ಹಳೆ ವಾಹನ ಮಾರಾಟ ಮತ್ತು ಖರೀದಿ ನಿಯಮ ಬದಲಾವಣೆ – ಕೇಂದ್ರದಿಂದ ಹೊಸ ರೂಲ್ಸ್

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಳೆಯ ವಾಹನಗಳ ಮಾರಾಟ ಮತ್ತು ಖರೀದಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ಈ ಹೊಸ ನಿಯಮಾವಳಿಯಿಂದ ಹಳೆಯ ವಾಹನಗಳನ್ನು ವಾಹನಗಳನ್ನು ಮಾರಾಟ ಮಾಡುವ ಕಾರು ವಿತರಕರು ಮತ್ತು ಕಂಪೆನಿಗಳನ್ನು ಜವಾಬ್ದಾರರನ್ನಾಗಿ ಮಾಡಿದೆ. ಪೂರ್ವ- ಮಾಲೀಕತ್ವದ ಕಾರು ಮಾರುಕಟ್ಟೆಯಲ್ಲಿ ಪಾರದರ್ಶಕತೆಯನ್ನು ತರಲು ಮತ್ತು ಸಾಮಾನ್ಯ ಜನರನ್ನು ವಂಚನೆಯಿಂದ ರಕ್ಷಿಸಲು ಹೊಸ ನಿಯಮಗಳನ್ನು ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರೂಪಿಸಿದ್ದು, ಸಧ್ಯ ಜಾರಿಗೆ ತಂದಿದೆ.

ಹೊಸ ಆದೇಶದಂತೆ ಆರ್ಟಿಒದಲ್ಲಿ ನೋಂದಾಯಿಸಿದ ವಿತರಕರಿಗೆ ಮಾತ್ರ ಕಾರುಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಅಧಿಕಾರ ನೀಡಿದೆ. ವರ್ಗಾವಣೆ ನಿರ್ಬಂಧಗಳು, ಮೂರನೇ ವ್ಯಕ್ತಿಯ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ವಿವಾದಗಳು, ಸುಸ್ತಿದಾರರನ್ನ ನಿರ್ಧರಿಸುವಲ್ಲಿನ ತೊಂದರೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಈಗ ಕೇಂದ್ರ ಮೋಟಾರು ವಾಹನ ನಿಯಮಗಳು, 1989ರ ಅಧ್ಯಾಯ IIIಕ್ಕೆ ತಿದ್ದುಪಡಿ ಮಾಡಿ ಪೂರ್ವ-ಮಾಲೀಕತ್ವದ ಕಾರು ಮಾರುಕಟ್ಟೆಗೆ ನಿಯಂತ್ರಕ ಪರಿಸರ ವ್ಯವಸ್ಥೆಯನ್ನ ರಚಿಸಿದೆ.

ಸಾರಿಗೆ ತಜ್ಞ ಗುರ್ಮತಿತ್ ಸಿಂಗ್ ತನೇಜಾ ಹೇಳುವಂತೆ, ಕಂಪನಿಗಳು ಅಥವಾ ಕಾರು ವಿತರಕರು ವಾಹನಗಳನ್ನು ಮಾರಾಟ ಮಾಡುವಾಗ ವಾಹನ ವರ್ಗಾವಣೆಗಾಗಿ ಖಾಲಿ ನಮೂನೆಗೆ ಸಹಿ ಮಾಡುತ್ತಾರೆ. ಇದರ ನಂತರ, ಈ ಕಾರನ್ನು ಯಾರಿಗೆ ಮಾರಾಟ ಮಾಡಲಾಗುತ್ತದೆ ಮತ್ತು ಯಾರು ಬಳಸುತ್ತಾರೆ ಅನ್ನೋದು ವಾಹನ ಮಾಲೀಕರಿಗೆ ತಿಳಿದಿರೋದಿಲ್ಲ. ಆದರೆ ಹೊಸ ನಿಯಮದ ಪ್ರಕಾರ, ವಾಹನವನ್ನು ಮಾರಾಟ ಮಾಡಿದ ನಂತರ ಡೀಲರ್ ಅಥವಾ ಕಂಪನಿಯು ವಾಹನವನ್ನು ಅದರ ಹೆಸರಿನಲ್ಲಿ ಆನ್ ಲೈನ್’ನಲ್ಲಿ ತೆಗೆದುಕೊಳ್ಳುತ್ತದೆ. ಅಂದರೆ, ಈಗ ವಾಹನವನ್ನು ಮಾರಾಟ ಮಾಡಿದ ತಕ್ಷಣ ಮಾಲೀಕರಿಗೆ ಯಾವುದೇ ಜವಾಬ್ದಾರಿ ಇರುವುದಿಲ್ಲ.

