ಮಾನವನ ರುಂಡವನ್ನು ಕಚ್ಚಿಕೊಂಡು ಕತ್ತಲ ಬೀದಿಯಲ್ಲಿ ಓಡುತ್ತಿರುವ ನಾಯಿ!!

Share the Article

ನಾಯಿಗಳು ಅಂದ ಮೇಲೆ ಅವುಗಳು ಯಾವುದಾದರು ಆಹಾರವನ್ನು ಕಚ್ಚಿಕೊಂಡು ಹೋಗೋದು ಕಾಮನ್. ಅದ್ರಲ್ಲೂ ಪೇಟೆಗಳಲ್ಲಿ ಕಸದ ತೊಟ್ಟಿ ಬಳಿ ಎಸೆದಿರೋ ಆಹಾರವನ್ನು ನಾಯಿಗಳು ತಿನ್ನುವುದನ್ನು ಹೆಚ್ಚಾಗಿ ನೋಡಬಹುದು. ಆದ್ರೆ, ಇಲ್ಲೊಂದು ಕಡೆ ನಾಯಿಯನ್ನು ನೋಡಿದ ಜನಗಳೇ ತಬ್ಬಿಬ್ಬಾಗಿ ಹೋಗಿದ್ದಾರೆ. ಅಷ್ಟಕ್ಕೂ ಆ ನಾಯಿ ಮಾಡಿದ್ದಾದರೂ ಏನೂ ಎಂದು ನೀವೇ ನೋಡಿ..

ಹೌದು. ನಾಯಿಯೊಂದು ಶಿರಚ್ಛೇದಿತ ಮಾನವ ತಲೆಯನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡು ಬೀದಿಯಲ್ಲೇ ಓಡುತ್ತಿದೆ. ಆ ನಾಯಿಗೆ ಎಲ್ಲೋ ಆ ಮಾನವನ ತಲೆ ದೊರಕಿದ್ದು, ಒಳ್ಳೆಯ ಆಹಾರ ಸೇಫ್ ಜಾಗಕ್ಕೆ ಹಿಡಿದುಕೊಂಡು ಹೋಗಿ ತಿನ್ನಬೇಕು ಎಂದು ಅದರ ಮನಸ್ಥಿತಿ ಇರಬಹುದು. ಆದ್ರೆ, ಆ ನಾಯಿಯ ಬಾಯಿಯಲ್ಲಿದ್ದ ರುಂಡವನ್ನು ನೋಡಿದ ಜನ ಮಾತ್ರ ಬೆಚ್ಚಿ ಬಿದ್ದಿರೋದಂತೂ ನಿಜ.

ಈ ಘಟನೆ ಮೆಕ್ಸಿಕೋದ ಝಕಾಟೆಕಾಸ್ ನಲ್ಲಿ ನಡೆದಿದ್ದು, ಈ ದೃಶ್ಯಾವಳಿಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಧ್ಯಮಗಳ ಪ್ರಕಾರ, ಈ ಘಟನೆ ಕಳೆದ ವಾರ ನಡೆದಿದೆ. ರಾತ್ರಿಯಲ್ಲಿ ಕತ್ತಲೆಯಾದ ಬೀದಿಯಲ್ಲಿ ಮಾನವನ ತಲೆಯನ್ನು ಕಚ್ಚಿಕೊಂಡು ಓಡುವುದನ್ನು ನೋಡಿದ ನಿವಾಸಿಗಳು ಗಾಬರಿಗೊಂಡಿದ್ದಾರೆ.

https://twitter.com/SuperHuemon/status/1585989559438958595?s=20&t=OBA1pylxCiwsutNdL7fq1Q
Leave A Reply