WiFi Router : ಈ ಸಾಧನ ನಿಮ್ಮಲ್ಲಿ ಇದೆಯೇ? ಕರೆಂಟ್ ಇಲ್ಲದಾಗ ಕೂಡಾ ವೈ-ಫೈ ಕೆಲಸ ಮಾಡುತ್ತೆ!!!
ಕಾಲ ಬದಲಾದಂತೆ ಎಲ್ಲದರಲ್ಲೂ ಮಾರ್ಪಾಡು ಆಗಿ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಮನೆಯಲ್ಲೆ ಕುಳಿತು ಎಲ್ಲ ಕೆಲಸಗಳನ್ನೂ ಸರಾಗವಾಗಿ ಇಂಟರ್ನೆಟ್ ಸೌಲಭ್ಯದ ಮೂಲಕ ಮಾಡಿಕೊಳ್ಳಬಹುದಾಗಿದೆ.ಹಿಂದಿನಂತೆ ಊರೂರು ಅಲೆದು ಕೆಲಸ ಮಾಡುವ ತಾಪತ್ರಯ ಈಗಿಲ್ಲ.
ಮೊಬೈಲ್ ಎಂಬ ಸಾಧನ ಬಳಕೆಗೆ ಬಂದ ಮೇಲೆ ನವೀನ ಮಾದರಿಯ ಅನ್ವೇಷಣೆಗಳು ನಡೆದು ಕ್ಷಣ ಮಾತ್ರದಲ್ಲೆ ಎಲ್ಲ ಕಾರ್ಯಗಳು ನಡೆಯುತ್ತಿವೆ.ಕಳೆದ ಮೂರು ವರ್ಷಗಳಿಂದ ಕೊರೋನಾ ತಾಂಡವ ವಾಡಿ (Corona) ಎಲ್ಲೆಡೆ ವರ್ಕ್ ಫ್ರಮ್ ಹೋಂ (Work From Home) ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು ತಿಳಿದಿರುವ ವಿಚಾರವೇ!!
ಕೊರೋನಾ ಕಾಣಿಸಿಕೊಂಡ ಬಳಿಕ ಪ್ರತಿಯೊಬ್ಬರು ತಮ್ಮ ಕೆಲಸಗಳನ್ನು, ವ್ಯವಹಾರ (Business) ವಹಿವಾಟು ಹೆಚ್ಚಿನ ಕಾರ್ಯಗಳನ್ನು ಮನೆಯಲ್ಲಿ ಮಾಡುತ್ತಿದ್ದಾರೆ. ಪ್ರತಿಯೊಂದು ವಸ್ತುವಿಗೂ ಅಂಗಡಿಗೆ ಹೋಗುವ ಬದಲಿಗೆ ಆನ್ಲೈನ್ನಲ್ಲೇ (Online) ಖರೀದಿ (Buy) ಮಾಡುವ ಜೊತೆಗೆ ಮಾರಾಟವೂ (Sale) ಮಾಡಬಹುದಾಗಿದೆ.
ಆದರೆ ಈ ಎಲ್ಲಾ ಕಾರ್ಯಗಳು ನಡೆಯಬೇಕಾದರೆ ಇಂಟರ್ನೆಟ್ ಸೌಲಭ್ಯ ಬಹಳ ಮುಖ್ಯವಾಗಿರುತ್ತದೆ. ಆದರೆ ಕೆಲವೊಬ್ಬರು ವೈ-ಫೈ (WiFi) ಸೌಲಭ್ಯವನ್ನು ಹೊಂದಿರುತ್ತಾರೆ. ಆದರೆ ಪ್ರತೀ ದಿನವೂ ಈ ವೈ-ಫೈ ಸೌಲಭ್ಯ ಸಿಗದೇ ಇರುವ ಸಾಧ್ಯತೆ ಕೂಡ ಹೆಚ್ಚಿದೆ. ಕೆಲವೊಮ್ಮೆ ವಿದ್ಯುತ್ ಕಡಿತವಾದಾಗ ಕೂಡ ವೈ-ಫೈ ಕೂಡ ಆಫ್ ಆಗುತ್ತದೆ.
ಇದೀಗ, ವಿದ್ಯುತ್ನ ಸಹಾಯವಿಲ್ಲದೆಯೇ ವೈ-ಫೈ ಸೌಲಭ್ಯ ಪಡೆಯಬಹುದಾಗಿದೆ. ಇದೊಂದು ವಿಶಿಷ್ಟ ರೀತಿಯ ತಂತ್ರಜ್ಞಾನವಾಗಿದೆ.
ವೈ-ಫೈಗಳು ಕೇವಲ ವಿದ್ಯುತ್ನ ಸಹಾಯದಿಂದ ಕಾರ್ಯನಿರ್ವಹಿಸುವುದು ಗೊತ್ತಿರುವ ವಿಚಾರವೇ!!. ವರ್ಕ್ ಫ್ರಮ್ ಹೋಮ್ ಮಾಡುವವರಿಗೆ ವೈಫೈ ಅವಶ್ಯಕತೆ ತುಸು ಹೆಚ್ಚೆ ಬೇಕಾಗುತ್ತದೆ. ಅಂತಹ ಸಮಯದಲ್ಲಿ ಒಂದು ವೇಳೆ ವಿದ್ಯುತ್ ಕಟ್ ಆದರೆ, ವೈ-ಫೈ ಕೂಡಾ ಆಫ್ ಆಗಿ ಮತ್ತೆ ಪವರ್ ಆನ್ ಆಗುವವರೆಗೆ ಕಾಯಬೇಕು. ಪವರ್ ಆನ್ ಆಗಿ ಕೆಲವೇ ನಿಮಿಷಗಳಲ್ಲಿ ವೈ-ಫೈ ಮತ್ತೆ ಆನ್ ಆಗುತ್ತದೆ.
ಇದರಿಂದಾಗಿ ಕೆಲಸ ಮಾಡಲು ಅಡಚಣೆ ಉಂಟಾಗುತ್ತದೆ. ಒಂದು ಸಣ್ಣ ಕೆಲಸ ಮಾಡುವುದರಿಂದ ಈ ಸಮಸ್ಯೆಗೆ ಪರಿಹಾರ ಪಡೆಯಬಹುದಾಗಿದೆ. ಪವರ್ ಕಟ್ ಆದ ಸಂದರ್ಭದಲ್ಲಿ ವೈ-ಫೈ ಅಡಚಣೆಯನ್ನು ತಪ್ಪಿಸಲು ಅನೇಕ ಜನರು ಬೇರೆ ಬೇರೆ ರೀತಿಯಲ್ಲಿ ಹರಸಾಹಸ ಪಡುತ್ತಾರೆ.
ಅದರಲ್ಲೂ ಕೆಲವರು ಇನ್ವರ್ಟರ್ ಅನ್ನು ಬಳಸುತ್ತಾರೆ. ವೈಫೈ ಸಮಸ್ಯೆಯಿಂದ ಪಾರಾಗಲು ವೈ-ಫೈ ರೂಟರ್ ಡಿವೈಸ್ ಕಾರ್ಯನಿರ್ವಹಿಸುವ ಮಿನಿ ಯುಪಿಎಸ್ ಆಗಿದೆ. ಇದರ ಮೂಲಕ ಪವರ್ ಕಟ್ ಆದಾಗ ಕೂಡ ಕಾರ್ಯ ನಿರ್ವಹಿಸಬಹುದಾಗಿದೆ.