ವಿಜ್ಞಾನಿಗಳಿಂದ ಶಾಕಿಂಗ್ ಮಾಹಿತಿ | ತಾಯಿಯ ಎದೆಹಾಲಿನಲ್ಲಿ ಕಂಡು ಬಂದಿದೆ ಮೈಕ್ರೋಪ್ಲಾಸ್ಟಿಕ್ !

ಪ್ಲಾಸ್ಟಿಕ್ ಅಂದರೆ ನಮಗೆ ಹಗುರವಾದ ಅಗ್ಗವಾದ ವಸ್ತು ಆದರೆ ಪ್ಲಾಸ್ಟಿಕ್‌ಮಯವಾದ ಜಗತ್ತಿನಲ್ಲಿ ಪ್ಲಾಸ್ಟಿಕ್‌ನ ಅಪಾಯಗಳು ನಮ್ಮ ದೇಹದೊಳಗೆ ಹೊಕ್ಕಿರುವುದು ನಿಮಗೆ ಗೊತ್ತಿದೆಯೇ? ನಾವು ಉಪಯೋಗಿಸುವ ಪಾತ್ರೆಗಳು, ಪೀಠೋಪಕರಣಗಳು, ಪ್ಯಾಕೆಟ್‌ಗಳು ಎಲ್ಲೆಲ್ಲಿಯೂ ಪ್ಲಾಸ್ಟಿಕ್‌ಗಳ ರಾಶಿ.

ಇತ್ತೀಚಿಗೆ ಇಟಾಲಿಯನ್ ವಿಜ್ಞಾನಿಗಳು ಶಾಕಿಂಗ್ ವಿಚಾರ ಬಹಿರಂಗ ಪಡಿಸಿದ್ದಾರೆ. ತಾಯಿಯ ಎದೆ ಹಾಲಿನಲ್ಲಿ ಮೈಕ್ರೋಪ್ಲಾಸ್ಟಿಕ್ ಅಂಶವಿದೆ ಎಂಬ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಹೆರಿಗೆಯಾದ ಒಂದು ವಾರದ ನಂತರ ಇಟಲಿಯ ರೋಮ್‌ನಲ್ಲಿ 34 ಆರೋಗ್ಯವಂತ ತಾಯಂದಿರಿಂದ ಎದೆ ಹಾಲಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ ಮತ್ತು ಅವರಲ್ಲಿ 75 ಪ್ರತಿಶತದಷ್ಟು ಜನರು ಮೈಕ್ರೋಪ್ಲಾಸ್ಟಿಕ್‌ಗಳನ್ನು ಹೊಂದಿದ್ದರು ಎಂದು ತಿಳಿದುಬಂದಿದೆ. ವಿಜ್ಞಾನಿಗಳು ಮಾನವನ ಎದೆ ಹಾಲಿನಲ್ಲಿ ಮೈಕ್ರೋಪ್ಲಾಸ್ಟಿಕ್ ಅನ್ನು ಮೊದಲ ಬಾರಿಗೆ ಕಂಡುಹಿಡಿದಿದ್ದಾರೆ. ಇದು ನವಜಾತ ಶಿಶುಗಳಿಗೆ ಆರೋಗ್ಯದ ಪರಿಣಾಮಗಳ ಬಗ್ಗೆ ಸಂಶೋಧಕರಲ್ಲಿ ಕಳವಳವನ್ನು ಉಂಟುಮಾಡಿದೆ.

