ನಿಮ್ಮ ಆರೋಗ್ಯ ಯಾಕೋ ಸರಿ ಇಲ್ವಾ ? ಬೆಳಗ್ಗೆ ಎದ್ದ ಕೂಡಲೇ ಇದನ್ನ ಮಾಡೋದ ಖಂಡಿತಾ ಮರೀಬೇಡಿ!!!
ಮಸಾಲ ಪದಾರ್ಥಗಳು ಕೇವಲ ಅಡುಗೆಗೆ ಮಾತ್ರವಲ್ಲದೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಅವುಗಳಲ್ಲಿ ಕೊತ್ತಂಬರಿ ಬೀಜ ಅಥವಾ ಧನಿಯಾಕ್ಕೆ ಅಗ್ರಸ್ಥಾನವಿದೆ. ಪ್ರತಿಮನೆಗಳಲ್ಲೂ ಒಂದಿಲ್ಲೊಂದು ರೂಪದಲ್ಲಿ ಪ್ರತಿದಿನ ಧನಿಯಾವನ್ನು ಬಳಕೆ ಮಾಡಲಾಗುತ್ತದೆ.ಈ ಧನಿಯಾವು ಹೇಗೆಲ್ಲಾ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದು ಕೊಳ್ಳೋಣ ಬನ್ನಿ.
ಧನಿಯಾದಲ್ಲಿ ಬಯೋಆಕ್ಟಿವ್ ಫೈಟೋಕೆಮಿಕಲ್ಸ್ ಸಮೃದ್ಧವಾಗಿರುತ್ತವೆ. ಹಾಗೂ ಆಂಟಿಆಕ್ಸಿಡಂಟ್ ಗಳು ಹೇರಳವಾಗಿರುತ್ತವೆ. ಧನಿಯಾದಿಂದ ತಯಾರಿಸಿದ ನೀರು ನಮ್ಮ ದೇಹದಲ್ಲಿರುವ ಹಾನಿಕಾರಕ ಪಾರ್ಶ್ವವಾಯು, ಉಸಿರಾಟದ ಸಮಸ್ಯೆ, ರೋಗನಿರೋಧಕ ಶಕ್ತಿ ಕುಗ್ಗುವುದು, ಪಾರ್ಕಿನ್ಸನ್ ಮುಂತಾದ ಸಮಸ್ಯೆಗಳ ಅಪಾಯವನ್ನು ಇದು ಕಡಿಮೆ ಮಾಡುತ್ತದೆ. ಧನಿಯಾದಲ್ಲಿರುವ ಅನೇಕ ಅಂಶಗಳು ಮಧುಮೇಹ ಮತ್ತು ಕೊಬ್ಬಿನ ಸಮಸ್ಯೆ ನಿವಾರಣೆಗೆ ನೆರವಾಗುತ್ತವೆ.
ಧನಿಯಾದಲ್ಲಿ ಬಯೋಆಕ್ಟಿವ್ ಫೈಟೋಕೆಮಿಕಲ್ಸ್ ಸಮೃದ್ಧವಾಗಿರುತ್ತವೆ ಹಾಗೂ ಆಂಟಿಆಕ್ಸಿಡಂಟ್ ಗಳು ಹೇರಳವಾಗಿರುವುದರಿಂದ ಚಿಂತೆ, ಆತಂಕ, ಒತ್ತಡ, ಸುಸ್ತು, ಮೈಗ್ರೇನ್ ಮುಂತಾದ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ. ದೇಹವು ಉಷ್ಣವಾದಾಗ ನಿದ್ರಾಹೀನತೆಯಂತಹ ಸಮಸ್ಯೆ ಕಾಡುತ್ತದೆ. ಅಂತಹ ಸಮಯದಲ್ಲಿ ಧನಿಯಾ ನೀರನ್ನು ಕುಡಿದರೆ ತಂಪಾಗಿ, ಚೆನ್ನಾಗಿ ನಿದ್ರೆ ಬರುತ್ತದೆ. ಅಲ್ಲದೆ, ಕಿಡ್ನಿಯನ್ನು ವಿಷಮುಕ್ತಗೊಳಿಸುತ್ತದೆ. ಅಷ್ಟೇ ಅಲ್ಲ, ಗ್ಯಾಸ್ಟ್ರಿಕ್ (Gastric), ಆಸಿಡಿಟಿಗೂ ಪರಿಹಾರ ನೀಡುತ್ತದೆ.
