ವಿವಾಹಿತ ಮಹಿಳೆ- ಅವಿವಾಹಿತನ ಅಕ್ರಮ ಸಂಬಂಧ | ಗೆಳತಿಯ ಕಾಟಕ್ಕೆ ಬೇಸತ್ತ ಯುವಕ, ಮಾಡೇ ಬಿಟ್ಟ ಮಾರಣಹೋಮ!

ಮದುವೆಯಾಗಿ ಸುಂದರ ದಾಂಪತ್ಯ ಜೀವನ ನಡೆಸುವ ಬದಲಿಗೆ ಅಕ್ರಮ ಸಂಬಂಧ ಇಟ್ಟುಕೊಂಡು, ಈ ಸಂಬಂಧವೇ ತನ್ನ ಜೀವಕ್ಕೆ ಮುಳವಾದ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಯೊಬ್ಬಳು ಮದುವೆಯಾಗಿದ್ದರು ಕೂಡ ಪರ ಪುರುಷನ ಸಂಗ ಮಾಡಿ  ಈಕೆಯ ಕಾಟ ತಾಳಲಾರದೇ ವಿವಾಹಿತ ಗೆಳತಿಯನ್ನು ಕೊಲೆ ಗೈದು ಪೋಲೀಸರ ಅತಿಥಿಯಾದ ಘಟನೆ ನಡೆದಿದೆ.

ಈಗಾಗಲೇ ಮದುವೆಯಾಗಿ ಸುಂದರ ಜೀವನ ನಡೆಸಲು ಇದ್ದ ಅವಕಾಶವನ್ನು ಬಿಟ್ಟು ಅಕ್ರಮ ಸಂಬಂದತ್ತ ಮುಖ ಮಾಡಿ ಸಾವಿನ ಮನೆಗೆ ಆಹ್ವಾನಿತಳಾದ  ಘಟನೆ  ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಾರಣ್ಣನದೊಡ್ಡಿ ಗ್ರಾಮದಲ್ಲಿ ವರದಿಯಾಗಿದೆ.

ಸೋಮವಾರ ಮಾರಣ್ಣನದೊಡ್ಡಿ ಗ್ರಾಮದ ಬಳಿ ಕನಕಪುರ (Kanakapura) ನಗರದ ಕುರುಪೇಟೆ ನಿವಾಸಿ ಶೃತಿ (32) ಎಂಬಾಕೆಯ ಮೃತದೇಹ ಪತ್ತೆಯಾಗಿದ್ದು, ಬೆಲ್ಟ್ ಒಂದರ ನೆರವಿನಿಂದ ಕತ್ತುಬಿಗಿದು ಕೊಲೆ ಮಾಡಿರುವ ಬಗ್ಗೆ  ಮೇಲ್ನೋಟಕ್ಕೆ ಪೊಲೀಸರಿಗೆ ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡ ಸಾತನೂರು ಠಾಣೆ ಪೊಲೀಸರು, ತನಿಖೆ ನಡೆಸಿದ್ದು, ಒಂದು  ದಿನದೊಳಗೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅವಿವಾಹಿತನ ಜೊತೆ ಆಕ್ರಮ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆ, ಯುವಕನಿಗೆ ನಿರಂತರ  ಮಾನಸಿಕನವಾಗಿ ಕಿರುಕುಳ ನೀಡುತ್ತಿದ್ದಳು ಎನ್ನಲಾಗಿದೆ.  ಯುವಕ ಮದುವೆಯಾಗಿ ಹೊಸ ಜೀವನ ನಡೆಸಬೇಕೆಂದು ನೂರಾರು ಕನಸು ಹೊತ್ತವನಿಗೆ ಕೂಡ ಆಕೆ  ವಿರೋಧ ವ್ಯಕ್ತಪಡಿಸಿ ಕೆಲವೊಂದು ಫೋಟೊಗಳನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್  ಮಾಡಿದ್ದಳು.

