ಛೀ | ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ರಹಸ್ಯ ವೀಡಿಯೋ ಮಾಡುತ್ತಿದ್ದ ಯುವಕ ! ನಂತರ ಏನಾಯ್ತು?

ಹೊಸಕೆರೆಹಳ್ಳಿಯ ಖಾಸಗಿ ಕಾಲೇಜಿನಲ್ಲಿ (Private College) ವಿದ್ಯಾರ್ಥಿನಿಯರ ಶೌಚಾಲಯದಲ್ಲಿ (Female Students Toilet) ವಿಡಿಯೋ (Video Record) ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ಶೌಚಾಲಯದ ಮೇಲ್ಭಾಗದಲ್ಲಿ ಕುಳಿತು ವಿದ್ಯಾರ್ಥಿನಿಯರ ಖಾಸಗಿ ದೃಶ್ಯಗಳನ್ನು ವಿದ್ಯಾರ್ಥಿ ಸೆರೆ ಹಿಡಿಯುತ್ತಿದ್ದನು ಎನ್ನಲಾಗಿದ್ದು, ವಿದ್ಯಾರ್ಥಿನಿಯರು ಈ ವಿಷಯವನ್ನು ಕಾಲೇಜಿನ ಭದ್ರತಾ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಶೌಚಾಲಯದ ಹೊರಗೆ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಗಳನ್ನು (CCTV Footage) ಪರಿಶೀಲಿಸಿದಾಗ ವಿಡಿಯೋ ಸೆರೆ ಹಿಡಿಯುತ್ತಿದ್ದ ಯುವಕ ಅದೇ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಹಾಗಾಗಿ, ಕಾಲೇಜಿನ ಆಡಳಿತ ಮಂಡಳಿ ನೀಡಿದ ದೂರಿನ ಅನ್ವಯ ಎಫ್​ಐಆರ್ (FIR) ದಾಖಲಾಗಿದೆ.ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ (Female Students Toilet) ವಿಡಿಯೋ (Video Record) ಮಾಡುತ್ತಿದ್ದ ವಿದ್ಯಾರ್ಥಿಯನ್ನು ಗಿರಿನಗರ ಪೊಲೀಸರು (Girinagara Police Station) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕಾಲೇಜಿನ ಆಡಳಿತ ಮಂಡಳಿಯ ಗಮನಕ್ಕೆ ಬರುತ್ತಿದ್ದಂತೆ, ಸಿಸಿಟಿವಿ ದೃಶ್ಯದ ಚಿತ್ರ ಪ್ರಿಂಟ್ ಹಾಕಿಸಿ ಎಲ್ಲಾ ವಿಭಾಗದ ಉಪನ್ಯಾಸಕರಿಗೆ ಕಳುಹಿಸಿ ಆ ಬಳಿಕ ವಿದ್ಯಾರ್ಥಿಯ ಗುರುತು ಪತ್ತೆ ಹಚ್ಚಲಾಗಿದೆ.

ಶುಭಂ ಎಂ ಆಜಾದ್ ಎಂಬಾತನೇ ವಿಡಿಯೋ ಸೆರೆ ಹಿಡಿಯುತ್ತಿದ್ದ ವಿಕೃತ ಮನಸ್ಸಿನ ಯುವಕ ಎಂದು ತಿಳಿದು ಬಂದಿದ್ದು, ಈತ ಇದೇ ಕಾಲೇಜಿನಲ್ಲಿ ಬಿಬಿಎ ಐದನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.ಇದರ ಜೊತೆಗೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಗ್ಗೆ ಅನುಮಾನಗಳು ಗಾಢವಾಗಿ ಕಾಡುತ್ತಿದೆ.

ಕಾಲೇಜು ಆಡಳಿತ ಮಂಡಳಿ ನೀಡಿದ ದೂರಿನಲ್ಲಿ ಇಬ್ಬರು ವಿದ್ಯಾರ್ಥಿನಿಯರ ಹೇಳಿಕೆಯನ್ನು ಉಲ್ಲೇಖಿಸಲಾಗಿದ್ದು, ನವೆಂಬರ್ 13, 2022ರಂದು ಸುಮಾರು ಸಂಜೆ 5.30ಕ್ಕೆ ಶೌಚಾಲಯಕ್ಕೆ ಹೋದಾಗ ರೂಮ್​ಗಳು ಲಾಕ್​ ಆಗಿದ್ದರಿಂದ, ಒಳಗೆ ಯಾರೋ ಇರಬಹುದು ಎಂದು ಹೊರಗೆ ಕಾಯುತ್ತಾ ನಿಂತಿದ್ದರು ಎನ್ನಲಾಗಿದೆ. ತುಂಬಾ ಸಮಯದ ಬಳಿಕ ಬಾಗಿಲು ತೆರೆಯದಿದ್ದಾಗ ಅನುಮಾನ ಬಂದ ಒಳಗಿದ್ದವರಿಗೆ ಹೊರಗೆ ಬರುವಂತೆ ಹೇಳಲಾಗಿದೆ. ಈ ವೇಳೆ ಶೌಚಾಲಯದ ಮೇಲ್ಭಾಗದಲ್ಲಿ ಯುವಕನೋರ್ವ ಕುಳಿತಿದ್ದ ವಿಚಾರ ಬೆಳಕಿಗೆ ಬಂದಿದೆ.