ನಿಮಗೆ ಚರ್ಮದಸಮಸ್ಯೆ, ಕೂದಲು ಉದುರುವುದು ಮುಂತಾದೆಲ್ಲಾ ಸಮಸ್ಯೆಗಳಿಗೆ ಧನಿಯಾ ರಾಮಬಾಣ. ಧನಿಯಾದಲ್ಲಿರುವ ಕಬ್ಬಿಣಾಂಶ ಮತ್ತು ಆಂಟಿಫಂಗಲ್ ಆಂಟಿಬ್ಯಾಕ್ಟಿರಿಯಲ್ ಅಂಶಗಳು ನಮ್ಮ ಚರ್ಮದ ಆರೋಗ್ಯಕ್ಕೆ ಪೂರಕವಾಗಿವೆ. ಚರ್ಮದಲ್ಲಿ ಉಂಟಾಗುವ ವಿವಿಧ ಕಿರಿಕಿರಿ ದೂರಮಾಡುತ್ತವೆ. ಹಲವು ವಿಟಮಿನ್ ಗಳಿರುವ ಧನಿಯಾವನ್ನೂ ಕೂದಲಿಗೆ ಹಾಕುವ ಎಣ್ಣೆಯೊಂದಿಗೆ ಬೆರೆಸಿಕೊಳ್ಳುವುದರಿಂದ ಕೂದಲಿನ ಬಹಳಷ್ಟು ಸಮಸ್ಯೆಗಳು ದೂರವಾಗುತ್ತವೆ. ಕೂದಲು ಉದುರುವುದು ಕಡಿಮೆ ಆಗುವುದಲ್ಲದೆ ಹೊಸ ಕೂದಲು ಬೆಳೆಯುತ್ತವೆ. ಕೂದಲು ತುಂಡಾಗುವ ಸಮಸ್ಯೆ ಕೂಡ ಇರುವುದಿಲ್ಲ. ಇಷ್ಟೆಲ್ಲಾ ಉಪಯುಕ್ತವಾದ ಧನಿಯಾ ನೀರನ್ನು ತಯಾರಿಸುವುದು ಬಹಳ ಸುಲಭ.
ಎರಡು ಕಪ್ ನೀರಿಗೆ ಒಂದು ಚಮಚ ಧನಿಯಾ ಬೀಜಗಳನ್ನು ಹಾಕಿ ಕುದಿಸಬೇಕು. ಈಗ ನೀರಿನ ಪ್ರಮಾಣವು ಅರ್ಧಕ್ಕೆ ಬಂದಾಗ ಅಂದರೆ ಒಂದು ಲೋಟದಷ್ಟು ಆಗುವವರೆಗೆ ಕುದಿಸಬೇಕು. ಬಳಿಕ, ಸ್ವಲ್ಪ ಆರಿಸಿಕೊಂಡಾಗ ಧನಿಯಾ ನೀರು ಸಿದ್ಧ. ಈ ನೀರನ್ನು ದಿನವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ, ಇಲ್ಲವಾದರೆ ದಿನದ ಯಾವುದೇ ಸಮಯದಲ್ಲಾದರೂ ಸೇವನೆ ಮಾಡಿದರೂ ಸಮಸ್ಯೆ ಇಲ್ಲ. ಇಷ್ಟೆಲ್ಲಾ ಆರೋಗ್ಯಕರ ಪದಾರ್ಥವಾದ ಧನಿಯವು ಕೇವಲ ಮಸಾಲ ಪದಾರ್ಥವಲ್ಲದೆ ಇದು ಅನೇಕ ರೋಗಗಳನ್ನು ನಿವಾರಿಸುತ್ತದೆ.