ದಿನ ಆಕೆಯ ನಾನಾ ಕಿರುಕುಳ, ವರ್ತನೆ ಕಂಡು ಬೇಸತ್ತು ಹೋದ ಯುವಕ ಆಕೆಯಿಂದ  ಅಂತರ ಕಾಯ್ದುಕೊಂಡರು ಕೂಡ, ಆಕೆ ಮಾತ್ರ ಅವನನ್ನು ಬಿಡುವ ಯಾವ ಲಕ್ಷಣಗಳೂ ಕಾಣಿಸದೇ ಇದ್ದಾಗ ಯುವಕ ಆಕೆಯನ್ನೇ ಕೊಲ್ಲುವ ತೀರ್ಮಾನ ಮಾಡಿ ಕೊಲೆ(murder) ಮಾಡಿದ್ದಾನೆ.

ಕಾರು ಚಾಲನಾಗಿದ್ದ ಹನುಮಂತ, ಈಗಾಗಲೇ ಮದುವೆಯಾಗಿದ್ದ ಶೃತಿಯನ್ನು ಎರಡೂವರೆ ವರ್ಷದ ಹಿಂದೆ ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ. ಪರಿಚಯ ಸ್ನೇಹವಾಗಿ ಬಳಿಕ ಅಕ್ರಮ ಸಂಬಂಧಕ್ಕೆ ನಾಂದಿಯಾಗಿ ಇಂದು ಸಾವಿನ ಕದ ತಟ್ಟಲು ಕಾರಣವಾಗಿದೆ.

ವಿವಾಹಿತ ಮಹಿಳೆ ಅಕ್ರಮ ಸಂಬಂಧ ಹೊಂದಿ ಆಗಾಗ ಒಂದು  ರೂಮ್ ನಲ್ಲಿ ಸೆರೆಯಾಗಿ ಪಲ್ಲಂಗದಾಟ ಕೂಡ ನಡೆಯುತ್ತಿತ್ತು. ಹೀಗಾಗಿ,  ಶೃತಿ ರೂಮ್ ಕೂಡ ಮಾಡಿದ್ದಳು ಎನ್ನಲಾಗಿದೆ. ಈ ಬಳಿಕ,  ಶೃತಿ ಬೇರೆಯವರ ಜೊತೆಗೂ ಕೂಡ ಈ ರೀತಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಯುವಕ ಆಕೆಯಿಂದ ದೂರವಾಗಲು ಆರಂಭಿಸಿದ್ದಾನೆ. ಅಷ್ಟೇ ಅಲ್ಲದೆ ಮೊಬೈಲ್ ನಂಬರ್ ಅನ್ನು ಕೂಡ ಬದಲಾಯಿಸಿಕೊಂಡಿದ್ದಾನೆ.

ಬೆನ್ನು ಬಿಡದ ಬೇತಾಳದಂತೆ ನಂಬರ್ ಸಹ ಪಡೆದುಕೊಂಡ  ಶೃತಿ, ಹನುಮಂತನಿಗೆ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದಾಳೆ. ಅಷ್ಟೇ ಅಲ್ಲದೆ, ರಾತ್ರಿ ವೇಳೆ ಕುಡಿದು ಬೆದರಿಕೆ ಹಾಕುತ್ತಿದ್ದಳು ಎನ್ನಲಾಗಿದೆ.

ಕೆಲ ದಿನಗಳ  ಹಿಂದಷ್ಟೇ ಫೇಸ್ ಬುಕ್ ನಲ್ಲಿ ತಾವಿಬ್ಬರೂ ಇದ್ದ ಫೋಟೋವನ್ನು ಕೂಡ ಫೋಸ್ಟ್ ಮಾಡಿದ್ದು, ಇದನ್ನು  ಗಮನಿಸಿದ ಹನುಮಂತನ ಕೆಲ ಸ್ನೇಹಿತರು ಕರೆ ಮಾಡಿ ಈ ವಿಚಾರವನ್ನು ಹನುಮಂತನಿಗೆ ತಿಳಿಸಿದ್ದಾರೆ. ಇದರ ಜೊತೆಗೆ ಹನುಮಂತ ಆತನ ಮದುವೆ ಬಗ್ಗೆ ಕೂಡ ಶೃತಿ ಬಳಿ ಪ್ರಸ್ತಾಪ ಮಾಡಿದ್ದ ಎನ್ನಲಾಗಿದೆ. ಬೇರೆ ಯುವತಿಯನ್ನು ಮದುವೆ ಆಗುವ ಅಭಿಲಾಷೆ ವ್ಯಕ್ತ ಪಡಿಸಿದ್ದು , ಹೀಗಾಗಿ, ಈ ಸಂಬಂಧ ಮುಂದುವರೆಸುವುದು ಬೇಡ ಎಂದು ಹನುಮಂತ ಪರಿಪರಿಯಾಗಿ ಬೇಡಿಕೊಂಡಿದ್ದ.

