BBK9 : ಮಧ್ಯರಾತ್ರೀಲಿ ರೂಪೇಶ್ ಶೆಟ್ಟಿ ಸಾನ್ಯ ಲವ್ವಿ ಡವ್ವಿ!!!

ಬಿಗ್‌ಬಾಸ್‌ ಮನೆಯ ಹೊಸ ಲವ್ ಬರ್ಡ್ಸ್ ಆಗಿರುವ ರೂಪೇಶ್ ಮತ್ತು ಸಾನ್ಯಾ ಉತ್ತಮ ಗೆಳೆಯರೆಂದು ಮೇಲ್ನೋಟಕ್ಕೆ ಮಾತನಾಡುತ್ತಾ ಹೇಳಿದರೂ ಅವರಿಬ್ಬರ ಆತ್ಮೀಯತೆ ನೋಡಿದರೆ ಯಾವುದೇ ಪ್ರೇಮಿಗಳಿಗೂ ಅವರ ವರ್ತನೆ ಕಮ್ಮಿ ಇಲ್ಲ ಎಂದೇ ಹೇಳಬಹುದು. ಇಬ್ಬರೂ ಒಬ್ಬರ ಮೇಲೆ ಒಬ್ಬರೂ ತುಂಬಾ ಪೊಸೆಸಿವ್ ನೆಸ್ ಹೊಂದಿದ್ದಾರೆ ಎಂದು ಬಿಗ್ ಬಾಸ್ ಮನೆಯಲ್ಲಿ ಕೆಲವೊಂದು ಸಂದರ್ಭದಲ್ಲಿ ಕಾಣಿಸುತ್ತದೆ. ಓಟಿಟಿಯಿಂದ ಶುರುವಾದ ಸ್ನೇಹ ಈಗ ಟಿವಿ ಬಿಗ್‌ಬಾಸ್‌ನಲ್ಲೂ ಕೂಡಾ ಮುಂದುವರೆದಿದೆ.

ಕಿಚ್ಚ ಸುದೀಪ್ ಅವರು ವಾರಾಂತ್ಯದಲ್ಲಿ ರೂಪೇಶ್‌ಗೆ ಹುಡುಗಿಯರ ಯುನಿವರ್ಸಿಟಿ ಎಂದು ಕಾಲೆಳೆದಿದ್ದರು. ಈ ಬೆನ್ನಲ್ಲೇ ಇದೀಗ ಮಧ್ಯರಾತ್ರಿ ಸಾನ್ಯಾಳ ಆಜ್ಞೆಯಂತೆ ರೂಪೇಶ್ ತಬ್ಬಿಕೊಂಡಿದ್ದಾರೆ. ಮಧ್ಯರಾತ್ರಿ ಸನ್ನೆ ಭಾಷೆಯಲ್ಲಿ ಇಬ್ಬರೂ ಯಾರಿಗೂ ಕೇಳಿಸದಂತೆ ಮಾತನಾಡಿಕೊಂಡು, ನಂತರ ರೂಪೇಶ್ ತನ್ನ ಬೆಡ್ ನಿಂದ ಇಳಿದು ಸಾನ್ಯಾ ಮಲಗಿರೋ ಬೆಡ್ ಹತ್ತಿರ ಬಂದು, ನಂತರ ಇಬ್ಬರೂ ಗುಡ್ ನೈಟ್ ಹಗ್ ಕೊಟ್ಟು ಮಲಗಿದ್ದಾರೆ. ಇದು ಅಷ್ಟಕ್ಕೆ ನಿಂತಿಲ್ಲ. ಮರುದಿನ ಯಾಕೆ ನನ್ನ ತಬ್ಬಿಕೊಂಡಿಲ್ಲ ಪ್ರತಿದಿನ ರಾತ್ರಿ ನನಗೆ ಹಗ್ ಕೊಟ್ಟು ಮಲಗಬೇಕು ಅಂತಾ ಹೇಳಿದ್ದೆ ಅಲ್ವಾ ಅಂತಾ ರೂಪೇಶ್‌ಗೆ ಸಾನ್ಯಾ ಕ್ಲಾಸ್ ತಗೊಂಡಿದ್ದಾರೆ.

ಬೆಳಿಗ್ಗೆ ವರ್ಕೌಟ್ ಮಾಡುವ ಸಂದರ್ಭದಲ್ಲೂ ಸಾನ್ಯಾಳನ್ನು ರೂಪೇಶ್ ಮತ್ತೆ ಎತ್ತಿಕೊಂಡಿದ್ದಾರೆ. ಈ ಸ್ನೇಹ ( ಪ್ರೇಮ?) ಎಲ್ಲಿಗೆ ಹೋಗಿ ಮುಟ್ಟುತ್ತೆ ಎಂಬುದನ್ನು ವೀಕ್ಷಕರು ಕಾದು ನೋಡಬೇಕಿದೆ.

Leave A Reply

Your email address will not be published.