ನಿಯಮಗಳ ಪ್ರಮುಖ ನಿಬಂಧನೆಗಳ ಬಗ್ಗೆ ತಿಳಿಯುವುದಾದರೆ
● ನೋಂದಾಯಿತ ವಾಹನಗಳ ವಿತರಕರಿಗೆ ಡೀಲರ್’ಗಳ ನೈಜತೆಯನ್ನು ಗುರುತಿಸಲು ದೃಢೀಕರಣವನ್ನು ಜಾರಿಗೆ ತರಲಾಗಿದೆ.
●ನೋಂದಾಯಿತ ವಾಹನ ಮಾಲೀಕರು ಮತ್ತು ವಿತರಕರ ನಡುವಿನ ವಾಹನ ಪೂರೈಕೆಯ ಮಾಹಿತಿಯ ಕಾರ್ಯವಿಧಾನವನ್ನು ಬಹಿರಂಗಪಡಿಸಲಾಗಿದೆ.
●ನೋಂದಾಯಿತ ವಾಹನದ ಸ್ವಾಧೀನಕ್ಕೆ ಸಂಬಂಧಿಸಿದಂತೆ ಡೀಲರ್’ಗಳ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ಸಹ ಸ್ಪಷ್ಟಪಡಿಸಲಾಗಿದೆ.
●ಡೀಲರ್’ಗಳು ತಮ್ಮ ಬಳಿ ಇರುವ ವಾಹನಗಳ ನೋಂದಣಿ ಪ್ರಮಾಣಪತ್ರ / ವಾಹನ ಫಿಟೈಸ್ ಪ್ರಮಾಣಪತ್ರ ನವೀಕರಣ, ನೋಂದಣಿ ಪ್ರಮಾಣಪತ್ರದ ನಿಜವಾದ ಪ್ರತಿ, ಎನ್ ಒಸಿ, ಮಾಲೀಕತ್ವದ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅಧಿಕಾರವನ್ನು ನೀಡಲಾಗಿದೆ.
●ನಿಯಂತ್ರಕ ಕ್ರಮವಾಗಿ, ಎಲೆಕ್ಟ್ರಾನಿಕ್ ವಾಹನದ ನಿರ್ವಹಣೆಗೆ ಸಂಬಂಧಿಸಿದ ಟ್ರಿಪ್ ರಿಜಿಸ್ಟರ್ ಅನ್ನು ನಿರ್ವಹಿಸುವುದನ್ನು ಕಡ್ಡಾಯಗೊಳಿಸಲಾಗಿದ್ದೂ, ವಾಹನದ ಬಳಕೆಯ ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ. ಇದರಲ್ಲಿ, ಗಮ್ಯಸ್ಥಾನ, ಹೋಗಲು ಕಾರಣ, ಚಾಲಕ, ಮೈಲೇಜ್, ಸಮಯ ಇತ್ಯಾದಿಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಬೇಕಾಗುತ್ತದೆ.

ನೋಂದಾಯಿತ ವಾಹನಗಳ ಡೀಲರ್ ಗಳು/ ಮಧ್ಯವರ್ತಿಗಳನ್ನು ಗುರುತಿಸಲು ಮತ್ತು ಸಬಲೀಕರಣಗೊಳಿಸಲು ಈ ನಿಯಮಗಳು ಸಹಾಯಕವಾಗುತ್ತವೆ. ಅಲ್ಲದೇ, ಮುಖ್ಯವಾಗಿ ಈ ವಾಹನಗಳ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಜನ ಸಾಮಾನ್ಯರನ್ನು ವಂಚನೆಯಿಂದ ತಪ್ಪಿಸಲಾಗುವುದು.

Leave A Reply

Your email address will not be published.