ಹುಡುಗಿಯರಿಬ್ಬರು ಜೋರಾಗಿ ಬಾಗಿಲು ತಳ್ಳಿದಾಗ ಶೌಚಾಲಯದ ಬಾಗಿಲು ತೆರೆದಾಗ, ಆ ಯುವಕ ನಮ್ಮಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಕಾಲೇಜು ಅಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿಯ ಗಮನಕ್ಕೆ ಈ ವಿಷಯವನ್ನು ವಿದ್ಯಾರ್ಥಿನಿಯರು ತಂದಿದ್ದಾರೆ.

ಕೂಡಲೇ ಎಚ್ಚೆತ್ತ ಸಿಬ್ಬಂದಿ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಯುವಕ ಶುಭಂ ಎಂ.ಅಜಾದ್​ನನ್ನು ಗುರುತಿಸಿದ್ದಾರೆ.ನವೆಂಬರ್ 16ರಂದು ವಿದ್ಯಾರ್ಥಿ ಶುಭಂ ವಿಚಾರಣೆ ನಡೆಸಿದ ಕಾಲೇಜು ಆಡಳಿತ ಮಂಡಳಿಗೆ ಶಾಕ್ ಎದುರಾಗಿದ್ದು, ಕಾಲೇಜಿನ ವಿದ್ಯಾರ್ಥಿನಿಯರ ಶೌಚಕ್ಕೆ ಹೋಗಿ, ಒಂದು ರೂಮಿನ ಮೇಲೆ ನಿಂತು ಅವರ ಖಾಸಗಿ ಅಂಗಗಳ ವಿಡಿಯೋ ಮಾಡಿಕೊಳ್ಳುತ್ತಿದ್ದೆ ಎಂದು ಶುಭಂ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಸುಮಾರು ಮೂರರಿಂದ ನಾಲ್ಕು ವಿದ್ಯಾರ್ಥಿನಿಯರ ಖಾಸಗಿ ವಿಡಿಯೋಗಳನ್ನು ತನ್ನ ಬಳಿಯಲ್ಲಿವೆ . ಇದೇ ರೀತಿ ತನ್ನ ಬಳಿ ಸುಮಾರು 1000 ರಿಂದ 1200 ಮಹಿಳೆಯರ ಫೋಟೋ ಮತ್ತು ವಿಡಿಯೋಗಳು ತನ್ನ ಮೊಬೈಲ್​ನಲ್ಲಿವೆ ಎಂದು ಹೇಳಿಕೊಂಡಿದ್ದಾನೆ. ವಿಚಾರಣೆ ಬಳಿಕ ಸೂಕ್ಷ್ಮ ತಿಳುವಳಿಕೆ ನೀಡಿದ ಕಾಲೇಜು ಆಡಳಿತ ಮಂಡಳಿ ಶುಭಂ ಬಳಿಯಿಂದ ಕ್ಷಮಾಪಣಾ ಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಎಚ್ಚರಿಕೆ ನೀಡಿದ್ದರು ಕೂಡ ನವೆಂಬರ್ 18 ಮತ್ತು 19ರಂದು ಕ್ಯಾಂಪಸ್​ನಲ್ಲಿರುವ ಮಹಿಳಾ ಶೌಚಾಲಯದ ಬಳಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡಿದ್ದು, ಕೆಲವು ಮಹಿಳೆಯರನ್ನು ಶುಭಂ ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಶುಭಂ ವಿರುದ್ಧ ಕಾಲೇಜು ಆಡಳಿತ ಮಂಡಳಿಯೇ ದೂರು ಸಲ್ಲಿಕೆ ಮಾಡಿದೆ.

Leave A Reply

Your email address will not be published.