ಗರಿ ಗರಿಯಾದ ಮಸಾಲಾ ದೋಸೆ ನೀವು ಮಾಡಿ
ರಾತ್ರಿ ಮಲಗುವಾಗಲೇ ಏನು ತಿಂಡಿ ಮಾಡೋದು ಅಂತ ಗೃಹಿಣಿಯರಿಗೆ ಟೆನ್ಷನ್ ಆಗೋದಂತೂ ಪಕ್ಕ. ಯಾಕಂದ್ರೆ ಮನೆಯಲ್ಲಿ ಒಬ್ಬರಿಗೆ ಮಾಡಿದ ತಿಂಡಿ ಇನ್ನೊಬ್ಬರಿಗೆ ಆಗೋಲ್ಲ. ಈ ರೀತಿಯಾದಂತ ನೂರಾರು ಟೆನ್ಶನ್ ಗಳು ಇರುತ್ತವೆ. ಹೊಟೇಲ್ ತಿಂಡಿ ಅಂದ್ರೆ ಅಚ್ಚು ಮೆಚ್ಚು ಆಗಿರುವ ಎಲ್ರಿಗೂ ಮನೇಲಿ ಕೂಡ ಈಸಿಯಾಗಿ ಹೋಟೆಲ್ ಗಿಂತ ರುಚಿಕರವಾದ ದೋಸೆಯನ್ನು ನೀವೊಮ್ಮೆ ಮಾಡ್ಲೆ ಬೇಕು.
ನೀವು ಮನೆ ಗರಿ ಗರಿಯಾದ ದೋಸೆ ಮಾಡಿ. ಬೇಕಾಗುವ ಸಾಮಗ್ರಿಗಳುಅಕ್ಕಿ, ಮೆಂತ್ಯೆ ಬೀಜಗಳು, ಉದ್ದಿನ ಬೇಳೆ, ತೊಗರಿ ಬೇಳೆ,ಚನಾ ದಾಲ್, ಅವಲಕ್ಕಿ.
ಅಕ್ಕಿ ಮತ್ತು ಮೆಂತೆಯನ್ನು 4 ಗಂಟೆಗಳ ಕಾಲ ಚೆನ್ನಾಗಿ ನೀರಿನಲ್ಲಿ ನೆನೆಸಿಡಿ. ಯಾಕೆಂದ್ರೆ ದೋಸೆ ಮೃದುವಾಗಿ ಬರಬೇಕು ಅಂದ್ರೆ ಕನಿಷ್ಠ ನಾಲ್ಕು ಗಂಟೆ ಆದರೂ ನೀರಿನಲ್ಲಿ ನಡೆಯಲೇಬೇಕು. ಇದಾದ ನಂತರ ಉದ್ದಿನ ಬೆಳೆ ಮತ್ತು ತೊಗರಿ ಬೆಳೆಯನ್ನು ಒಂದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬೇಳೆ ನೆನೆದ ನಂತರ ಗ್ರೈಂಡರ್ ಅಥವಾ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ. ಆ ಹಿಟ್ಟಿಗೆ ಅವಲಕ್ಕಿ ಮತ್ತು ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ರುಬ್ಬಿ ಮಿಶ್ರಣ ಮಾಡಿ. ಉದ್ದಿನಬೇಳೆ ಹಿಟ್ಟಿಗೆ ರುಬ್ಬಿದ ಅಕ್ಕಿ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿ. ಹಿಟ್ಟನ್ನು ಸ್ವಲ್ಪ ಬಿಸಿ ಜಾಗದಲ್ಲಿ ಇದ್ದರೆ ಒಳ್ಳೆಯದು. ಇದಾದ ನಂತರ ಮತ್ತೊಮ್ಮೆ ಎಲ್ಲದು ಮಿಶ್ರಣ ಮಾಡಿ. ದೋಸೆಗೆ ಬೇಕಾಗುವಷ್ಟು ಉಪ್ಪನ್ನು ಹಾಕಿದರೆ ಮಸಾಲೆ ದೋಸೆ ಮಾಡಲು ಸಿದ್ಧವಾಗಿರುತ್ತದೆ.
ಒಳ್ಳೆ ರೀತಿಯ ತವಾ ಅಥವಾ ಕಾವರಿಯನ್ನು ಬಳಸಿ. ಇಲ್ಲದಿದ್ದಲ್ಲಿ ದೋಸೆ ಹಿಟ್ಟು ಎಷ್ಟು ಚೆನ್ನಾಗಿ ಬಂದಿದ್ದರೂ ಕೂಡ ದೋಸೆ ಚೆನ್ನಾಗಿ ಬರುವುದಿಲ್ಲ. ಹೀಗಾಗಿ ದೋಸೆಯನ್ನು ಹಾಕುವ ಮೊದಲು ಈರುಳ್ಳಿಯಲ್ಲಿ ತವಾಕ್ಕೆ ಎಣ್ಣೆಯನ್ನು ಹಚ್ಚಿ. ದೋಸೆ ರುಚಿಕರವಾಗಿ ಬರುತ್ತದೆ.