Beetroot Health Benefits In Winter: ಚಳಿಗಾಲದಲ್ಲಿ ಬೀಟ್ರೂಟ್ ಸೇವನೆಯಿಂದ ಸಿಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದರೆ ತಪ್ಪದೇ ಸೇವಿಸುತ್ತೀರಿ
ಆರೋಗ್ಯಕರ ಜೀವನಶೈಲಿಗಾಗಿ ಮತ್ತು ದೇಹಕ್ಕೆ ಉತ್ತಮ ಪೋಷಣೆಯನ್ನು ಒದಗಿಸುವ ಸಲುವಾಗಿ ನಿಮ್ಮ ಆಹಾರದಲ್ಲಿ ತರಕಾರಿ ಜ್ಯೂಸ್ ಸೇರಿಸಲು ವೈದ್ಯರು ಯಾವಾಗಲೂ ಶಿಫಾರಸು ಮಾಡುತ್ತಾರೆ. ಸಾಮಾನ್ಯವಾಗಿ ತರಕಾರಿ ಜ್ಯೂಸ್ಗಳು ರುಚಿಕರವಾಗಿರುವುದಲ್ಲದೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ. ಅವುಗಳಲ್ಲಿ ಬೀಟ್ರೂಟ್ ಕೂಡ ಒಂದು. ಇದರ ಸೇವನೆಯಿಂದ ಪ್ರಯೋಜನಗಳು ಹಲವು. ಬೀಟ್ ರೂಟ್ ನ ಜ್ಯೂಸ್ ಕೂಡ ಇಂದಿನ ದಿನಗಳಲ್ಲಿ ತುಂಬಾ ಜನಪ್ರಿಯವಾಗುತ್ತಿದೆ. ಈ ಜ್ಯೂಸ್ ನ್ನು ಕುಡಿದರೆ ಅದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯ ಲಾಭಗಳು ಸಿಗುವುದು. ಏನೆಲ್ಲಾ ಪ್ರಯೋಜನಾಗಳು ಇದರಿಂದಾಗುತ್ತದೆ ಎಂದು ತಿಳಿಯೋಣ ಬನ್ನಿ.
ಉತ್ತಮ ಆರೋಗ್ಯಕ್ಕೆ ದೇಹವನ್ನು ಡಿಟಾಕ್ಸ್ ಮಾಡುವುದು ಬಹಳ ಮುಖ್ಯ. ನಿಯಮಿತವಾಗಿ ಬೀಟ್ರೂಟ್ ಸೇವನೆಯು ದೇಹವನ್ನು ಡೀಟಾಕ್ಸ್ ಮಾಡುತ್ತದೆ.
ಚರ್ಮದ ರಕ್ಷಣೆ:- ಬೀಟ್ ರೂಟ್ ಜ್ಯೂಸ್ ನ್ನು ನಿತ್ಯವೂ ಕುಡಿದರೆ ಅದರಿಂದ ವಯಸ್ಸಾಗುವ ಲಕ್ಷಣಗಳನ್ನು ತಡೆಯಬಹುದಾಗಿದೆ. ಬೀಟ್ ರೂಟ್ ನಲ್ಲಿ ಇರುವಂತಹ ಫಾಲಟೆ ಅಂಶವು ಈ ಕಾರ್ಯಕ್ಕೆ ಕಾರಣವಾಗಿದೆ. ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನಶ್ಚೇತನ ನೀಡುತ್ತದೆ. ನಿಯಮಿತವಾಗಿ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ಆರೋಗ್ಯಕಾರಿ ಮತ್ತು ಕಾಂತಿಯುತ ಚರ್ಮ ಪಡೆಯಬಹುದು.
ಬಿಪಿ ನಿಯಂತ್ರಣ: ರಕ್ತದಲ್ಲಿ ಎಂದೂ ಏರುಪೇರು ಉಂಟಾಗಬಾರದು, ಅದರಿಂದ ರಕ್ತದ ಒತ್ತಡದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ವೈದ್ಯರು ನೀಡಿರುವ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳುವುದರ ಜೊತೆಗೆ, ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಹೋದರೆ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು. ಪ್ರತಿದಿನ ಕೂಡ ಒಂದೊಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಈ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು. ಇದರಲ್ಲಿ ಹೇರಳವಾಗಿ ಕಂಡು ಬರುವ ಪೊಟ್ಯಾಸಿಯಮ್ ರಕ್ತದ ಹರಿವನ್ನು ಸರಾಗವಾಗಿಸಿ, ಬಿಪಿಯನ್ನು ನಿಯಂತ್ರಿಸುತ್ತದೆ.
ರಕ್ತಹೀನತೆ:- ಕಬ್ಬಿಣದ ಅಂಶ ಎತೇಚ್ಚವಾಗಿರುವ ಬೀಟ್ರೂಟ್ ಅನ್ನು ದಿನನಿತ್ಯ ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರ ಜೊತೆಗೆ, ಬೀಟ್ರೂಟ್ ಜ್ಯೂಸ್ ಅನ್ನು ನಿಯಮಿತವಾಗಿ ದಿನಾ ಕುಡಿಯುತ್ತಾ ಬರುವುದರಿಂದ, ರಕ್ತಹೀನತೆ ಸಮಸ್ಯೆ ಕಡಿಮೆಯಾಗುತ್ತದೆ.
ಮೆದುಳಿನ ಆರೋಗ್ಯ:- ಬೀಟ್ರೂಟ್ ಸೇವನೆಯು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ನಿಯಮಿತವಾಗಿ ಬೀಟ್ರೂಟ್ ಸೇವಿಸುವುದರಿಂದ ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ ಎನ್ನಲಾಗುತ್ತದೆ.
ಉತ್ತಮ ಜೀರ್ಣಕ್ರಿಯೆ : ಕೆಲವರಿಗೆ ಯಾವುದೇ ಆಹಾರ ಸೇವಿಸಿದಾಗ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುತ್ತದೆ. ಆದರೆ, ಬೀಟ್ರೂಟ್ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಇದರಲ್ಲಿರುವ ಫೈಬರ್ ಮತ್ತು ಪ್ರೋಬಯಾಟಿಕ್ ಗಳು ಉದರ ಆರೋಗ್ಯಕ್ಕೆ ವರದಾನವಿದ್ದಂತೆ ಎಂದು ಪರಿಗಣಿಸಲಾಗಿದೆ.
ಕ್ಯಾನ್ಸರ್:- ಆಂಟಿಆಕ್ಸಿಡೆಂಟ್ ಗುಣ ಹೊಂದಿರುವಂತಹ ಬೀಟ್ ರೂಟ್ ಜ್ಯೂಸ್ ಕ್ಯಾನ್ಸರ್ ನ್ನು ಹಲವಾರು ವಿಧದಿಂದ ತಡೆಯುವುದು. ಇದರಲ್ಲಿ ಇರುವಂತಹ ವಿಟಮಿನ್ ಸಿ ಮತ್ತು ಬೆಟಾಲೈನ್ಸ್ ಅಂಶವು ಕ್ಯಾನ್ಸರ್ ಕಾರಕವಾಗಿರುವಂತಹ ಫ್ರೀ ರ್ಯಡಿಕಲ್ ನ್ನು ದೇಹದಿಂದ ಹೊರಗೆ ಹಾಕಲು ನೆರವಾಗುವುದು. ಇದು ಡಿಎನ್ ಎ ಮತ್ತು ಅಣುಗಳಿಗೆ ಆಗುವ ಹಾನಿ ತಪ್ಪಿಸುವುದು.