Home Breaking Entertainment News Kannada Poorna: ಫಸ್ಟ್ ನೈಟ್ ಸಮಯದಲ್ಲಿ ನಟಿ ಪೂರ್ಣಗೆ ಗಂಡ ನೀಡಿದ ಗಿಫ್ಟ್‌ ಯಾವುದು ಗೊತ್ತೇ? ಕೊನೆಗೂ...

Poorna: ಫಸ್ಟ್ ನೈಟ್ ಸಮಯದಲ್ಲಿ ನಟಿ ಪೂರ್ಣಗೆ ಗಂಡ ನೀಡಿದ ಗಿಫ್ಟ್‌ ಯಾವುದು ಗೊತ್ತೇ? ಕೊನೆಗೂ ಸೀಕ್ರೇಟ್‌ ರಿವೀಲ್ ಆಯ್ತು!

Hindu neighbor gifts plot of land

Hindu neighbour gifts land to Muslim journalist

ನಟಿ ಪೂರ್ಣ ಅವರು ಮೊದಲ ರಾತ್ರಿಯ ದಿನ ತನ್ನ ಪತಿಯಿಂದ ವಿಶೇಷವಾದ ಗಿಫ್ಟೊಂದನ್ನು ಪಡೆದಿದ್ದಾರೆ. ಈ ದುಬಾರಿ ಗಿಫ್ಟ್ ಬಗ್ಗೆ ಇದೀಗ ನೆಟ್ಟಿಗರ ಮಧ್ಯೆ ಚರ್ಚೆಯಾಗುತ್ತಿದೆ.

ನಟಿ ಶಮ್ನಾ ಕಾಸಿಂ(ಪೂರ್ಣ) ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವಿವಾಹ ಶುಭ ಸಮಾರಂಭ ನೆರವೇರಿತು. ನಟಿ ತನ್ನ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಕಷ್ಟು ವೈರಲ್ ಕೂಡ ಆಗಿವೆ.

ಇದೀಗ ನಟಿ ಪೂರ್ಣಾಳ ಪತಿ ಚಿನ್ನದ ಮೇಲೆ ಭಾರೀ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮದುವೆಯ ಸಂದರ್ಭದಲ್ಲಿ ಪೂರ್ಣಾ ಅವರ ಪತಿ ನೀಡಿದ ಉಡುಗೊರೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಸದ್ದು ಮಾಡುತ್ತಿದೆ.

ನಟಿ ಶಮ್ನಾ ಕಾಸಿಂ ಅವರು ದುಬೈನ ಜೆಬಿಎಸ್ ಗ್ರೂಪ್ ಆಫ್ ಕಂಪನಿಗಳ ಸ್ಥಾಪಕ ಮತ್ತು ಸಿಇಒ ಆದ ಶಾನಿದ್ ಆಸಿಫ್ ಅಲಿ ಅವರನ್ನು ಪ್ರೀತಿಸುತ್ತಿದ್ದರು. ಹಾಗೇ ಇತ್ತೀಚೆಗೆ ಅವರಿಬ್ಬರ ಮದುವೆಯು ವಿಜ್ರಂಭಣೆಯಿಂದ ನಡೆಯಿತು. ಮದುವೆಗೂ ಮುನ್ನ ನಟಿಗೆ 2700 ಗ್ರಾಂ ಚಿನ್ನವನ್ನು ಶಾನಿದ್ ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಪೂರ್ಣಾಳ ಪತಿ ಶಾನಿದ್ ಅವಳಿಗೆ ಮೊದಲ ರಾತ್ರಿ ದುಬಾರಿ ವಜ್ರದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ, ಈ ಉಂಗುರದ ವಿಶೇಷತೆ ಏನೆಂದರೆ, ಸಾಮಾನ್ಯವಾಗಿ ಉಂಗುರವನ್ನು ನೋಡಿದರೆ ಪೂರ್ಣ ಹೆಸರು ತಲೆಕೆಳಗಾಗಿದ್ದು, ಶಾನಿದ್ ಹೆಸರನ್ನು ತೋರಿಸುವಂತೆ ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಇದಿಷ್ಟೇ ಅಲ್ಲದೆ, ನಟಿಗೆ ಪತಿ ದುಬೈನಲ್ಲಿರುವ ಐಷಾರಾಮಿ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ. ಇದರ ಮೌಲ್ಯ ಬರೋಬ್ಬರಿ ರೂ. 25 ಕೋಟಿಯವರೆಗೂ ಇರಲಿದೆ ಎಂಬ ಮಾತು ಕೇಳಿಬರುತ್ತಿದೆ. ಹಾಗೇ ಕಾರಿನ ಜೊತೆಗೆ ಕಂಪನಿಗಳ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇವುಗಳ ಮೌಲ್ಯ 30 ಕೋಟಿಯವರೆಗೂ ಇದೆ ಎಂದು ಹೇಳಲಾಗಿದೆ.