ಎಚ್ಚರ | ರಾತ್ರಿ ಏನಾದರೂ ಈ ವಸ್ತು ತಿಂದರೆ ಖಂಡಿತ ಈ ಸಮಸ್ಯೆ ಅನುಭವಿಸ್ತೀರಿ!!!
ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಸೇವಿಸುವ ಆಹಾರ ಇತಿ ಮಿತಿಯಲ್ಲಿ ಇರಬೇಕು. ರಾತ್ರಿಯ ಊಟ ನಮಗೆ ಬಹಳ ಮುಖ್ಯವಾಗಿದೆ. ರಾತ್ರಿಯ ಊಟವನ್ನು ಸರಿಯಾದ ವಿಧಾನದಲ್ಲಿ ಮಾಡಬೇಕು. ಅಲ್ಲದೆ ಊಟವನ್ನು ಅತಿರೇಖವಾಗಿ ಸೇವಿಸಿದರೆ ಆಜೀರ್ಣ ಆಗುವ ಸಾಧ್ಯತೆ ಇದೆ. ಇನ್ನು ಕೆಲವರಿಗೆ ಕೆಲವು ಆಹಾರ ಸೇವಿಸಿದರೆ ಆರೋಗ್ಯ ವ್ಯತ್ಯಾಸ ಆಗುತ್ತದೆ. ಅಲ್ಲದೆ ರಾತ್ರಿಯ ವೇಳೆ ಎಲ್ಲಾ ವಸ್ತುಗಳನ್ನು ಸೇವಿಸಬಾರದು. ಇದರಿಂದ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೌದು ಹಾಗಾಗಿ ನೀವು ರಾತ್ರಿ ಊಟದ ಬಗ್ಗೆ ಎಚ್ಚರದಿಂದಿರಿ.
ರಾತ್ರಿ ಊಟದಲ್ಲಿ ನಿಷೇದ ಆಹಾರಗಳು :
• ರಾತ್ರಿಯ ವೇಳೆ ಎಣ್ಣೆಯುಕ್ತ ಪದಾರ್ಥಗಳನ್ನು ಸೇವಿಸಬೇಡಿ. ಯಾಕೆಂದರೆ ಇದರಿಂದ ಜೀರ್ಣಕ್ರಿಯೆಗೆ ಸಮಸ್ಯೆಯಾಗುತ್ತದೆ. ಇದರಿಂದ ನಿದ್ರೆ ಸರಿಯಾಗಿ ಬರುವುದಿಲ್ಲ.
• ರಾತ್ರಿಯ ವೇಳೆ ಚಾಕೋಲೇಟ್ , ಕಾಫಿಯನ್ನು ಸೇವಿಸಬೇಡಿ. ಇದು ನಿದ್ರೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಯಾಕೆಂದರೆ ಇದರಲ್ಲಿ ಕೆಪೀನ್ ಇರುವುದರಿಂದ ಇದು ನಿದ್ರೆಹೀನತೆ ಸಮಸ್ಯೆಗೆ ಕಾರಣವಾಗುತ್ತದೆ.
• ರಾತ್ರಿ ವೇಳೆಯಲ್ಲಿ ಟೊಮೆಟೊವನ್ನು ಸೇವಿಸಬೇಡಿ. ಇದರಿಂದ ಆಸೀಡ್ ರಿಫ್ಲೆಕ್ಸ್ ಆಗುತ್ತದೆ. ಇದರಿಂದ ನಿದ್ರೆಗೆ ಭಂಗವಾಗುತ್ತದೆ.
• ರಾತ್ರಿ ಮಲಗುವಾಗ ಹಣ‍್ಣುಗಳನ್ನು ಸೇವಿಸಬೇಡಿ. ಯಾಕೆಂದರೆ ಹಣ‍್ಣುಗಳನ್ನು ತಿನ್ನುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ.
• ರಾತ್ರಿಯ ವೇಳೆ ಈರುಳ್ಳಿಯನ್ನು ಸೇವಿಸಬೇಡಿ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಇದು ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ.
• ಹೆಚ್ಚು ಸಿಹಿ ತಿನಿಸು ತಿನ್ನಬೇಡಿ. ಹೊಟ್ಟೆ ನೋವು ಕಾಡಬಹುದು. ನಿದ್ರೆ ಕೆಡಬಹುದು.
ಈ ಮೇಲಿನ ಆಹಾರವನ್ನು ರಾತ್ರಿ ಮಲಗುವ ಮುಂಚೆ ಸೇವಿಸದೇ ಇದ್ದರೆ ಉತ್ತಮ.