Snake Viral Video : ಅಬ್ಬಾ, ಹಾವನ್ನೇ ಶೂವಾಗಿಸಿದವ ಈತ ; ಈತನ ನಡೆದಾಟ ನೋಡಿದರೆ ಭಯವಾಗೋದಂತೂ ಖಂಡಿತ!
Snake Viral Video : ಇಂದಿನ ದಿನದ ಫ್ಯಾಶನ್ ಎಲ್ಲಿವರೆಗೂ ತಲುಪಿದೆ ಎಂದರೆ ಊಹಿಸಲು ಅಸಾಧ್ಯ ಎನಿಸುವಷ್ಟು ದೂರ ಸಾಗಿದೆ. ವಸ್ತ್ರ ವಿನ್ಯಾಸ ನೋಡಿದ್ರೆ, ಏನಿದು? ಹೀಗೂ ಇದೆಯಾ? ಅಂತ ಅನಿಸುತ್ತದೆ. ಕೆಲವರ ಫ್ಯಾಷನ್ ನೆಪದ ಬಟ್ಟೆಗಳು ಸಸ್ಯ, ತಿಂಡಿ-ತಿನಿಸು ಹೀಗೆ ಸಿಕ್ಕ ಸಿಕ್ಕ ವಸ್ತುಗಳಿಂದ ತುಂಬಿ ತುಳುಕಿರುತ್ತದೆ. ಇಲ್ಲಿಯವರೆಗೆ ಬಟ್ಟೆಗಳಲ್ಲಿ ವಿವಿಧ ವಿನ್ಯಾಸ ಇತ್ತು. ಇದೀಗ ಇಲ್ಲೊಬ್ಬ ಕಾಲಿಗೆ ವಿಭಿನ್ನ ವಿನ್ಯಾಸದ ಶೂ ಹಾಕಿದ್ದಾನೆ. ಯಪ್ಪಾ!! ಎಂತಾ ಶೂ ಅಂತೀರಾ? ಒಮ್ಮೆಲೆ ನೋಡಿದವನಿಗೆ ಹೃದಯಾಘಾತವೇ ಆಗಬಹುದೇನೋ ಅಂತಹ ಶೂ ಇದು. ಈ ಶೂ ಯಾವುದರಿಂದ ವಿನ್ಯಾಸ ಆಗಿದೆ ಗೊತ್ತಾ? ಹಾವಿನಿಂದ, ಸದ್ಯ ಇದರ ವಿಡಿಯೋ ವೈರಲ್ (Viral Video) ಆಗಿದ್ದು, ನೀವು ಇದನ್ನ ನೋಡಿದ್ರೆ ಏನಂತಿರೋ ನೀವೇ ನೋಡಿ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಾಲಿಗೆ ಹಾವಿನ ಚಿತ್ರದಿಂದ ಕೂಡಿದ ಶೂ ಧರಿಸಿದ್ದಾನೆ. ಈ ವಿಡಿಯೋ ಅಂತೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಶೂ ತಲೆ ಎತ್ತಿ ನಿಂತಿರುವ ನಾಗರಹಾವಿನ ವಿನ್ಯಾಸದಲ್ಲಿದೆ (Snake Viral Video). ಅದನ್ನು ಕಾಲಿಗೆ ಹಾಕಿಕೊಂಡು ವ್ಯಕ್ತಿಯೊಬ್ಬ ನಡೆದಾಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಅಸಲಿ ಹಾವೇನೋ ಅನಿಸುವಂತಿದೆ. ನೋಡುತ್ತಿದ್ದ ಹಾಗೆ ಎದೆ ಝಲ್!! ಅನ್ನುತ್ತೆ. ರಾತ್ರಿ ವೇಳೆ ಏನಾದರೂ ಈ ಶೂ ಧರಿಸಿ ಹೊರಗೆ ಹೊರಟರೆ ಶೂ ನೋಡಿದವನಿಗೆ ಅಥವಾ ಶೂ ಧರಿಸಿದವನಿಗೆ ಆಪತ್ತು ಖಂಡಿತ!! ಯಾಕೆ ಅಂತೀರಾ? ಒಮ್ಮೆಲೆ ಶೂ ನೋಡಿದರೆ ನಿಜವಾದ ಹಾವಿನಂತಿದೆ. ಹಾಗಾಗಿ ಬೆಚ್ಚಿಬೀಳುವುದು ಸಹಜ.
ಸದ್ಯ ಈ ವಿಡಿಯೋ ಉದ್ಯಮಿ ಹರ್ಷ್ ಗೋಯೆಂಕಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸಾಕಷ್ಟು ಜನರು ಈ ವಿಡಿಯೋ ವೀಕ್ಷಿಸಿದ್ದು, ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Caption please… pic.twitter.com/awY56iewQv
— Harsh Goenka (@hvgoenka) February 19, 2023