ಸೂಕ್ಷ್ಮ ಪ್ಲಾಸ್ಟಿಕ್ ಕಣಗಳ ಪತ್ತೆ :
34 ಆರೋಗ್ಯವಂತ ತಾಯಂದಿರು (Mother) ಹಾಲಿನ ಮಾದರಿ ಹಾಗೂ ಇಟಲಿಯಲ್ಲಿ ಮಗುವಿಗೆ ಜನ್ಮ ನೀಡಿದ ತಾಯಂದಿರು ಹಾಲಿನ ಮಾದರಿಗಳನ್ನು ಪರಿಶೀಲನೆ ಮಾಡಿದ ವಿಜ್ಞಾನಿಗಳು ಅವುಗಳಲ್ಲಿ ಮುಕ್ಕಾಲು ಭಾಗದಲ್ಲಿರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳನ್ನು ಪತ್ತೆಹಚ್ಚಿದ್ದಾರೆ. ನವಜಾತ ಶಿಶುಗಳು ವಿಶೇಷವಾಗಿ ರಾಸಾಯನಿಕ ಮಾಲಿನ್ಯಕಾರಕಗಳಿಗೆ ತುತ್ತಾಗುತ್ತವೆ ಮತ್ತು ಹೆಚ್ಚಿನ ಸಂಶೋಧನೆಯು ತುರ್ತಾಗಿ ಅಗತ್ಯವಿದೆ ಎಂದು ಸಂಶೋಧಕರ ತಂಡವು ಗಮನಿಸಿದೆ.

ಮೈಕ್ರೋಪ್ಲಾಸ್ಟಿಕ್ ಗಳು 5 ಮಿಮೀ ಗಿಂತ ಕಡಿಮೆ ಉದ್ದವಿರುವ ಯಾವುದೇ ರೀತಿಯ ಪ್ಲಾಸ್ಟಿಕ್ ನ ತುಣುಕುಗಳಾಗಿವೆ. ಆದರೆ ಜೀವಂತ ಮಾನವರ ಮೇಲೆ ಇದರ ಪರಿಣಾಮವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇತ್ತೀಚಿನ ಅಧ್ಯಯನದೊಂದಿಗೆ, ವಿಜ್ಞಾನಿಗಳು ಮೈಕ್ರೋಪ್ಲಾಕ್‌ಗಳಿಂದ ಉಂಟಾಗುವ ಅಪಾಯಗಳ (Danger) ಬಗ್ಗೆ ಮಾಹಿತಿ ನೀಡಿದ್ದಾರೆ. ತಾಯಿಯ ಆಹಾರ (Food) ಮತ್ತು ಪಾನೀಯ ಸೇವನೆ ಮತ್ತು ಪ್ಲಾಸ್ಟಿಕ್ ಹೊಂದಿರುವ ವೈಯಕ್ತಿಕ ನೈರ್ಮಲ್ಯ ಉತ್ಪನ್ನಗಳ ಬಳಕೆಯನ್ನು ದಾಖಲಿಸಿದ್ದಾರೆ. ಆದರೆ ಮೈಕ್ರೋಪ್ಲಾಸ್ಟಿಕ್ ಗಳ ಉಪಸ್ಥಿತಿಯೊಂದಿಗೆ ಅವರು ಯಾವುದೇ ಸಂಬಂಧವನ್ನು ಕಂಡುಹಿಡಿಯಲಿಲ್ಲ. ಆದ್ದರಿಂದ, ಪರಿಸರದಲ್ಲಿ ಮೈಕ್ರೋಪ್ಲಾಸ್ಟಿಕ್ ಗಳ ಸರ್ವವ್ಯಾಪಿ ಉಪಸ್ಥಿತಿಯನ್ನು ಇದು ಸೂಚಿಸುತ್ತದೆ ತಿಳಿಸಿದ್ದಾರೆ.

