Home latest Dakshina Kannada Election : ವಿಧಾನಸಭೆ ಚುನಾವಣೆ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್ :...

Dakshina Kannada Election : ವಿಧಾನಸಭೆ ಚುನಾವಣೆ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್ : ದಕ್ಷಿಣಕನ್ನಡದಲ್ಲಿ ಇವರಿಗೆ ಟಿಕೇಟ್

Hindu neighbor gifts plot of land

Hindu neighbour gifts land to Muslim journalist

Dakshina Kannada Election : ಕರ್ನಾಟಕ ವಿಧಾನಸಭೆ ಚುನಾವಣೆಗೆ (karnataka assembly election) ಕಾಂಗ್ರೆಸ್‌ (congress) ಪಕ್ಷದ ಮೊದಲ ಪಟ್ಟಿ ರಿಲೀಸ್‌ ಆಗಿದೆ. ಮೊದಲ ಪಟ್ಟಿಯಲ್ಲಿ 124 ಸ್ಥಾನಗಳಿಗೆ ಟಿಕೆಟ್‌ ಘೋಷಿಸಲಾಗಿದೆ.

ಸುಳ್ಯ ಕ್ಷೇತ್ರಕ್ಕೆ ಕೆ.ಪಿ.ಸಿ.ಸಿ ಸಂಯೋಜಕ ಜಿ.ಕೃಷ್ಣಪ್ಪ ಅವರಿಗೆ,ಮೂಡಬಿದಿರೆಗೆ ಮಿಥುನ್ ರೈ,ಬೆಳ್ತಂಗಡಿಗೆ ರಕ್ಷಿತ್ ಶಿವರಾಂ ,ಮಂಗಳೂರು ಕ್ಷೇತ್ರಕ್ಕೆ ಯು.ಟಿ.ಖಾದರ್ ,ಬಂಟ್ವಾಳದಲ್ಲಿ ರಮಾನಾಥ ರೈ ಅವರಿಗೆ (Dakshina Kannada Election) ಟಿಕೇಟ್ ನೀಡಲಾಗಿದೆ.

ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ವರುಣಾ ಕ್ಷೇತ್ರದಿಂದ , ನಂಜನಗೂಡು ಕ್ಷೇತ್ರಕ್ಕೆ ಧ್ರುವನಾರಾಯಣ್‌ ಅವರ ಪುತ್ರ ದರ್ಶನ್‌ ,ಕನಕಪುರ ಕ್ಷೇತ್ರದಿಂದ ಡಿ.ಕೆ.ಶಿವ ಕುಮಾರ್, ದೇವನಹಳ್ಳಿ ಕ್ಷೇತ್ರದಿಂದ ಹೆಚ್.ಸಿ.ಮಹದೇವಪ್ಪ ಅವರಿಗೆ ಟಿಕೇಟ್ ನೀಡಲಾಗಿದೆ.

ಗಾಂಧಿನಗರದಿಂದ ದಿನೇಶ್‌ ಗುಂಡೂರಾವ್‌, ಬಿಟಿಎಂ ಲೇಔಟ್‌ ನಿಂದ ರಾಮಲಿಂಗ ರೆಡ್ಡಿ, ರಾಮನಗರ ಕ್ಷೇತ್ರದಿಂದ ಇಕ್ಬಾಲ್‌ ,ಕಾಪು ಕ್ಷೇತ್ರಕ್ಕೆ ವಿನಯ್‌ ಕುಮಾರ್‌ ಸೊರಕೆ,ಕುಂದಾಪುರ ಕ್ಷೇತ್ರಕ್ಕೆ ಎಂ.ದಿನೇಶ್‌ ಹೆಗ್ಡೆ,ಬೈಂದೂರು ಕ್ಷೇತ್ರದಿಂದ ಗೋಪಾಲ್‌ ಪೂಜಾರಿ ಅವರಿಗೆ ಟಿಕೆಟ್‌ ನೀಡಲಾಗಿದೆ.