿ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದರು. ಆದರೆ,
48 ವರ್ಷ ವಯಸ್ಸಾದರೂ ನಗ್ಮಾ ಇನ್ನೂ ಮದುವೆಯಾಗದೆ (Marriage) ಉಳಿದಿರುವುದು ಅದೆಷ್ಟೋ ಅಭಿಮಾನಿಗಳ ಮನಸ್ಸಿನಲ್ಲಿ ಕಾಡುತ್ತಿರುವಂತಹ ಪ್ರಶ್ನೆ ಇದೀಗ ಈ ಪ್ರಶ್ನೆಗೆ ನಗ್ಮಾ ಉತ್ತರಿಸಿದ್ದಾರೆ.

ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ನಟಿ ನಗ್ಮಾ ತಮ್ಮ ಮದುವೆ ಕುರಿತು ಮಾತನಾಡಿದ್ದಾರೆ. ವಯಸ್ಸು 48 ಆದ್ರೂ ಇನ್ನೂ ಏಕೆ ಮದುವೆ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ನಗ್ಮಾ, ನಾನು ಮದುವೆ ಆಗುವುದಿಲ್ಲ ಎಂದು ಯೋಚಿಸಲೇ ಇಲ್ಲ. ತನಗೂ ಸಂಗಾತಿ ಮತ್ತು ಮಕ್ಕಳಾಗುವ ಭರವಸೆ ಈಗಲೂ ಇದೆ. ಮದುವೆಯ ಮೂಲಕ ಸಂಸಾರ ಆರಂಭಿಸುವ ಯೋಚನೆ ಇದೆ. ಸಮಯ ಸಿಕ್ಕರೆ ತನ್ನ ಮದುವೆ ಆಗಬಹುದಾ ಎಂದು ನೋಡುತ್ತೇನೆ. ಮದುವೆಯಾದರೆ ನನಗೂ ತುಂಬಾ ಖುಷಿಯಾಗುತ್ತದೆ ಎಂದು ನಗ್ಮಾ ಹೇಳಿದ್ದಾರೆ.

ಇದನ್ನೂ ಓದಿ: Women vomits in bus: ವಾಂತಿ ಮಾಡಲೆಂದು ಬಸ್ಸಿನ ಹೊರಗೆ ತಲೆ ಹಾಕಿದ ಮಹಿಳೆ! ನಂತರ ನಡೆದದ್ದೇ ಊಹಿಸದ ಅಪಘಾತ!!!