ಇಟಲಿಯ ಯೂನಿವರ್ಸಿಟಾ ಪಾಲಿಟೆಕ್ನಿಕಾ ಡೆಲ್ಲೆ ಮಾರ್ಚೆಯಲ್ಲಿ ಡಾ.ವ್ಯಾಲೆಂಟಿನಾ ನೊಟಾರ್ಸ್ಟೆಫಾನೊ ಪ್ರಕಾರ ಗರ್ಭಧಾರಣೆ ಸಮಯದಲ್ಲಿ ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದರಿಂದ ಸಮಸ್ಯೆ
ಎದೆ ಹಾಲಿನಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವಿಕೆಯ ಪುರಾವೆಯು ಶಿಶುಗಳ (Infants) ಅತ್ಯಂತ ದುರ್ಬಲ ಜನಸಂಖ್ಯೆಯ ಬಗ್ಗೆ ನಮ್ಮ ಹೆಚ್ಚಿನ ಕಾಳಜಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ. ಗರ್ಭಧಾರಣೆ ಮತ್ತು ಹಾಲುಣಿಸುವ ಸಮಯದಲ್ಲಿ ಈ ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವ ವಿಧಾನಗಳನ್ನು ನಿರ್ಣಯಿಸುವುದು ನಿರ್ಣಾಯಕವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಜ್ಞರ ಸಲಹೆಯ ಪ್ರಕಾರ ಎದೆಹಾಲು ಶಿಶುಗಳಿಗೆ ಬಹಳ ಮುಖ್ಯ ಮತ್ತು ಅಗತ್ಯ ಆಹಾರ ಆಗಿದೆ. ಹಾಗೆಂದು ಅಧ್ಯಯನಗಳು ಮಕ್ಕಳಿಗೆ ಹಾಲುಣಿಸುವಿಕೆಯನ್ನು ಕಡಿಮೆ ಮಾಡಬಾರದು, ಬದಲಿಗೆ ಮಾಲಿನ್ಯವನ್ನು ಕಡಿಮೆ ಮಾಡುವ ಕಾನೂನುಗಳನ್ನು ಉತ್ತೇಜಿಸಲು ರಾಜಕಾರಣಿಗಳಿಗೆ ಒತ್ತಡ ಹೇರಲು ಸಾರ್ವಜನಿಕ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿರುತ್ತಾರೆ.

ಪಾಲಿಮರ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಎದೆಹಾಲಿನಲ್ಲಿ ಪಾಲಿಥೀನ್, ಪಿವಿಸಿ ಮತ್ತು ಪಾಲಿಪ್ರೊಪಿಲೀನ್‌ನಿಂದ ಮಾಡಿದ ಮೈಕ್ರೋಪ್ಲಾಸ್ಟಿಕ್‌ಗಳನ್ನು ಕಂಡುಹಿಡಿದಿದೆ, ಇವೆಲ್ಲವೂ ಹೆಚ್ಚಾಗಿ ಪ್ಯಾಕೇಜಿಂಗ್‌ನಲ್ಲಿ ಕಂಡುಬರುತ್ತವೆ. ಸಂಶೋಧಕರು 2 ಮೈಕ್ರಾನ್‌ಗಳಿಗಿಂತ ಕಡಿಮೆ ಗಾತ್ರದ ಕಣಗಳನ್ನು ವಿಶ್ಲೇಷಿಸಲು ಸಾಧ್ಯವಾಗಲಿಲ್ಲ ಮತ್ತು ಸಣ್ಣ ಪ್ಲಾಸ್ಟಿಕ್ ಕಣಗಳು ಅಸ್ತಿತ್ವದಲ್ಲಿವೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಅಧ್ಯಯನದ ನಂತರ ಇದರ ಮುನ್ಸೂಚನ ಕ್ರಮಗಳನ್ನು ಕಂಡುಹಿಡಿಯಬಹುದಾಗಿದೆ. ಮತ್ತು ಪ್ಲಾಸ್ಟಿಕ್ ಮುಕ್ತ ಜಗತ್ತಿನಿಂದ ಅಪಾಯದಿಂದ ತಪ್ಪಿಸಿಕೊಳ್ಳಬಹುದು ಎಂದು ಒಟ್ಟಾರೆಯಾಗಿ ಟೀಕೆ ಮಾಡಿರುತ್ತಾರೆ.

Leave A Reply

Your email address will not be published.