Home Entertainment ಶೀಘ್ರವೇ ಅರುಂಧತಿ ಕಲ್ಯಾಣೋತ್ಸವ! ಬಂಟರ ಹುಡುಗಿಗೆ ಚಿನ್ನದ ಹುಡುಗ | ಸ್ವೀಟಿ ಶೆಟ್ಟಿ ಮದುವೆಯಾಗುವ ಹುಡುಗ...

ಶೀಘ್ರವೇ ಅರುಂಧತಿ ಕಲ್ಯಾಣೋತ್ಸವ! ಬಂಟರ ಹುಡುಗಿಗೆ ಚಿನ್ನದ ಹುಡುಗ | ಸ್ವೀಟಿ ಶೆಟ್ಟಿ ಮದುವೆಯಾಗುವ ಹುಡುಗ ಯಾರು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

ಸಿನಿಮಾ ಫೀಲ್ಡ್ ನಲ್ಲಿ (Film Industry) ಈಗ ಮದುವೆಯ (Marriage) ಮಾತೊಂದು ಭಾರೀ ಸೌಂಡ್ ಮಾಡ್ತಿದೆ. ಈ ಸುದ್ದಿ ಟಾಲಿವುಡ್‌ನಲ್ಲಿ (Tollywood) ಕೇಳಿ ಬಂದಿದ್ದರೂ, ಕನ್ನಡಿಗರು (Kannadigas) ಕೂಡಾ ಈ ಮದುವೆ ಸುದ್ದಿ ಕೇಳಿ ಸಖತ್ ಖುಷಿಗೊಂಡಿದ್ದಾರೆ.

ಭಾರೀ ಸೌಂಡ್ ಮಾಡ್ತಿರೋ , ಟಾಲಿವುಡ್‌ ನಿಂದ ಬರುತ್ತಿರುವ ಮದುವೆ ಸುದ್ದಿ ಬೇರೆ ಯಾರದ್ದೋ ಅಲ್ಲ, ತೆಲುಗಿನ ಖ್ಯಾತ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿ (Anushka Shetty) ಅವರದ್ದು!

ಹೌದು, ನಟಿ ಅನುಷ್ಕಾ ಶೆಟ್ಟಿ ಮದುವೆ ಆಗುತ್ತಿದ್ದಾರಂತೆ. ಈ ಮಾತು ತುಂಬಾ ವರ್ಷಗಳಿಂದ ಕೇಳಿ ಬರುತ್ತಾ ಇತ್ತು. ಇದರ ಮಧ್ಯದಲ್ಲು ಬಾಹುಬಲಿ ಸಿನಿಮಾ ಸಂದರ್ಭದಲ್ಲಂತೂ ಅನುಷ್ಕಾ ಶೆಟ್ಟಿ ಹಾಗೂ ನಟ ಪ್ರಭಾಸ್ (Prabhas) ಪ್ರೀತಿಸುತ್ತಿದ್ದಾರಂತೆ, ಇನ್ನೇನು ಮದುವೆ ಆಗುತ್ತಾರಂತೆ ಅಂತೆಲ್ಲ ಮಾತುಗಳು ಬಂತು. ಆದರೆ ಈ ಬಾರಿ ಅನುಷ್ಕಾ ಮದುವೆ ವಿಚಾರ ಸತ್ಯ ಅಂತಿದೆ ಟಾಲಿವುಡ್ ಮೂಲಗಳು. ಅಂದಹಾಗೆ ಅನುಷ್ಕಾ ಕೈ ಹಿಡಿಯುತ್ತಿರೋದು ಹುಡುಗ, ಮನಕದ್ದ ಆ ಚೆಲುವ ಯಾರು? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ದಕ್ಷಿಣ ಭಾರತದ ಖ್ಯಾತ ನಟಿಯ ಮದುವೆಯ ಸುದ್ದಿ ಜೋರಾಗಿ ಹರಡುತ್ತಿದೆ. ಅನುಷ್ಕಾ ವಯಸ್ಸು 40 ಆದರೂ ಇನ್ನೂ ಆಕೆ ಯಾಕೆ ಮದುವೆಯಾಗಿಲ್ಲ ಎಂಬ ಕೊರಗು ಆಕೆಯ ಅಭಿಮಾನಿಗಳಿಗಿತ್ತು. ಈ ಬಾರಿ ಅನುಷ್ಕಾ ಗುಡ್ ನ್ಯೂಸ್ ನೀಡಿದ್ದಾರೆ ಎಂದೇ ಹೇಳಬಹುದು.

ಸ್ವೀಟಿ ಶೆಟ್ಟಿ ಅಲಿಯಾಸ್ ಅನುಷ್ಕಾ ಶೆಟ್ಟಿ ಹೈದ್ರಾಬಾದ್ ಮೂಲದ ಖ್ಯಾತ ಉದ್ಯಮಿಯೋರ್ವರನ್ನು ವಿವಾಹವಾಗುತ್ತಿದ್ದಾರಂತೆ. ಆತ ಚಿನ್ನದ ವ್ಯಾಪಾರಿಯಾಗಿದ್ದು, ಸಾಕಷ್ಟು ಚಿನ್ನದ ಅಂಗಡಿಗಳ ಒಡೆಯ ಎನ್ನಲಾಗ್ತಿದೆ. ಅವರೊಂದಿಗೆ ಅನುಷ್ಕಾ ಶೆಟ್ಟಿ ಶೀಘ್ರವೇ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಅನುಷ್ಕಾ ಶೆಟ್ಟಿ ಶೀಘ್ರವೇ ಮದುವೆ ಆಗಲಿದ್ದಾರೆ ಅಂತ ತೆಲುಗು ಸಿನಿಮಾ ಮೂಲಗಳು ಹೇಳುತ್ತಿವೆ. ಆದರೆ ಅಧಿಕೃತ ಮಾಹಿತಿ ಇನ್ನಷ್ಟೇ ಅವರ ಕುಟುಂಬದ ಮೂಲಗಳಿಂದ ತಿಳಿದು ಬರಬೇಕಿದೆ.