BIGG NEWS : ಕೆಲಸಕ್ಕೆ ಕುತ್ತು ತಂದ ʼ ವಾಟ್ಸಪ್ ಸ್ಟೇಟಸ್ ʼ ರಾಜ್ಯ ಸರ್ಕಾರದ ವಿರುದ್ಧ ಹಾಕಿದ್ದ ಪಂಚಾಯಿತಿ ಕ್ಲರ್ಕ್ ಸಸ್ಪೆಂಡ್
ರಾಯಚೂರು: ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದ ಪಂಚಾಯಿತಿ ಕ್ಲರ್ಕ್ ಒಬ್ಬರನ್ನು ಸರ್ಕಾರ ಅಮಾನತು ಮಾಡಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ್ ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ರಾಯಪ್ಪ ಎಂಬುವವರನ್ನು ಸಸ್ಪೆಂಡ್ ಮಾಡಲಾಗಿದೆ. ಕ್ಲರ್ಕ್ ರಾಯಪ್ಪ ಸರ್ಕಾರದ ವಿರುದ್ಧ ವಾಟ್ಸಾಪ್ ಸ್ಟೇಟಸ್ ಹಾಕಿದ್ದರು.
ಈ ಬಗ್ಗೆ ದೇವದುರ್ಗ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕಾರಣ ಕೇಳಿ ನೋಟಿಸ್ ನೀಡಿದ್ದರು. ನೋಟಿಸ್ಗೆ ಸಮಂಜಸ ಉತ್ತರ ನೀಡದ ಹಿನ್ನೆಲೆ ಕ್ಲರ್ಕ್ ಅಮಾನತು ಮಾಡಿ, ಜಾಲಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ಆದೇಶ ಹೊರಡಿಸಿದ್ದಾರೆ.