ಹೊಟ್ಟೆಯಲ್ಲಿರುವ ಕಲ್ಮಶ ಹಾಗೂ ಮದ್ದನ್ನು ಹೋಗಿಸಲು ಬಳಸಿ ಈ ಮೂಲಿಕೆ
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಹೀಗಾಗಿ, ನಮ್ಮ ಬಗ್ಗೆ ನಾವೆಷ್ಟು ಕಾಳಜಿ ತೆಗೆದುಕೊಳ್ಳುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಕೆಲವೊಂದು ಬಾರಿ ಅದೆಷ್ಟೇ ಒಳ್ಳೆಯ ಆಹಾರ ಸೇವಿಸಿದ್ರು ನಮ್ಮ ಆರೋಗ್ಯ ಮಾತ್ರ ಹದಗೆಟ್ಟಿರುತ್ತೆ. ಕಾರಣ ಹೊರಗಡೆ ತಿನ್ನುವ ಆಹಾರ.
ಹೌದು. ಕೆಲವೊಂದು ಬಾರಿ ಊಟಕ್ಕೆ ಎಂದು ಹೊರಗಡೆ ಹೋದಾಗ ಅಲ್ಲಿ ಊಟದಲ್ಲಿ ಮದ್ದನ್ನು ಹಾಕಿರುತ್ತಾರೆ. ಅಥವಾ ಕೆಮಿಕಲ್ ಯುಕ್ತ ಪದಾರ್ಥದಲ್ಲಿ ಹೊಟ್ಟೆ ಹಾಳು ಮಾಡಿಕೊಳ್ಳುತ್ತೇವೆ. ಅದರಿಂದ ಅನೇಕ ರೀತಿಯ ಸಂಕಷ್ಟಗಳನ್ನು ಕೆಲವೊಂದು ಬಾರಿ ಎದುರಿಸಬೇಕಾಗಿರುತ್ತದೆ.
ಇಂತಹ ಸಂಕಷ್ಟದಿಂದ ಪಾರಾಗಲೆಂದು ಇರುವ ಮೂಲಿಕೆಯೇ ಭೇಧಿ ಸೊಪ್ಪು. ಈ ಭೇದಿ ಸೊಪ್ಪು ಅರ್ವೇ ಸೊಪ್ಪಿನ ರೀತಿಯೇ ಇರುತ್ತದೆ, ಒಂದು ತಟ್ಟೆಯಲ್ಲಿ ಭೇದಿ ಸೊಪ್ಪನ್ನು ತೆಗೆದುಕೊಂಡು ಬಂದು ಬೇಯಿಸಲು ಬಾಂಡಲೆಯಲ್ಲಿ ಹಾಕಬೇಕು ಹಾಗೂ ಅದರಿಂದ ಪಲ್ಯವನ್ನು ಮಾಡಿಕೊಳ್ಳಬೇಕು. ಪಲ್ಯವನ್ನು ಮಾಡಿ ಅದನ್ನು ಆಹಾರದಲ್ಲಿ ಸೇವಿಸಬೇಕು.
ಪಲ್ಯವನ್ನು ಸೇವಿಸಿದ ನಂತರ ಕೆಲವೊಬ್ಬರಿಗೆ ಬೇದಿಯಾಗುತ್ತದೆ. ಆಗ ಗಾಬರಿ ಆಗಬಾರದು ಹಾಗೂ ಯಾವುದೇ ರೀತಿಯ ಬೇರೆ ಆಹಾರವನ್ನು ಸೇವಿಸಬಾರದು. ಒಂದು ವೇಳೆ ವಿಪರೀತವಾಗಿ ಭೇದಿ ಆಗುತ್ತಿದ್ದರೆ ಮಾತ್ರ ಮಜ್ಜಿಗೆಯನ್ನು ಸೇವಿಸಬೇಕು. ಈ ಉಪಾಯವನ್ನು ಎರಡು ತಿಂಗಳಿಗೊಮ್ಮೆ ಮಾಡುವುದರಿಂದ ರಕ್ತವು ಶುದ್ಧಿಯಾಗುತ್ತಿರುತ್ತದೆ. ಅಷ್ಟೇ ಅಲ್ಲದೆ, ಹೊಟ್ಟೆಯಲ್ಲಿರುವ ಕಲ್ಮಶ ಹೊರ ಹೋಗುವ ಮೂಲಕ ದೇಹದಲ್ಲಿ ಆರೋಗ್ಯವು ಚೆನ್ನಾಗಿ ಇರುತ್ತದೆ.