ಆದರೆ, ಇದಕ್ಕೆ  ಶೃತಿ ಒಪ್ಪದೆ ಯಾರನ್ನೂ ಮದುವೆಯಾಗದಂತೆ ಬೆದರಿಕೆಯೊಡ್ಡಿದ್ದಳು. ಬೇರೆ ಹುಡುಗಿಯನ್ನು ಮದುವೆಯಾಗಬಾರದು.. ಮದುವೆಯಾದರೆ  ಕೆಲ ಖಾಸಗಿ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ  ಅಪ್ಲೋಡ್ ಮಾಡುವುದಾಗಿ ಹಾಕುವುದಾಗಿ ಬೆದರಿಸಿದ್ದಳು. ಇದರಿಂದ ಹನುಮಂತ ಸಾಕಷ್ಟು ರೋಸಿಹೋಗಿದ್ದ ಎನ್ನಲಾಗಿದ್ದು, ಹೀಗಾಗಿ ಆಕೆಯನ್ನು ಕೊಲ್ಲುವ ತೀರ್ಮಾನ ಕೈಗೊಂಡಿದ್ದ.

ಡಿಸೆಂಬರ್ 25ರ ರಾತ್ರಿ ಬೈಕ್ ನಲ್ಲಿ ಕನಕಪುರದಿಂದ ಮಾರಣ್ಣನದೊಡ್ಡಿ ಗ್ರಾಮದವರೆಗೂ ಆಕೆಯನ್ನು ಕರೆದೊಯ್ದು  ಅಲ್ಲಿ ಕೆಲ ಕಾಲ ಆಕೆಯ ಜೊತೆ ಮಾತನಾಡಿ, ಬಳಿಕ,  ತನ್ನ ಬಳಿ ತೆಗೆದುಕೊಂಡು ಹೋಗಿದ್ದ ಬೆಲ್ಟ್ ನಿಂದ ರಸ್ತೆಯಲ್ಲಿಯೇ ಕತ್ತು ಬಿಗಿದು ಹತ್ಯೆ ಮಾಡಿದ್ದಾನೆ. ಕೆಲ ಗಂಟೆಗಳ ಕಾಲ ಅಲ್ಲಿಯೇ ಕಾದು ಕುಳಿತಿದ್ದು, ಬಳಿಕ ರಾತ್ರೋ ರಾತ್ರಿ ಮನೆಗೆ ವಾಪಸ್ ಮರಳಿದ್ದಾನೆ.

ಕೊಲೆಯ ಬಳಿಕ, ಈ  ಪ್ರಕರಣ ದಾಖಸಿಕೊಂಡು ತನಿಖೆ ಮಾಡಿದ್ದ ಸಾತನೂರು ಠಾಣೆ ಪೊಲೀಸರಿಗೆ ಮೃತ ದೇಹ ಗಮನಿಸಿದಾಗ ಕೊಲೆ ಎಂದು ತಿಳಿದು ಬಂದಿದೆ. ಪ್ರಕರಣ ತನಿಖೆ ನಡೆಸಿದ ಸಂದರ್ಭ  ಮೃತ ಶೃತಿಯ ಗೆಳೆಯನಾಗಿದ್ದ ಅದೇ ಕುರುಪೇಟೆ ನಿವಾಸಿಯಾಗಿದ್ದ ಹನುಮಂತ ಕೊಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಆದರೆ , ಈ ವಿಚಾರಗಳ  ಬಗ್ಗೆ ಅರಿಯದ ಪತಿ ಈಗ ಏಕಾಂಗಿ ಜೀವನ ನಡೆಸುವಂತೆ ಆಗಿದೆ.












Leave A Reply

Your email address will not be published.